ತುತ್ತಿನ ಚೀಲ

ತುತ್ತಿನ ಚೀಲ

ಸೂರಿಲ್ಲ ಅವ್ರ್ಗೆ ಊರಾಗ
ಸಂಸಾರ ಅವ್ರ್ದು ಬೀದ್ಯಾಗ
ಕೈಕಟ್ಟಿ ಕುಂತ ನೋಡ್ಯಾನ
ಕೈಲಾಡಿಸುವವನ ಆಟಾನ

ಹರಕ ಚಾಪಿಗಿಲ್ಲ ತ್ಯಾಪಿ
ಬೆರಿಕಿಲ್ಲದ ಆತ… ಪಾಪಿ
ಮೂರ್ ಗಂಟಿನ ಜೊತಿಗಿ
ನಂಟಾದ್ವು ಮೂರು ಕುಡಿಗಿ

ಬಿದಿರ್ ಬುಟ್ಟಿ ಖಾಲಿ ಪಾತ್ರಿ
ಕಮಾಲ್ ಐತ್ರಿ ಹೊಟ್ಟಿ ಜಾತ್ರಿ
ಹಾಕೊಂದ ಅಂಗಿ ಜಗ್ಗಿ
ನುಂಗೇತಿ ಹಸದ ಹುಡ್ಗಿ!

ಹೊತ್ತಿನ ಚಿಲಕಕ್ಕ ಕೀಲಿಲ್ಲ
ತುತ್ತಿನ ಚೀಲಕ್ ಹಂಗಿಲ್ಲ!
ಬಡುವ್ರು ಅನ್ನು ಸಂಕಟಕ್
ಹೊಟ್ಟಿ, ಬಟ್ಟಿಗೂ ಕಂಟಕ….!!

✍️ಸರೋಜಾ ಶ್ರೀಕಾಂತ್ ಅಮಾತಿ, ಕಲ್ಯಾಣ್ ಮುಂಬೈ

Don`t copy text!