ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಂಗ ಸಂಸ್ಥೆಯಿಂದ ರಕ್ತದಾನ ಶಿಬಿರ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಂಗ ಸಂಸ್ಥೆಯಿಂದ ರಕ್ತದಾನ ಶಿಬಿರ

e-ಸುದ್ದಿ, ಇಳಕಲ್ಲ

ಇಲಕಲ್ಲಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ಅಂಗಸಂಸ್ಥೆ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ನಿಂದ ಇಂದು ವಿಶ್ವ ರಕ್ತದಾನ ದಿನಾಚರಣೆಯ ನಿಮಿತ್ತ ಫೋರಮ್ ನ ಸ್ವಯಂ ಸೇವಕರು ರಕ್ತದಾನ ಮಾಡುವ ಮೂಲಕ ಬಹು ಅರ್ಥಪೂರ್ಣವಾಗಿ ಈ ದಿನವನ್ನು ಆಚರಿಸಿದರು.

ಇಳಕಲ್ಲಿನ ವಿಜಯ ಮಹಾಂತೇಶ ಬ್ಲಡ್ ಬ್ಯಾಂಕನಲ್ಲಿ ಸೇರಿದ ಸುಮಾರು 20 ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದು ವಿಷೇಶವಾಗಿತ್ತು. ಈ ಶಿಬಿರದಲ್ಲಿ ಆಸ್ಪತ್ರೆಯ ವೈದ್ಯರಾದ ಶ್ರೀ ಮಹಾಲಿಂಗಪ್ಪ ಗೊಂಗಡಶೆಟ್ಟಿ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ನಗರಾಧ್ಯಕ್ಷ ರಿಯಾಜ್ ಬನ್ನು, ಅಂಜುಮನ್ ಸಂಸ್ಥೆ ಸದಸ್ಯ ನಜೀರ ಹರಕಾರಿ, ಶಾಮಿದ ರೇಶ್ಮೀ, ಸಮೀಯುಲ್ಲಾ ವೆಂಕಟಾಪುರ ಹಾಜರಿದ್ದರು.

Don`t copy text!