ಪುಸ್ತಕ ಪರಿಚಯ
ಪುಸ್ತಕ..
ಜಂಗಮಜ್ಯೋತಿ
ಲೇಖಕರು.
ಶ್ರೀಮತಿ ಕವಿತಾ. ಮಳಗಿ
ಶರಣ ತತ್ವದ ಮಣಿಹ ಹೊತ್ತು ಬಸವಣ್ಣನವರ ಬದುಕು ಹಾಗೂ ಬರಹ ವನ್ನು ಹಾಗೂ ಬಸವಾದಿ ಪ್ರಮಥರ ವಿಚಾರಗಳನ್ನು, ವಚನ ಸಾಹಿತ್ಯವನ್ನು, ಕರ್ನಾಟಕದ ಜನತೆಯ ಮನೆ ಮನೆಗೂ ,ಮನ ಮನಕ್ಕೂ ,ಮುಟ್ಟಿಸಿ ವಿಚಾರಜ್ಯೋತಿ ಬೆಳಗಿಸಿ ದವರು .ಲಿಂ|ಪೂಜ್ಯ ಶ್ರೀ ಜಗದ್ಗುರು ಲಿಂಗಾನಂದ ಸ್ವಾಮೀಜಿ ಅವರು ಹಾಗೂ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ ಯವರು ಉಭಯ ಜಗದ್ಗುರುಗಳು ವ್ಯಕ್ತಿ ರೂಪದಲ್ಲಿ ಜನಿಸಿ,ಶಕ್ತಿ ರೂಪದಲ್ಲಿ ಬೆಳೆದು, ತತ್ವ ಸಿದ್ದಾoತಾದ ತಳಹದಿಯ ಮೇಲೆ ,ಶರಣಧರ್ಮವನ್ನು ಸಂಘಟಿಸಿ ,ಲಿಂಗಾಯತ ಧರ್ಮಕ್ಕೆ ಮೂರ್ತ ಸ್ವರೂಪ ಕೊಟ್ಟವರು. ಇವರನ್ನು ನಾವು ಅವತಾರಿಗಳೆಂದು ಕರೆದರೆ ತಪ್ಪೇನಿಲ್ಲ.
ಲಿಂಗಾಯತ ಶರಣಧರ್ಮಕ್ಕೆ ಅಪಾರ ಕೊಡುಗೆ ನೀಡಿದರು. ರಾಷ್ಟ್ರೀಯ ಬಸವದಳ ಕಟ್ಟಿ ತನ್ಮೂಲಕ ಲಕ್ಷಾಂತರ ಶರಣ ಶರಣೆಯರ ಹೃನ್ಮನದಲ್ಲಿ ನೆಲೆಗೊಂಡವರು.ಇಂಥ ಮಹಾನುಭಾವರ ಶಿಷ್ಯೆ ಯಾಗಿ ,ಅವರ ಆಪ್ತ ವಲಯದ ಸಾಧಕಿಯಾಗಿ, ತಮ್ಮ ಬದುಕು ಬರಹವನ್ನು ಶರಣ ತತ್ವಕ್ಕೆ ಮೀಸ ಲಾಗಿರಿಸಿಕೊಂಡ, ಶ್ರೀಮತಿ ಕವಿತ ಮಳಗಿಯವರು ಸಂಸಾರದಲ್ಲಿದ್ದು, ಶರಣ ಸಂತ ಹೃದಯವನ್ನಿರಿ ಸಿಕೊಂಡು ,ಬಾಳಿ ಬದುಕುತ್ತಿರುವರು.
ಈ ಕೃತಿಯ ವೈಶಿಷ್ಟ್ಯ ವೆಂದರೇ ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿ ಯವರ ಜೀವನ ಚರಿತ್ರೆ ಹಾಗೂ ಅವರ ಸಾಧನೆ ಬೋಧನೆಗಳನ್ನು, ಬದುಕು ಬರಹಗಳನ್ನು, ಕಾದಂಬರಿಯ ಶೈಲಿಯಲ್ಲಿ ನಿರೂಪಿಸಿದ್ದಾರೆ. ಅವರ ಬಾಲ್ಯ ಜೀವನ, ಕಾಲೇಜು ಶಿಕ್ಷಣ,ಧರ್ಮ ಪ್ರಸಾರ, ಕೃತಿ ರಚನೆ, ಮಠ ಪೀಠಗಳ ಸ್ಥಾಪನೆ, ಮತ್ತು ಕ್ರಾಂತಿಕಾರಿ ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಮತ್ತು ಆ ಪೀಠಕ್ಕೆ ಮಹಿಳೆಯನ್ನು ಪೀಠಾಧ್ಯಕ್ಷೆ ಯನ್ನು ಮಾಡಿ ಅಭಿನವ ಅಕ್ಕ ಮಹಾದೇವಿಯೆಂದು ಬಿಂಬಿಸಿ, ಮಹಿಳಾ ಜಗದ್ಗುರುಗಳೆಂದು ಘೋಷಿಸಿ,ಹೊಸ ಇತಿಹಾಸ ವನ್ನು ಬರೆದವರು. ಇಂಥ ಮಹಾ ಸ್ವಾಮೀಜಿಯವರ ಕುರಿತು ಕವಿತಾ ಮಳಗಿ ಯವರು ಜಂಗಮ ಜ್ಯೋತಿ’ಕೃತಿ ರಚಿಸಿದ್ದಾರೆ.
ಈ ಕೃತಿಯು ಲಿಂಗಾನಂದ ಸ್ವಾಮೀಜಿ ಹಾಗೂ ಮಾತಾಜಿಯವರ ಕುರಿತು ಸಮಗ್ರ ಹಾಗೂ ಸಂಪೂರ್ಣ ಮಾಹಿತಿ ನೀಡುವ ಅತ್ಯುತ್ತಮ ಕೃತಿ. ಈ ಕೃತಿಯಲ್ಲಿಯ ಒಂದು ವಿಶೇಷ ಪ್ರಸಂಗವೆಂದರೇ, ಲಿಂಗಾನಂದ ಸ್ವಾಮಿಗಳು ವಿಶ್ವ ಧರ್ಮ ಪ್ರವಚನ ಕಾರ್ಯಕ್ರಮ ನೀಡುವ ಸಂದರ್ಭದಲ್ಲಿ ಅವರು ಬಸವೈಕ್ಯ ಆಗಿರುವ ಸನ್ನಿವೇಶ ಅತ್ಯಂತ ಮಾರ್ಮಿಕ ಹಾಗೂ ಪರಿಣಾಮಕರಿಯಾಗಿದೆ. ಈ ಕೃತಿಯಲ್ಲಿ ಅಪ್ಪಾಜಿ ಹಾಗೂ ಮಾತಾಜಿಯವರ ವಿಚಾರಗಳನ್ನು ಆಯ್ದುಕೊಂಡು, ಅತ್ಯಂತ ಸೂಕ್ತ ಹಾಗೂ ಸಂದರ್ಭಕ್ಕೆ ತಕ್ಕಂತೆ ಉಲ್ಲೇಖಿಸಿ ಕೃತಿಯ ಮೌಲ್ಯವನ್ನು ಹೆಚ್ಛಿಸಿದಾರೆ. ಅಷ್ಟೇ ಅಲ್ಲದೇ ಅನೇಕ ಮಹತ್ವದ ಪ್ರಸಂಗಗಳನ್ನು ತಮ್ಮದೇಯಾದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ ಓದುಗರ ಮೆಚ್ಚುಗೆ ಪಡೆದಿರುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿ ಬೆಳೆಯುವ ಸಾಧಕರಿಗೆ ಈ ಕೃತಿ ಸ್ಫೂರ್ತಿದಾಯಕವಾಗಿದೆ.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವ ಸಾಧಕರಿಗೆ ದಾರಿದೀಪವಾಗಿದೆ. ಈ ಕೃತಿ ಯನ್ನು ಓದಿದ ಪ್ರತಿಯೊಬ್ಬ ವ್ಯಕ್ತಿಗೂ ಹೊಸ ಅನುಭವ ನೀಡುತ್ತದೆ. ಈ ಮುಂಚೆ ಜಂಗಮತ್ವ ದರ್ಶನ ಕೃತಿ ರಚನೆ ಮಾಡಿದ ಲೇಖಕಿಗೆ ಅನುಭವವಿರುವುದರಿಂದ ಈ ಕೃತಿ ಜಂಗಮ ಜ್ಯೋತಿ ಕೂಡ ಸೊಗಸಾಗಿ ಮೂಡಿ ಬಂದಿದೆ. ಈ ಕೃತಿ 2007ರಲ್ಲಿ ಪ್ರಕಟ ವಾಗಿರುವುದರಿಂದ ಸುಮಾರು ಹದಿಮೂರು ವರ್ಷಗಳ ಹಿಂದೆ, ವಯಸ್ಸಿಗೆ ಮೀರಿದ ಅನುಭವದೊಂದಿಗೆ ,ಇಂಥ ಮೌಲಿಕ ಕೃತಿ ರಚನೆ ಮಾಡಿದ್ದು, ತುಂಬಾ ಸಂತೋಷದ ಸಂಗತಿಯಾಗಿದೆ.
ಬೆಳೆಯುವ ಪೈರು ಮೊಳಕೆಯಲ್ಲೇ ತನ್ನ ಗುಣವನ್ನು ತೋರಿಸುತ್ತದೆ ಎಂಬಂತೆ, ಅನೇಕ ಚಿಕ್ಕ ಪುಟ್ಟ ಕವಿತೆ, ಕಥೆ ಲೇಖನ ಬರಹಗಳನ್ನು ಬರೆದು ಓದುಗರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಈ ಕೃತಿ ಯೋಗಿಯೊಬ್ಬರ ಪೂರ್ಣ ಪ್ರಮಾಣದ ಅವರ ವ್ಯಕ್ತಿತ್ವ ದರ್ಶನಕ್ಕೆ ದಾರಿ ಮಾಡಿಕೊಡುತ್ತದೆ. ಅವರು ಹುಟ್ಟಿದಾಗಿನಿಂದ ಕೊನೆಯುಸಿರು ಎಳೆಯುವ ತನಕ ನಡೆದ ಘಟನೆಗಳು, ಹಿಡಿದಿಟ್ಟು, ಕರಿಮಣಿ ಸರ ದಲ್ಲಿ ಹವಳ ಪೋಣಿಸಿದಂತೆ ಸುಂದರ ಜೀವನ ಚರಿತ್ರೆ ರಚಿಸಿದ್ದಾರೆ. ಇಂಥ ಕೃತಿ ಸಾಧಕರು ಓದಿ ಸಾಧನೆ ಮಾಡಿ, ಸಿದ್ಧಿಯನ್ನು ಪಡೆಯುವರೆಂಬ ಭರವಸೆಯಲ್ಲಿ ಲೇಖಕರು ಈ ಕೃತಿ ರಚನೆ ಮಾಡಿರುವರು. ಇದು ಅಧ್ಯಾತ್ಮದ ಜೇನುಗೂಡಾಗಿದೆ. ಇದನ್ನು ಓದಿ ಸಾಧಕರು ತಮ್ಮ ಹೃದಯಾ0ತಕರಣ ಜೇನು ಗೂಡಾಗಿಸಿಕೊಳ್ಳಬೇಕೆಂದು ಆಶಿಸುತ್ತೇನೆ ಮತ್ತು ಈ ಲೇಖಕಿಯಿಂದ ಇನ್ನು ಇಂಥ ಹತ್ತು ಹಲವು ಕೃತಿಗಳು ಹೊರ ಬರಲೆಂದು ಮತ್ತು ಕನ್ನಡ ನಾಡುನುಡಿಗೆ ಇವರ ಸೇವೆ ಹೆಚ್ಚಿನ ಪ್ರಮಾಣದಲ್ಲಿ ಸಲ್ಲಲೆಂದು
ಶುಭ ಹಾರೈಸುವೆನು
⭐ ಪ್ರೊ|| ಶಿವರಾಜ ಪಾಟೀಲ್
ಕಲಬುರ್ಗಿ
ಅರ್ಥಪೂರ್ಣವಾಗಿ, ಕೃತಿ ಮತ್ತು ಕೃತಿಕಾರರ ಪರಿಚಯವಾಗಿದೆ. ಸಂಸಾರ ಜೊತೆಗೆ ಮತ್ತು ಸಂತ ಹೃದಯವನ್ನಿರಿಸಿಕೊಂಡ ಲೇಖಕಿ ಕವಿತಾ ಮಳಗಿ ಎಂಬುದು ಇಂತಹ ಕೃತಿಗಳಿಂದ ತಿಳಿಯುತ್ತದೆ ಎಂಬ ಮಾತು ಸತ್ಯ. ಸಾಧು ಸಂತರ ಒಡನಾಟ, ಅಲ್ಲಿಯ ಮೌಲ್ಯಗಳು ಲೇಖಕಿಯರ ಮೇಲೆ ಪ್ರಭಾವ ಬೀರಿ, ಇಂತಹ ಉತ್ತಮ ಸಾಹಿತ್ಯ ಹೊರಹೊಮ್ಮಲು ಕಾರಣವಾಗಿದೆ ಅನಿಸುತ್ತದೆ…. ಉತ್ತಮ ಅವಲೋಕನ ಸರ್…