ಉಪೆಂದ್ರ ಗೆಳೆಯರ ಬಳಗದಿಂದ ಕಿಟ್ ವಿತರಣೆ.
e-ಸುದ್ದಿ, ಕಾನಿಹಾಳ
ಒಬ್ಬರು ಎಲ್ಲರಿಗಾಗಿ ಎಲ್ಲರು ಒಬ್ಬರಿಗಾಗಿ ಎಂಬ ತತ್ವದಡಿ ಬದುಕುವುದೇ ನಿಜವಾದ ಮಾನವಧರ್ಮ. “ದಯವಿಲ್ಲದಾಧರ್ಮ ಅದಾವುದಯ್ಯ ದಯಬೇಕು ಸಕಲ ಜೀವಾತ್ಮರಲ್ಲಿ ಎಂಬಂತೆ ಈ ಪುಣ್ಯಮಯ ಕಾರ್ಯ ನಿಮ್ಮಿಂದ ಅನವರತ ನಡೆಯಲಿ ಎಂದು ವಾಲ್ಮೀಕಿ ಸಮುದಾಯದ ಗುರುಗಳಾದ ಶ್ರೀ ಆತ್ಮಾನಂದ ಸ್ವಾಮಿಗಳು ಹೇಳಿದರು.
ಮಸ್ಕಿ ತಾಲೂಕಿನ ಕಾನಿಹಾಳ ಗ್ರಾಮದಲ್ಲಿ ಉಪೇಂದ್ರ ಗೆಳೆಯರ ಬಳಗದವತಿಯಿಂದ ,ಅಂಗನವಾಡಿ ಕಾರ್ಯಕರ್ತೆಯರು ಸಮ್ಮುಖದಲ್ಲಿ, ಕಾನಿಹಾಳ ಕ್ಯಾಂಪಿನಲ್ಲಿ ಮಾಸ್ಕ ಮತ್ತು ದವಸ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಹಾರೈಸಿದರು.
ಗ್ರಾಮದ ಶರಣಪ್ಪ ಕುರ್ಲಿ , ಶರಣಪ್ಪ y, ಹನುಮಂತ ನಾಯಕ್, ನಿರುಪಾದಿ h , ಈಶಪ್ಪ m, ಬಸವ ಸಿಂಧನೂರ್, ಕುಪ್ಪಣ್ಣ k , ರಾಜೇಶ್ ಕೆ, ಪಿ ಗೌಡ ಅಗಸಿ ಮನಿ ಇದ್ದರು.
ವರದಿ – ಸುರೇಶ ಬಳಗಾನೂರು.