ಬಿದಿಗೆ ಚಂದ್ರಮ
ಆ ರಾತ್ರಿಯಲ್ಲಿ ನಿಂತಿದೆ
ಚಂದಿರ ಸರೋವರದ ಬಿಂಬ
ಜೀವನ ನಡೆಸಲು ಕಲಿತೆ ಪಾಠ
ಚಂದಿರ ಹೇಳಿದ ಮಾತುಗಳು
ಸುಂದರ ಬೆಳಕಿನಾಟ ತಂಪುಣಿಸುವ ಶಶಿ
ಬೆಳೆಯಲು ಸಾಧ್ಯ ಹಂತ ಹಂತವಾಗಿ ಕವಿ
ಇಂದು ಬಿದಿಗೆ ನಾನು
ಚಂದ್ರಮ ಸಖಿ
ಮುಂದೆ ದಿನ ತುಂಬಿದ ದಾಗ ಪೂರ್ಣ ಚಂದಿರ
ಬೆಳವಣಿಗೆಗೆ ಪೂರಕ ವಾತಾವರಣ
ಜ್ಞಾನದ ಬೆಳಕಿನರವಿ ಕಿರಣಗಳು
ಇದ್ದಾಗಲೇ ಪರಿಪೂರ್ಣ ಜೀವನ
ಹೊಸದೊಂದು ಭಾವ ಕಿರಣ
-ಕವಿತಾ ಮಳಗಿ, ಕಲಬುರ್ಗಿ