ಸಾಹಿತಿ ಎಂ.ಜಿ.ದೇಶಪಾಂಡೆ ಜನ್ಮ ದಿನಕ್ಕೆ ಒಂದು ದಿನ ಮುಂಚಿತವಾಗಿ ಶುಭಾಶಯಗಳು (೨೧-೦೩೧೯೫೨)
ಎಂ.ಜಿ.ದೇಶಪಾಂಡೆ ಸರ್ ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದು. ಅನೇಕರಿಗೆ ಸಾಹಿತ್ಯದ ಅರಿವು ಮೂಡಿಸಿದವರು. ಸಾಹಿತಿ, ವಿಮರ್ಷಕ, ಸಾಹಿತ್ಯ ಸಮ್ಮೇಳನ ಸಂಘಟಿಸುವ ಸಂಘಟಕ, ವಿಶೇಷವಾಗಿ ಪತ್ರಕರ್ತ ರಾಗಿ ತಮ್ಮದೇ ‘ಖ್ಯಾತಿ’ ಎಂಬ ಕೈ ಬರಹದ ಪತ್ರಿಕೆ ಯನ್ನು ೧೯೭೭ ರಲ್ಲಿ ಪ್ರಾರಂಭಿಸಿದವರು.
ಬಸವ ಶಿರೋಮಣಿ, ಭಾರತ ಜ್ಯೋತಿ, ಬಸವ ಸಾಹಿತ್ಯ ರತ್ನ, ಸಾಹಿತ್ಯ ಮಂದಾರ ಭೀಷ್ಮ ಹೆಸರಿನ ಅನೇಕ ಪ್ರಶಸ್ತಿಗಳಿಗೆ ಭಾಜನರಾದವರು ಎಂ.ಜಿ.ದೇಶಪಡೆ ಸರ್. ಅವರು ಮೂಲತಃ ಬೀದರದವರು.
ಗೊವಿಂದರಾವ್ ಮತ್ತು ಲಕ್ಷ್ಮಿಬಾಯಿ ಅವರ ಸುಪುತ್ರರಾದ ದೇಶಪಾಂಡೆ ಅವರು ಪದವಿ ಪಡೆದು ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾದವರು.
ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಪುಸ್ತಕಗಳನ್ನು ಬರೆದು ಸಾಹಿತ್ಯ ಸಂಘಟನೆ ಕಾರ್ಯಕ್ರಮ ಮಾಡುವುದು ಮಾತ್ರವಲ್ಲ, ಅನೇಕ ಯುವ ಜನಾಂಗಕ್ಕೆ ಸಾಹಿತ್ಯದ ಬಗ್ಗೆ ತಿಳುವಳಿಕೆ ನೀಡಿ ಹಾಗೂ ಅವರ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ದೇಶಪಾಂಡೆ ಸರ್ ನನ್ನ ಅಚ್ಚುಮೆಚ್ಚಿನ ಸಾಹಿತಿಗಳು.
ದೇಶಪಾಂಡೆ ಹಾಗೂ ಸಾಂಸ್ಕೃತಿಕ ಪ್ರತಿಷ್ಟಾನ ಮೂಲಕ ಸಾಹಿತ್ಯ ಸರಸ್ವತಿ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದ್ದಾರೆ. ಅವರ ಮಂದಾರ ಸಾಹಿತ್ಯ ವೇದಿಕೆ ಟ್ರಸ್ಟ್ ವತಿಯಿಂದ ವಿಶೇಷ ಸನ್ಮಾನ, ಕಾವ್ಯ ಚುಡಾಮಣಿ.ಪ್ರಶಸ್ತಿ ಕೊಟ್ಟು ಕಿರಿಯರನ್ನು ಬೆಳಸುವ ದೊಡ್ಡ ಗುಣ ಅವರಲ್ಲಿದೆ.
ತಮ್ಮ ಹುಟ್ಟು ಹಬ್ಬದ ಸಂಭ್ರಮದ ವಾತಾವರಣ ಇನ್ನು ಮೆರಗು ನೀಡಲಿ. ದೇಶಪಾಂಡೆ ಸರ್ ಗೆ ಮತ್ತೊಮ್ಮೆ ಶುಭಾಶಯಗಳು.ಅವರಿಗಾಗಿ ರಚಿಸಿದ ಕವಿತ.
ಏನೆಂದು ಹೇಳಲಿ
ಉತ್ಸಾಹದ
ನಿಧಿಯ ಬಗ್ಗೆ…
ಹರುಷದ ಮಾತು
ಮನಸಿನ ಮಾತು
ಮನ ಮೆಚ್ಚಿದ ಮಾತು..
ಮನ ಮೆಚ್ಚಿದ ಸರಳತೆ
ಸೃಜನಶೀಲ ಸಹಜತೆ
ವ್ಯಕ್ತಿತ್ವ ಕಿಲ್ಲ ಅಳತೆ..
ಹೊಸ ಹುರುಪ
ತುಂಬುವ ಚೇತನಾ
ನೀವು ನಿರಂತರ ಕವನೂಪಾಸಕ
.
ಅರಿಯದ ವಿಷಯ ಇಲ್ಲ
ಅಡದ ಮಾತುಗಲಿಲ್ಲ
ನಿಮ್ಮ ಬಣ್ಣಿಸಲು ಮಾತುಗಳಿಲ್ಲ
ಬರುತಿರಲಿ ಅನವರತ
ಹುಟ್ಟು ಹಬ್ಬದ ದಿನ
ಅನುಗಾಲ ನಿರಂತರ
ನಿರಂತರ
– ಕವಿತಾ ಮಾಳಗಿ ಕಲಬುರ್ಗಿ