ಮೃತದ ನಂತರ ಮೃತದೇಹವನ್ನು ವೈದ್ಯಕೀಯ ಕಾಲೇಜಿಗೆ ದಾಸೋಹ ಮಾಡಿರಿ-ರುದ್ರಮ್ಮ ಅಮರೇಶ ಹಸಿನಾಳ
e-ಸುದ್ದಿ, ಗಂಗಾವತಿ
ಅಲ್ಲಮಪ್ರಭುಗಳ ಜಯಂತಿಯ ಜೊತೆಗೆ ಎಲ್ಲಾ ಶರಣರ ಜಯಂತಿಯ ಪ್ರಯುಕ್ತವಾಗಿ ನಾನು ತೀರಿದ ನಂತರ ನನ್ನ ಮೃತದೇಹವನ್ನು ವೈದ್ಯಕೀಯ ಕಾಲೇಜಿಗೆ ದಾಸೋಹವ ಮಾಡುವುದಾಗಿ ಗಂಗಾವತಿಯ ಖ್ಯಾತ ವೈದ್ಯರಾದ ವಿ ವಿ ಚಿನಿವಾಲ ಇವರ ಬಳಿ ಅರ್ಜಿಯನ್ನು ಪಡೆದುಕೊಂಡಿದ್ದೇನೆ.
ಈ ನನ್ನ ಮೃತದೇಹವು ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬುದು ನನ್ನ ಸದಾಶಯವಾಗಿದೆ. ನಾನು ಲಿಂಗೈಕ್ಯವಾದ ನಂತರ ನನ್ನ ಮೃತ ದೇಹವು ಜಡವಾಗಿದ್ದು ಕಲ್ಲು ಮಣ್ಣಿಗೆ ಸಮವಾಗಿರುತ್ತದೆ ಹಾಗಾಗಿ ಸತ್ತ ದೇಹದ ಮೇಲೆ ವ್ಯಾಮೋಹ ಬಿಟ್ಟು ಇಂಥ ಕಲಿಯುವ ವಿದ್ಯಾರ್ಥಿಗಳಿಗೆ ದಾಸೋಹಗೈದು ನಿಜವಾದ ದಾಸೋಹ ತತ್ವಕ್ಕೆ ಗೌರವ ತನ್ನಿರೆಂದು ರುದ್ರಮ್ಮ ಮರೇಶ್ ಹಾಸಿನಾಳ ಗಂಗಾವತಿ ಅವರು ಮನವಿ ಮಾಡಿದ್ದಾರೆ.