ಶರಣ ಚಿಂತನಾ ಮಾಲಿಕೆ-20
ದಿನಾಂಕ 21/3/2021 ರಂದು
ಸಾಮೂಹಿಕ ಸಂವಾದ ಕಾರ್ಯಕ್ರಮದಲ್ಲಿ
*ವಚನಗಳಲ್ಲಿ ಪಾಠಾಂತರ* *ಮತ್ತು ಪ್ರಕ್ಷಿಪ್ತತೆ* ಎಂಬ ವಿಷಯ ಕುುರಿತ ಚಿಂತನೆ ನಡೆಸಲಾಯಿತು.
ಕುಮಾರಿ ಗ್ರೀಷ್ಮ ಅವರು ವಚನ ಪ್ರಾರ್ಥನೆ ಮಾಡಿದರು.
ನಾ ದೇವನಲ್ಲದೆ ನೀ ದೇವನೆ ಎನ್ನುವ ವಚನವನ್ನು ತುಂಬಾ ಇಂಪಾಗಿ ಹಾಡಿದಳು
ಗೀತಾ ಜಿ ಎಸ್ ಅವರು
ವಚನದಲ್ಲಿ ನಾಮಾಮೃತ ತುಂಬಿ ಎನ್ನುವ ಬಸವಣ್ಣನವರ ವಚನವನ್ನು ಹಾಡಿದರು
ರುದ್ರ ಮೂರ್ತಿ ಪ್ರಭು ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತ
20 ನೇ ಸಂವಾದದಲ್ಲಿ ಉತ್ತಮವಾದ ಚಿಂತನೆಯನ್ನು ಆಯ್ದುಕೊಂಡಿದ್ದೇವೆ. ಹಿಂದಿನ ಷರಣರು ಓಲೆಗರಿ ತಡೋಲೆಯಲ್ಲಿ ಬರೆದಂತದ್ದನ್ನು ಸಂರಕ್ಷಿಸಿ ಉಳಿಸಿದ್ದಾರೆ.12 ನೇ ಶತಮಾನದ ವಚನಗಳನ್ನು ನಂತರದ ದಿನಗಳಲ್ಲಿ ಅನೇಕ ಅಕ್ಷರಗಳನ್ನು ಬದಲಾಯಿಸಿ ವಚನದ ಮೂಲ ಅರ್ಥವನ್ನು ಕಲುಷಿತಗೊಳಿಸಿದ್ದಾರೆ.ಇದು ಯಾಕೆ ಹೀಗಾಯಿತು ಅನ್ನೋದೇ ಇಂದು ಚರ್ಚೆಗೆ ಒಳಪಡುವ ವಿಷಯ ಅದನ್ನು ಶಶಿಕಾಂತ್ ಸರ್ ಮಂಡಿಸಲಿದ್ದಾರೆ ಎಂದು ತಿಳಿಸಿದರು…
ಡಾ.ಶಶಿಕಾಂತ್ ಪಟ್ಟಣ ಅವರು ಮಾತನಾಡಿ
12 ನೇ ಶತಮಾನವು ಕನ್ನಡ ನಾಡು ಕಂಡಂತ ಶ್ರೇಷ್ಠ ಕಾಲ.
ವರ್ಗ, ವರ್ಣ, ಆಶ್ರಮ, ಲಿಂಗ ಭೇದ ಹಾಗೂ ಸಾಂಸ್ಥೀಕರಣವಲ್ಲದ ಸಮಾಜವನ್ನು ಶರಣರು ಕಟ್ಟಿದ್ದಾರೆ.ಬಸವಣ್ಣನವರು ಪ್ರಗತಿ ಪರ ಚಿಂತಕರು ಎಂದರೆ ಅದರ ಹಿಂದಿನ ಅರಿವನ್ನು ನಾವು ಅರ್ಥಮಾಡಿಕೊಳ್ಳಬೇಕು. ಕಲ್ಯಾಣ ಕ್ರಾಂತಿಯ ಉದ್ದೇಶವನ್ನು ನಾವು ಯಶಸ್ವಿಯಾಗಿ ಕಾಣಲಿಲ್ಲ. ವೈದಿಕರು ಅನುಭವ ಮಂಟಪಕ್ಕೆ ಬೆಂಕಿ ಇಡುವ ಕೆಲಸ ಮಾಡಿದರು ಎಂದು ತಿಳಿಸಿ, ಅನುಭವ ಮಂಟಪದಲ್ಲಿ 35 ಜನ ಮಹಿಳಾ ವಚನಕಾರ್ತಿಯರು ಇದ್ದರು. ಆದರೆ ದಲಿತ ಮಹಿಳೆಯರು ಬರೆದ ವಚನಗಳನ್ನು ಸುಟ್ಟು ಹಾಕಿದ್ದಾರೆ ಎಂದು ತಿಳಿಸಿದರು.12 ನೇ ಶತಮಾನದಲ್ಲಿ 12 ವರ್ಷಗಳ ಕಾಲ ಶಾಂತರಸರು ಅವುಗಳನ್ನು ಸಮೀಕರಣಗೊಳಿಸಿದ್ದರು..
ಕಲ್ಯಾಣ ಕ್ರಾಂತಿಯ ನಂತರ ಹರಳಯ್ಯ,ಮಾದಾರ ಚೆನ್ನಯ್ಯ, ಕಕ್ಕಯ್ಯ ನಂತವರ ವಚನಗಳನ್ನು ಸುಟ್ಟ ನಂತರ ಶರಣರು ಉಳಿದ ವಚನಗಳನ್ನು ಬೇರೆ ಕಡೆ ತೆಗೆದುಕೊಂಡು ಹೋಗಿ ಸಂರಕ್ಷಿಸಿದರು. 12 ರಿಂದ 15 ನೇ ಶತಮಾನದವರೆಗೆ ಯಾರೂ ವಚನಗಳನ್ನು ಸರಿಯಾಗಿ ಓದಲಿಲ್ಲ, ಆದರೆ ವಚನಗಳ ಪ್ರಚುರತೆ ಜನಪದರಲ್ಲಿ ಇತ್ತು.ಆದರೆ ಧಾರ್ಮಿಕ ವಿಧಿ ವಿಧಾನಗಳು ಕಲಬೆರಕೆ ಆಗಿದ್ದವು ಎಂದು ತಿಳಿಸಿ,ನಂತರ 300 ವರ್ಷಗಳವರೆಗೆ ಕಾಲಗರ್ಭದಲ್ಲಿ ಹುದುಗಿದ್ದ ವಚನಗಳಿಗೆ ಯಡೆಯೂರು ಸಿದ್ಧಲಿಂಗ ಯತಿಗಳು ಜಂಗಮ ಚೈತನ್ಯಕ್ಕೆ ಪುನರ್ಜೀವ ಕೊಟ್ಟರು.ರಕ್ತ ಸಂಬಂಧವನ್ನು ದೂರವಿರಿಸಿ. ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಅವರು ದುಡಿದರು ಎಂದು ತಿಳಿಸಿದರು..
ಕಾಳಮುಖಿ, ಕಾಪಾಲಿಕ ಮಠಗಳಿಗೆ ಮಾರು ಹೋಗಿ ನಾಥ ಪರಂಪರೆಯವರು ಬಸವ ತತ್ತ್ವವನ್ನು ಉದ್ದಾರ ಮಾಡುತ್ತೇವೆಂದು ಎಲ್ಲವನ್ನೂ ವಿರೂಪಗೊಳಿಸಿದರು…
ಯಾಕೆ ಪ್ರಕ್ಷಿಪ್ತತೆ ಉಂಟಾಯಿತು ಎಂದರೆ ಶೈವ ಧರ್ಮದವರು ತಾವು ಪಾರುಪತ್ಯ ಮೆರೆಯಲು ಶರಣ ಧರ್ಮವನ್ನು ಆಪೋಷನಗೊಳಿಸಿದರು ಎಂದು ತಿಳಿಸಿದರು.ಪರಿಣಾಮ ನಡವಳಿಕೆಗಳು, ಪದ್ಧತಿ ಸಂಪ್ರದಾಯಗಳು ಬದಲಾದವು, ಪದ ಪಲ್ಲಟವೂ ಕೂಡ ಆಯಿತು ಎಂದು ತಿಳಿಸಿ, 15,16 ನೇ ಶತಮಾನದಲ್ಲಿ ಪಾಠಾಂತರ ಪರೀಕ್ಷರಣೆ ಉಂಟಾಯಿತು,ಉದ್ದೇಶ ಪೂರ್ವಕವಾಗಿ ಇವುಗಳನ್ನು ನಿಲ್ಲಿಸಲು ಬೇಕಂತಲೇ ಸಂಕಲನಕಾರರು ತಪ್ಪು ಮಾಡಿದರು.ಇವುಗಳನ್ನು ಸರಿಪಡಿಸಲು ಫ.ಗು.ಹಳಕಟ್ಟಿ ಹಾಗೂ M.M.ಕಲ್ಬುರ್ಗಿಯವರ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು…
ತಾನೂ ಕೂಡ ಕೆಲವು ವಚನಗಳನ್ನು ಸರಿಪಡಿಸಿ ಕಲ್ಬುರ್ಗಿ ಸರ್ ರವರಿಗೆ ಕಳುಹಿಸಿದಾಗ ಅವರು ಸರಿಯಾಗಿದೆ ಎಂದು ಸಮಂಜಸ ಉತ್ತರ ಕೊಟ್ಟಿದ್ದಾರೆ,ಆದರೆ ಇದೇ ಅಂತಿಮವಲ್ಲ, ಬೇರೆಯವರು ಇದನ್ನು ಬೇರೆಯವರು ನೋಡಬಹುದು ಎಂದು ತಿಳಿಸಿ ಶೂನ್ಯ ಸಂಪಾದನೆಯು ಜಗತ್ತಿನೊಳಗೆ ಶ್ರೇಷ್ಠ ಸಿದ್ಧಾಂತವಾಗಿದೆ, ಅಕ್ಕಮಹಾದೇವಿ ಬರೆದ ವಚನವಾದ ಅಂಬಿಗಾ ನಾ ನಿನ್ನ ನಂಬಿದೆ ವಚನವು 18 ನೇ ಶತಮಾನದಲ್ಲಿ ದಾಸ ಪರಂಪರೆಯ ಸಂದರ್ಭದಲ್ಲಿ ಬದಲಾಗಿದೆ. ಷಟಸ್ಥಲಗಳನ್ನು ಬಿಟ್ಟು ಉಳಿದ ವಚನಗಳು ಪರಿಷ್ಕರಣೆ ಯಾಗಬೇಕು. ಫ.ಗು.ಹಳಕಟ್ಟಿಯವರು ಇದಕ್ಕಾಗಿ ತಮ್ಮ ಜೀವನವನ್ನೇ ಬಲಿ ಕೊಟ್ಟಿದ್ದಾರೆ,ಇಂತವುಗಳಿಗೆ ನಾವು ಪ್ರತಿಕ್ರಿಯಿಸಲು ಹೋದಾಗ ಕೊಲೆ ಬೆದರಿಕೆಗಳು ಕಂಡು ಬರುತ್ತದೆ.ಎಂದು ನೊಂದು ನುಡಿದರು…
ನಮ್ಮ ಮುಂದೆ ದೊಡ್ಡ ಸವಾಲು ಇದೆ,ಇಂದಿನ ಮಠಗಳು ವಾಣಿಜ್ಯ ಕೇಂದ್ರಗಳಾಗಿವೆ ಎಂದು ತಿಳಿಸಿ,500 ಕೋಟಿ ಅನುಭವ ಮಂಟಪಕ್ಕೆ ಹಣ ಖರ್ಚು ಮಾಡುವುದಕ್ಕಿಂತ ಅದರಲ್ಲಿ 100 ಕೋಟಿ ಹಣವನ್ನು ವಚನಗಳ ಪರಿಷ್ಕರಣೆಗೆ ಬಳಸಿದರೆ ಒಳ್ಳೆಯದು ಎಂದು ತಿಳಿಸಿದರು…
ರವಿಶಂಕರ್ ಅವರು ಮಾತನಾಡಿ
ಹೌದು I see the pain ಎಂದು ತಿಳಿಸಿ ನಾನು ಆರಾಧ್ಯ , ನಮ್ಮ ತಂದೆ ಲಿಂಗ ಕಟ್ಟುತ್ತಿದ್ದರು, ಇದು ಧರ್ಮವನ್ನು ಕಟ್ಟುವುದಕ್ಕಿಂತ, ವ್ಯಾಪಾರೀಕರಣವಾಗುತ್ತಿದೆ, ಮುಂದೇನು ಎನ್ನುವುದೇ ನನ್ನನ್ನು ಕಾಡುತ್ತಿರುವ ಪ್ರಶ್ನೆ ಎಂದು ಕೇಳಿದರು…
ಕುಮಾರ್ ರಾಜಣ್ಣ ಮಾತನಾಡಿ
ಹೌದು ವರ್ಗ ಸಂಕರ ಎನ್ನುವ ಪ್ರಶ್ನೆಯೇ ಬರುವುದಿಲ್ಲ ಇದು ನೂರಕ್ಕೆ ನೂರು ಸತ್ಯ ಎಂದು ತಿಳಿಸಿ, ಜಾಸ್ತಿ ಪ್ರಕ್ಷಿಪ್ತತೆ ಯಾಗಿರುವುದು ಚೆನ್ನಬಸವಣ್ಣನ ವಚನಗಳಲ್ಲಿ ಎಂಬ ಅಭಿಪ್ರಾಯ ತಿಳಿಸಿದರು.
ಹರಳಯ್ಯನವರು ತಮ್ಮ ಚರ್ಮದಿಂದ ಮಾಡಿದ ಪಾದುಕೆಗಳನ್ನು ಬಸವಣ್ಣನವರು ತಲೆಯಮೇಲೆ ಇಟ್ಟಿದ್ದರು ಎಂದು ಹೇಗೆ ಬರೆದಿದ್ದಾರೋ ಅದೇ ಸತ್ಯ.ಅದನ್ನು ಹೇಗೇಗೋ ಬರೆಯಲು ಆಗುವುದಿಲ್ಲ.ಅದು ಕೆಳಭಾಗದಿಂದಲೇ ಸರಿಯಾಗಬೇಕು ಎಂದು ತಿಳಿಸಿದರು.
ಧರ್ಮವನ್ನು ಪ್ರಸಾರ ಮಾಡಲು
ಇತ್ತೀಚೆಗೆ ಚರ ಜಂಗಮರು ಊರೂರಿಗೆ ಹೋದಾಗ ವೈಭವೀಕರಣದ ಪ್ರಭಾವದಿಂದ ವೀರಭದ್ರ, ಸಿದ್ದೇಶ್ವರ ದೇವಸ್ಥಾನಗಳು ಹುಟ್ಟಿಕೊಂಡವು, ಎಂದು ತಿಳಿಸಿದರು..
ಅದಕ್ಕೆ ಪಟ್ಟಣ ಸರ್ ಬೀದರ್ ಕಡೆ ರಾಷ್ಟ್ರೀಯ ಬಸವ ದಳದವರು ಶಿವನಿಂದ ಬಸವ ಎನ್ನುತ್ತಾರೆ ಎಂದು ತಿಳಿಸಿದರು.
ಲಿಂಗಪ್ಪ ಕಲ್ಬುರ್ಗಿ :ಮಾತನಾಡಿ
ಬುದ್ಧನ ಪ್ರಕಾರ ಯಾವುದನ್ನೂ ಒರೆಗೆ ಹಚ್ಚಬಾರದು,ನಿನಗೆ ಸಮಂಜಸವೆನಿಸಿದರೆ ಮಾತ್ರ ನೀನು ಒರಗೆ ಹಚ್ಚು, ವ್ಯಕ್ತಿಗತವಾಗಿ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು . ಅದಕ್ಕೆ ಪಟ್ಟಣ ಸರ್ ರವರು ಯಾವುದನ್ನೂ ಪ್ರತ್ಯಕ್ಷವಾಗಿ ನೋಡಬೇಕು.ಅಕ್ಕಿಯೊಳಗೆ ಹರಳು ತೆಗೆದು ಅನ್ನ ಮಾಡಿದಂತಿರಬೇಕು. ವಚನಗಳನ್ನು ಪರಿಷ್ಕರಣೆ ಮಾಡಲು ಹೋದ ಎಂ.ಎಂ.ಕಲ್ಬುರ್ಗೀಯವರನ್ನು ನಾವೇ ಹತ್ಯೆ ಮಾಡಿದೆವು ಎಂದು ತಿಳಿಸಿದರು…
ಉಮೇಶ್ ಮಂತಾಳೆ ಮಾತನಾಡಿ
ಈ ವಿಷಯದ ಬಗ್ಗೆ 1987 ರಲ್ಲಿ ಬಿ.ಎಂ.ಗಿರಿರಾಜ್ ರವರು ಕೆಲಸ ಮಾಡಿ ತಾವೇ ಮುದ್ರಿಸಿದ್ದರು, ಎಲ್ಲಾ ಬಸವರಾಜ್ ರವರು ಗುಲ್ಬರ್ಗ ಸಭೆಯಲ್ಲಿ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದರು, ಮೊದಲಿದ್ದ ಶರಣರು ಸರಳವಾಗಿ ಬರೆದಿದ್ದರು, ಅದನ್ನೇ ದಾಸ ಪರಂಪರೆಯವರು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡಿರಬಹುದು, ಹಾಗಾಗಿ ವಚನಗಳನ್ನು ಸರಿಯಾಗಿ ಅಭ್ಯಾಸ ಮಾಡಬೇಕು ಎಂದು ತಿಳಿಸಿ,8 ರಿಂದ 10 ಜನ ಆಸಕ್ತರು ಕೂಡಿಕೊಂಡು ನಾವೇ ಏಕೆ ಈ ಕೆಲಸ ಮಾಡಬಾರದು, ಸುಮ್ಮನೆ ಸರ್ಕಾರವನ್ನು ಏಕೆ ಟೀಕಿಸಬೇಕು ಎಂದು ತಿಳಿಸಿದರು…
ಅಂಬಾರಾಯ ಬೀರದಾರ ಮಾತನಾಡಿ
ದಾವಣಗೆರೆಯಲ್ಲಿ ಇದರ ಪ್ರಕ್ಷಿಪ್ತತೆ ನಡೆದಿದೆ ಎಂದು ಕೇಳಿದೆ, ಸರ್ಕಾರದ ಮಟ್ಟದಲ್ಲಿ ಆದರೆ ಸೂಕ್ತ ಎಂದು ತಿಳಿಸಿದರು..
ಅದಕ್ಕೆ ಪಟ್ಟಣ ಸರ್ ಆದರೆ ಅಲ್ಲಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು..
ಸೋಮಶೇಖರ್* *ಮುಗ್ದುಮ್ ಮಾತನಾಡಿ
ಒಂದು ಉತ್ತಮವಾದ ಟೀಂ ರಚನೆ ಮಾಡಿಕೊಂಡು,ಚರ್ಚೆ ಮಾಡಿ ತಿದ್ದುಪಡಿ ಮಾಡಬೇಕು ಆದರೆ ಮೂಲ ವಚನದಲ್ಲಿ ಸರಿ ಇತ್ತು ಅಂದರೆ ಅದನ್ನು ಹಾಗೇ ಬಿಡಬೇಕು ಎಂದು ತಿಳಿಸಿದರು..
ತಿಗಡಿ ಸರ್ ಮಾತನಾಡಿ
ಪಟ್ಟಣ ಸಾರ್ ರವರ ಕಳವಳ ಎಲ್ಲರನ್ನೂ ಮೆಚ್ಚಿಸುವಂತಹದ್ದು, ಎಂದು ತಿಳಿಸಿ ಹೇಳಿ ನಾನೂ ಕೂಡ ಆ ಉಪ ಕಮಿಟಿಯಲ್ಲಿದ್ದೆ ಕೆಲವು ವಚನಗಳಿಗೆ ಆಕರಗಳನ್ನು ಹಾಕಿಕೊಟ್ಟೆವು.ಖೊಟ್ಟಿ ವಚನಗಳನ್ನು ತೆಗೆದು ಹಾಕಿದೆವು, ಬಸವಣ್ಣನವರ 128 ವಚನಗಳಿಗೆ ಆಕರಗಳು ಸಿಕ್ಕಿರಲಿಲ್ಲ, ಕಡೆಗೆ ಕಲ್ಯಾಣ ನಗರ ಧಾರವಾಡದ ಸಭೆಗೆ ನಮ್ಮನ್ನು ಕರೆಯಲೇ ಇಲ್ಲ ಎಂದು ವಿಶಾದ ವ್ಯಕ್ತಪಡಿಸಿದರು ಎಂದು ತಿಳಿಸಿದರು…
ಅದಕ್ಕೆ ಕಲ್ಬುರ್ಗಿ ಸರ್ ರವರು,ಇದರ ಹಿಂದೆ ದೂರಾಲೋಚನೆ ಹಾಗೂ ರಾಜಕೀಯ ಇದೆ, ಕಮಿಟಿ ಮಾಡಿಕೊಂಡು ಸ್ವತಂತ್ರವಾಗಿ ಮಾಡಿ ಅದಕ್ಕೆ ನಾನು ಪ್ರೋತ್ಸಾಹ ಕೊಡುತ್ತೇನೆ ಎಂದು ತಿಳಿಸಿದ್ದರು ಎಂದರು.
ವಿದ್ಯಾ ಮುಗ್ದಮ್ ಮಾತನಾಡಿ
ಎಲ್ಲ ಪುರಾತರ ಚರಣಕೇ ಎನ್ನುವ ವಚನವನ್ನು ಸುಶ್ರಾವ್ಯವಾಗಿ ಹಾಡಿದರು..
ಕಡೆಗೆ ರುದ್ರಮೂರ್ತಿ ಸರ್ ಮತ್ತೊಮ್ಮೆ ಎಲ್ಲವನ್ನೂ ಅವಲೋಕಿಸಿ ಸರ್ವರೆಲ್ಲರಿಗೂ ವಂದನಾರ್ಪಣೆಯನ್ನು ಸಲ್ಲಿಸಿದರು…
–ವರದಿ ಮಂಡನೆ
ಗೀತಾ ಜಿ ಎಸ್
ಹರಮಘಟ್ಟ ಶಿವಮೊಗ್ಗ