ಗುರುಕುಲ ಪಾಠಶಾಲೆ ಉದ್ಘಾಟನೆ

ಗುರುಕುಲ ಪಾಠಶಾಲೆ ಉದ್ಘಾಟನೆ
e-ಸುದ್ದಿ , ಮಸ್ಕಿ

ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ). ಮಸ್ಕಿ ವತಿಯಿಂದ ಸ್ಥಾಪಿಸಲ್ಪಟ್ಟ ಅಭಿನಂದನ್ ಗುರುಕುಲ ಪಾಠಶಾಲೆ ಯನ್ನು ಪರಮಪೂಜ್ಯ ಶ್ರೀ. ಷ.ಬ್ರ.ವರರುದ್ರಮುನಿ ಶಿವಾಚಾರ್ಯರು ಉದ್ಘಾಟನೆಯನ್ನು ನೆರವೇರಿಸಿದರು.

ನಂತರ ಮಾತನಾಡಿದ ಶ್ರೀಗಳು ಅಭಿನಂದನ್ ಸಂಸ್ಥೆಯು ಆರಂಭಿಸಿದ ಈ ಗುರುಕುಲ ಪಾಠಶಾಲೆ ಮಸ್ಕಿಯ ಹೆಮ್ಮೆ ಹಾಗೂ ಅಭಿನಂದನ್ ಸಂಸ್ಥೆಯ ತಮ್ಮ ಸೇವೆಗಳ ಮೂಲಕ ನಾಡಿಗೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ದೇಶದ ಪುರಾತನ ಭಾಷೆಯಾದ ಸಂಸ್ಕೃತ ಹಾಗೂ ವೇದ ಆಗಮನ, ಜ್ಯೋತಿಷ್ಯ ಶಾಸ್ತ್ರದ ಅಧ್ಯಯನಕ್ಕಾಗಿ, ಪ್ರವಚನ ಜನನಿ ಜನ್ಮ ಭೂಮಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮಕ್ಕಳನ್ನು ಪರದೇಶಗಳಿಗೆ ಕಳಿಸಿ, ಪರದೇಶಿಗಳ ಆಗುತ್ತಿರುವ ಇವತ್ತಿನ ಪಾಲಕರು ಮೊದಲು ತಮ್ಮ ಮಕ್ಕಳ ಮನದಲ್ಲಿ ಒಳ್ಳೆಯ ಸಂಸ್ಕಾರದೊಂದಿಗೆ ತಾಯಿ ನಾಡು ನುಡಿಯ ಹಿರಿಮೆಯನ್ನು ಹೇಳಿ ಕೊಳ್ಳುವುದು ಅವಶ್ಯಕ ಶಾಲೆಯೆಂಬ ಪರಿಕಲ್ಪನೆ ಪ್ರಾರಂಭವಾದದ್ದು ಗುರುಕುಲ ಎಂಬ ಶಿಕ್ಷಣ ವ್ಯವಸ್ಥೆಯಿಂದ ಶಿಕ್ಷಣ ಮೊದಲು ಗುರಿ ಮಕ್ಕಳಲ್ಲಿ ತಿಳುವಳಿಕೆಯನ್ನು ತುಂಬುವುದು ಎಂದರು

ಹಿರಿಯರಾದ ಶಿವಶಂಕರಪ್ಪ ಹಳ್ಳಿ, ಅಮರಪ್ಪ ಕೊಪ್ಪರದ, ಅಮರಯ್ಯ ಸ್ವಾಮಿ ಸೊಪ್ಪಿಮಠ, ಕೃಷ್ಣಪ್ಪ ಪೂಜಾರಿ ಸಂಸ್ಥೆಯ ಅಧ್ಯಕ್ಷರಾದ ಅಮರಪ್ಪ ಹಂಪರಗುಂದಿ, ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ, ಸದಸ್ಯರಾದ ಶೃತಿ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗಿನ್ ಹಾಗೂ ಇತರರು ಉಪಸ್ಥಿತರಿದ್ದರು.

Don`t copy text!