ಟಂಕಾ
1 -ಮಂತ್ರ
ಮಾನವೀಯತೆ
ವಚನದ ಸರ್ವಸ್ವ
ಶುದ್ಧ ಕಾಯಕ
ಶರಣರ ನುಡಿ ತತ್ವ
ಸರ್ವ ಸಮಾನ ಮಂತ್ರ.
2 – ಭಸ್ಮ
ಭಸ್ಮ ಧರಿಸಿ
ಭುವಿಯ ಜಯಿಸೋಣ
ಭಸ್ಮವೇ ದೈವ
ಭಸ್ಮವೇ ಎಮ್ಮ ಜೀವ
ಆಭರಣವೆಮಗೆ.
3 -ಶರಣರು.
ಶರಣ ಸಂಗ
ವೈಚಾರಿಕ ನಿಲುವು
ವಚನಸಾರ
ಸವಿದುಂಡು, ಜ್ಞಾನದಿ
ಶರಣರೇ ಆಗುವಾ.
4 -ಅನಾವರಣ
ಪರಿಪೂರ್ಣತೆ
ಶರಣರ ಜೀವನ
ಅನುಸಂಧಾನ
ಅರಿವಿನ ಸಾರ್ಥಕ
ಭವ್ಯ ಅನಾವರಣ.
5 -ಶರಣರು
ಮಂತ್ರ ಪುರುಷ
ಬಸವಣ್ಣನವರು
ಜಗಕೆ ಜ್ಯೋತಿ
ಪರುಷಮಣಿಯಾಗಿ
ಹರುಷವಾ ತಂದರು.
6- ಬಸವ
ಬಸವಾ ನಿಮ್ಮ
ಕಾಯಕದ ಮಂತ್ರವು
ದಾಸೋಹ ತತ್ವ
ನಿತ್ಯ ಲಿಂಗಾರ್ಚನೆಯು
ಜಗಕೆ ಮಾದರಿಯು.
7 -ಕ್ರಾಂತಿ ಕಹಳೆ
ಬಸವಾ ನಿಮ್ಮ
ವೈಚಾರಿಕ ಬದುಕು
ಸಮಾನ ತತ್ವ
ಕ್ರಾಂತಿಕಹಳೆಯಲಿ
ಬದಲಾಯ್ತು ಜಗವು.
8 -ಯುಗ ಪುರುಷ
ಬಸವಾ ನೀವು
ಏಕದೇವೋಪಾಸೆಯ
ಹರಿಕಾರರು
ಲಿಂಗ ನಡೆ ನುಡಿಯ
ಯುಗಪುರುಷ ನೀವು.
9 -ಸಾಮರಸ್ಯ
ಚೆಂದಾದ ನುಡಿ
ಸಂಗಯ್ಯನೋಲಿಸಿದ
ಒಂದಾದ ನಡೆ
ಅಂಗಗುಣವಳಿದ
ಲಿಂಗಾಂಗಸಾಮರಸ್ಯ
10- ಯುಗಪ್ರವರ್ತಕ
ಭಕ್ತಿ ಮಾರ್ಗದಿ
ಮುಕ್ತಿ ಪಥದೆಡೆಗೆ
ಮೌಢ್ಯವಳಿಸಿ
ಕಾಯಕದಿ ಬೆಳೆಸಿ
ಯುಗಪ್ರವರ್ತಕರು
–ಸವಿತಾ ಮಾಟೂರು ಇಲಕಲ್ಲ