ಬೆಡಕಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕನ್ನಡ ವಿರೋಧಿ ಖಂಡಿಸಿ ಅಮಾನತ್ತಿಗೆ ಆಗ್ರಹಿಸಿದ ನಿಪ್ಪಾಣಿ ತಾಲೂಕ ಕನ್ನಡಪರ ಸಂಘಟನೆಗಳು

ಬೆಡಕಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕನ್ನಡ ವಿರೋಧಿ ಖಂಡಿಸಿ ಅಮಾನತ್ತಿಗೆ ಆಗ್ರಹಿಸಿದ ನಿಪ್ಪಾಣಿ ತಾಲೂಕ ಕನ್ನಡಪರ ಸಂಘಟನೆಗಳು

e-ಸುದ್ದಿ ನಿಪ್ಪಾಣಿ

ನಿಪ್ಪಾಣಿ ತಾಲೂಕಿನ ಗಡಿ ಗ್ರಾಮ ಕನ್ನಡದ ನೆಲ ಬೆಡಕಿಹಾಳದಲ್ಲಿ ಮೊನ್ನೆ ಅಲ್ಲಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕನ್ನಡದ ಅಧಿಕಾರ ಉಂಡು ಕನ್ನಡ ಭಾಷೆ ನುಡಿಯಲು ತಾತ್ಸಾರ ತೋರಿರುವುದು ಕನ್ನಡಿಗರ ದುರಂತ.ಕನ್ನಡ ನೆಲದ ಅನ್ನ ಊಟ ಮಾಡುವ ಇವರಿಗೆ ಕನ್ನಡ ಭಾಷೆ ಬೇಡವೆ? ಕನ್ನಡಕ್ಕೆ ಅಪಮಾನವಾದರೆ ಗಡಿ ಕನ್ನಡಿಗರು ಸುಮ್ಮನಿರಲಾರೆವು.ಇಂತಹ ನಾಡದ್ರೋಹಿ ಕೆಲಸಕ್ಕೆ ಸ್ಥಳಾವಕಾಶ ಮಾಡಿ ಕೊಟ್ಟ ಕನ್ನಡದ ಅಧಿಕಾರಿಯಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಡೆ ಖಂಡನೀಯ.ಇಂದು ಚಿಂಚಣಿ ಸಿದ್ದಸಂ‌ಸ್ಥಾನಮಠದ ಮಠದ ಒಡೆಯರೂ ಕನ್ನಡ ಕಾಯುವ ಸಂತ ಶ್ರೀ ಮ.ನಿ.ಪ್ರ.ಸ್ವ ಅಲ್ಲಮಪ್ರಭು ಮಹಾಸ್ವಾಮಿಗಳವರ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಿಪ್ಪಾಣಿ ತಹಸಿಲ್ದಾರ್ ಕಾಯಾ೯ಲಯಕ್ಕೆ ತೆರಳಿ ತಹಸಿಲ್ದಾರರು ಮತ್ತು ತಾಲೂಕಾ ಪಂಚಾಯತ್ ಕಾಯ೯ನಿವಾ೯ಹಕ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.ಸ್ಪಂದಿಸಿದ ಕನ್ನಡದ ಅಧಿಕಾರಿಗಳು ಕ್ರಮಕೈಗೊಳ್ಳುವ ಭರವಸೆ ನೀಡಿದರು

ಕನ್ನಡದ ದಕ್ಷ ಅಧಿಕಾರಿ ಸದಲಗಾ ಪಿ ಎಸ್ ಆಯ್ ಕನ್ನಡ ಪ್ರೇಮ ಕೊಂಡಾಡಿ ಗಡಿ ಕನ್ನಡಿಗರಿಂದ ಬೆಂಬಲ ಸೂಚಿಸಲಾಯಿತು.ಈ ಸಂದಭ೯ದಲ್ಲಿ ಮಾತನಾಡಿದ ಚಿಂಚಣಿ ಪೂಜ್ಯರೂ ಬೆಡಕಿಹಾಳ ಕನ್ನಡದ ನೆಲ.ಆ.ನೇ ಉಪಾಧ್ಯಾಯ,ಡಾ ಡಿ.ಎಸ್ ಚೌಗಲಾ ರಂತಹ ಸಾಹಿತಿಗಳಿಗೆ ಜನ್ಮನೀಡಿದ ಭೂಮಿ.ಭಾಷಾಬಾಂಧವ್ಯದಿಂದ ಬದುಕುವ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಆಗಬಾರದು ಈ ನೆಲದ ಪ್ರಥಮ ಪ್ರಜೆ ಅಧ್ಯಕ್ಷರು ಮತ್ತು ಕನ್ನಡ ಅಧಿಕಾರಿಗಳು ಈ ರೀತಿ ಕನ್ನಡ ವಿರೋಧಿ ನಿಲುವು ತಾಳಿರುವುದು ಅಕ್ಷಮ್ಯ ಅಪರಾಧ.ಕನ್ನಡಿಗರು ಇದನ್ನು ಸಹಿಸಲಾರೆವು ಇವರ ವಿರುದ್ದ ಶಿಘ್ರ ಕ್ರಮ ಕೈಗೊಳ್ಳಬೇಕು ಅನಹ೯ಗೊಳಿಸಬೇಕೆಂದು ಗುಡುಗಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾಯ೯ದಶಿ೯ ಪ್ರೋ ಮಿಥುನ ಅಂಕಲಿ ಮಾತನಾಡಿ ಬೆಡಕಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕನ್ನಡಿಗರ ಕ್ಷಮೆಯಾಚಿಸಬೇಕು.ಕನ್ನಡದ ವಿಷಯ ಬಂದಾಗ ಎಚ್ಚರಿಕೆಯಿಂದ ಮಾತನಾಡಲಿ ಅನ್ನ ನೀಡುವ ಭೂಮಿ,ಅಧಿಕಾರ ಕೊಟ್ಟ ನೆಲದ ವಿರುದ್ದ ಮಾತನಾಡಿದರೆ ಗಡಿ ಕನ್ನಡಿಗರಾದ ನಾವು ಕೈಕಟ್ಟಿ ಕೂರುವುದಿಲ್ಲ ಕನ್ನಡ ನಾಡು ನುಡಿ ವಿರೋಧಿ ಹೇಳಿಕೆ ನೀಡಿದ ಅಧ್ಯಕ್ಷರು ಮತ್ತು ಸ್ಥಳಾವಕಾಶ ಕೊಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಲು ಕನಾ೯ಟಕ ಸರ್ಕಾರವನ್ನು ಆಗ್ರಹಿಸಿದರು.ಕರವೇ ಅಧ್ಯಕ್ಷರಾದ ಶ್ರೀ ಕಪಿಲ ಕುಳಿತೆ ಮಾತನಾಡಿ ನಾಡವಿರೋಧಿಗಳಿಗೆ ಧಿಕ್ಕಾರಕೂಗಿ ಕನ್ನಡಕ್ಕೆ ಅನ್ಯಾಯ ಆದರೆ ನಾವು ಸುಮ್ಮನಿರುವುದಿಲ್ಲ.ಕನ್ನಡನೆಲದ ಕಣದಲ್ಲಿರುವ ನೀವು ಕನ್ನಡದ ವಿರುದ್ದ ಮಾತನಾಡಿ ಕನ್ನಡಿಗರ ಮನನೋಯಿಸಿದಿರಿ ಕೂಡಲೇ ಇಬ್ಬರನ್ನು ವಜಾ ಮಾಡಲು ಆಗ್ರಹಿಸಿ ಹೋರಾಟ ತಿವ್ರ ಗೊಳಿಸುವ ಮುನ್ಸೂಚನೆ ನೀಡಿದರು

ಈ ಸಂದಭ೯ದಲ್ಲಿ ಚಿಂಚಣಿ ಪೂಜ್ಯರೂ,ಕನ್ನಡ ಸಾಹಿತ್ಯ ಪರಿಷತ್ತಿನ ಗೌ ಅಧ್ಯಕ್ಷರಾದ ಡಾ ಎಸ್ ಆರ್ ಪಾಟೀಲ್, ಸಂಘಟನಾ ಸದಸ್ಯ ಶ್ರೀ ರವೀಂದ್ರ ಶೆಟ್ಟಿ,ಕಸಾಪ ಕೋಶಾಧ್ಯಕ್ಷ ಶ್ರೀ ಶಿವಾನಂದ ಪುರಾಣಿಕಮಠ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಿಥುನ ಅಂಕಲಿ,ಗಡಿನಾಡು ಕನ್ನಡ ಬಳಗ ಸಂ.ಅಧ್ಯಕ್ಷರಾದ ಶ್ರೀ ಮಾರುತಿ ಕೊಣ್ಣುರಿ,ಕನ್ನಡಪರ* ಹೋರಾಟಗಾರರಾದ ವಿರಣ್ಣಾ ಗಿರಮಲ್ಲನವರ, ಶ್ರೀ ಮಾಚಿದೇವ ಭೋಂಸ್ಲೆ,ಶ್ರೀ ಮದಣ್ಣವರ ಸರ್,ಪತ್ರಕತ೯ರು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

 

Don`t copy text!