ಉತ್ತರ ಪ್ರದೇಶ ಸರ್ಕಾರ ವಜಾ ಮಾಡಿ ಸಿಪಿಐ (ಎಂಎಲ್) ಒತ್ತಾಯ

ಮಸ್ಕಿ: ಉತ್ತರ ಪ್ರದೇಶದ ಹತ್ರಾಸದಲ್ಲಿ ದಲಿತ ಯುವತಿ ಮೇಲೆ ನಡೆದಿರುವ ಹತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ರನ್ನು ಬಂಧಿಸಲು ಮುಖ್ಯಮಂತ್ರಿ ಆದಿತ್ಯನಾಥ ಸರ್ಕಾರ ವಿಫಲವಾಗಿದೆ. ಕೂಡಲೇ ಸರ್ಕಾರ ವನ್ನು ವಜಾ ಗೋಳಿಸಬೇಕು ಮತ್ತು ಅತ್ಯಾಚಾರಿಗಳನ್ನು ಬಂಧಿಸಬೇಕೆಂದು ಸಿಪಿಐ (ಎಂಎಲ್) ಹಾಗೂ ಎಂ.ಆರ್.ಎಚ್.ಎಸ್ ಸಂಸ್ಥಾಪಕ ತಾಲೂಕು ಸಮಿತಿ ಮುಖಂಡರು ಒತ್ತಾಯಿಸಿದರು.ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಎರಡು ಸಮಿತಿಯ ಮುಖಂಡರು ಪ್ರತೇಕವಾಗಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಿಪಿಐ (ಎಂಎಲ್) ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ, ಕಾರ್ಯದರ್ಶಿ ಹುಚ್ಚರಡ್ಡಿ ಮೆದಕಿನಾಳ, ಎಂ.ಆರ್.ಎಚ್.ಎಸ್ ನ ಶರಣಪ್ಪ ತೆರಿಬಾವಿ, ಬಸವಲಿಂಗಪ್ಪ ನೀರಲಕೇರಿ, ಶರಣಪ್ಪ ಗುಡಿಹಾಳ ಶಿವಕುಮಾಎ ದೇವರಮನಿ ಭಾಗವಹಿಸಿದ್ದರು.

Don`t copy text!