ಕೆಂಪು ಸೂರ್ಯ

ಕೆಂಪು ಸೂರ್ಯ

ಕಪ್ಪು ಮಣ್ಣಿನ
ದಲಿತ ಕೇರಿಯ
ಮಹಾರಾಷ್ಟ್ರದ
ಕೆಂಪು ಸೂರ್ಯ.

ಬುದ್ಧ ಬಸವ ಮಾರ್ಕ್ಸ್
ಪುಲೆ ಶಾಹು ಚಿಂತನ
ಬರಿಗಾಲಿನ ಪಯಣ
ಕಿತ್ತು ತಿನ್ನುವ ಬಡತನ

ಶೃದ್ಧೆ ಶ್ರಮದ ಗೆಳೆತನ
ಕೊಲಂಬಿಯಾ ಶಿಕ್ಷಣ
ನೂರು ಪದವಿಯ ಜಾಣ
ಸತ್ಯ ಸಮತೆಯ ಬಾಣ .

ಹಗಲಿರುಳು ಕಠಿಣ ಕಾರ್ಯ
ಬರೆದಿಟ್ಟರು ಲಿಖಿತ ಘಟನಾ ,
ಭಾರತ ದೇಶದ ಮಾನ ಸಮ್ಮಾನ
ಡಾ ಅಂಬೇಡ್ಕರರ ದಿವ್ಯ ಜ್ಞಾನ .

ನ್ಯಾಯಕ್ಕಾಗಿ ಘೋಷಣಾ
ಇಲ್ಲವಾಯಿತು ಶೋಷಣಾ
ಬನ್ನಿ ಭಾರತೀಯರೇ
ಉಳಿಸುವ ನಮ್ಮ ಸಂವಿಧಾನ.

ಕೆಂಪು ಸೂರ್ಯ ಮುಳಗಲಾರ
ಸಮಾನತೆಯ ಹರಿಕಾರ .
ಬಾಬಾ ಸಾಹೇಬ ಅಮರ ರಹೇ
ಬುದ್ಧ ಬಸವ ಜಿಂದಾಬಾದ್ .


ಡಾ ಶಶಿಕಾಂತ ಪಟ್ಟಣ ಪುಣೆ

Don`t copy text!