ಮಸ್ಕಿ : ಮಸ್ಕಿ ಕ್ಷೇತ್ರದ ಉಪ ಚುನಾವಣೆ ಆದಷ್ಟು ಬೇಗನೆ ಘೋಷಣೆಯಾಗುವ ಸಾದ್ಯತೆ ಇದ್ದು ಪಕ್ಷದ ಕಾರ್ಯಕರ್ತರು ಮೈ ಮರೆಯದೆ ಮತದಾರ ಮುಂದೆ ಹೋಗಲು ಸಜ್ಜಾಗಿ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ ಎಚ್ಚರಿಸಿದರು.
ತಾಲೂಕಿನ ದೇಸಾಯಿ ಬೋಗಾಪೂರ ಹಾಗು ಇತರ ಗ್ರಾಮಗಳಲ್ಲಿ ಶನಿವಾರ ಸಂಚರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷದ ವರಿಷ್ಠರು ಸೂಕ್ತ ಅಭ್ಯಾರ್ಥಿಯನ್ನು ಕಣಕ್ಕಿಳಿಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ. ಅಬ್ಯಾರ್ಥಿ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳದೆ ಕಾಂಗ್ರೆಸ್ ವಶದಲ್ಲಿದ್ದ ಮಸ್ಕಿ ಕ್ಷೇತ್ರವನ್ನು ಮತ್ತೇ ಕಾಂಗ್ರೆಸ್ ಪಕ್ಷಕ್ಕೆ ಪಡೆಯುವ ಮುಖಾಂತರ ನಮ್ಮ ಅಸ್ಥಿತ್ವ ತೋರಿಸೋಣ ಎಂದು ಯದ್ದಲದಿನ್ನಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜಿ.ಪಂಮಾಜಿ ಸದಸ್ಯ ಎಚ್.ಬಿ.ಮುರಾರಿ, ಶ್ರೀಶೈಲಪ್ಪ ಬ್ಯಾಳಿ, ಟಿಕೇಟ್ ಆಕಾಂಕ್ಷಿ ರಾಘವೇಂದ್ರ ನಾಯಕ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮ ದಲ್ಲಿ ನೂರಾರು ಕಾರ್ಯಕರ್ತರು ಸೇರಿದ್ದರು.