ತುಂಗಭದ್ರಾದಿಂದ ಕೃಷಿಗೆ ಹೆಚ್ಚು ನೀರು-ತಿಪ್ಪೆರುದ್ರಸ್ವಾಮಿ
e-ಸುದ್ದಿ, ಲಿಂಗಸಗೂರು:
ತುಂಗಭದ್ರಾ ಅಚ್ಚುಕಟ್ಟುಪ್ರದೇಶದಲ್ಲಿ ಕೈಗಾರಿಕೆಗಳಿಗಿಂತ ಕೃಷಿಗೆ ನೀರು ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿಯವರು ಹೇಳಿದರು
ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕೈಗಾರಿಕೆಗಳು ಮತ್ತು ಅವುಗಳು ಬಳಸುತ್ತಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಲಾಗುತ್ತದೆ ಕೈಗಾರಿಕೆಗಳಿಗಿಂತ ಕೃಷಿಗೆ ಹೆಚ್ಚು ನೀರು ಕೊಡುವ ಪ್ರಯತ್ನವನ್ನು ಮಾಡಲಾಗುತ್ತಿದೆ ತುಂಗಭದ್ರಾ ಎಡದಂಡೆ ನಾಲೆಯ ೭೬ನೇ ಕಿ,ಮೀ ನ ೧೬೬ನೇ ಉಪಕಾಲುವೆಯ ಹತ್ತಿರ ನಾಲೆಗೆ ಭೋಂಗಾ ಬಿದ್ದಿರುವ ಬಗೆಗೆ ನಮ್ಮ ಗಮನಕ್ಕೆ ಬಂದಿದ್ದು ಸದರಿ ಸ್ಥಳಕ್ಕೆ ಭೇಟಿ ನೀಡಿ ಅದರ ರಿಪೇರಿಯನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತುಂಗಭದ್ರಾ ಡ್ಯಾಂ ನಲ್ಲಿ ೩೪ ಟಿಎಂಸಿ ಹೂಳು ತುಂಬಿದ್ದು ನೀರು ವೃತಾಪೋಲಾಗುತ್ತಿದೆ ಮಳೆಗಾಲದಲ್ಲಿ ಹರಿದು ಹೋಗುತ್ತಿದ್ದು ಗಂಗಾವತಿಯ ನವಲಿ ಹತ್ತಿರದಲ್ಲಿ ಸಮಾನಾಂತರ ಜಲಾಶಯ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಸದರಿ ಜಲಾಶಯಕ್ಕೆ ೨೩ ಸಾವಿರ ಹೆಕ್ಟರ್ ಜಮೀನು ಬೇಕಾಗುತ್ತದೆ ೧೩ ಗ್ರಾಮಗಳು ಮುಳುಗಡೆಯಾಗಲಿವೆ ಜಲಾಶಯ ನಿರ್ಮಾಣವಾದರೆ ೩೩ ಟಿಎಂಸಿ ನೀರು ಸಂಗ್ರಹವಾಗಲಿದ್ದು ಮಾನ್ವಿ ರಾಯಚೂರು ಮುಂತಾದ ಕೆಳಭಾಗದ ರೈತರ ನೀರಿನ ಭವಣೆ ಪರಿಹಾರವಾಗಲಿದೆ ಅಲ್ಲದೆ ಈಗಾಗಲೆ ಸಿಂಧನೂರ ತಾಲೂಕಿನ ಹೆಡಗಿನಾಳ ಮಾನ್ವಿ ತಾಲೂಕಿನ ರಾಗಲಪರ್ವಿ, ರಾಯಚೂರಿನ ರಾಜಲಬಂಡಾದ ಹತ್ತಿರ ಸಮಾನಂತರ ಜಲಾಶಯ ಮಾಡಲು ಯೋಚಿಸಲಾಗಿತ್ತು ಕಾರ್ಯಗತವಾಗಿಲ್ಲವೆಂದರು.
ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ನಮ್ಮ ಭಾಗದ ಜೀವನದಿಗಳಾಗಿದ್ದು ಅವುಗಳಿಗೆ ನಿರ್ಮಿಸಿರುವ ಜಲಾಶಯಗಳು ನಮಗೆ ಹಂಚಿಕೆಯಾದ ನೀರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತಿವೆ ತುಂಗಭದ್ರಾದಲ್ಲಿ ಹೂಳುತುಂಬಿ ಪೋಲಾಗುತ್ತಿದ್ದರೆ ಕೃಷ್ಣಾದಲ್ಲಿ ಆಲಮಟ್ಟಿ ಡ್ಯಾಂ ಎತ್ತರಿಸದೆ ಇರುವುದರಿಂದ ಪೋಲಾಗುತ್ತಿದೆ ಅದಕ್ಕಾಗಿ ಆಲಮಟ್ಟುಯನ್ನು ೫೧೯ರಿಂದ ೫೨೪ ಅಡಿಗೆ ಹೆಚ್ಚಿಸಬೇಕಾಗಿದೆ ಅಂದಾಗ ಮಾತ್ರ ನಂದವಾಡಿಗಿ ಯೋಜನೆ ಸೇರಿದಂತೆ ಇತರೆ ಯೋಜನೆಗಳಿಗೂ ನೀರು ದೊರೆಯುತ್ತದೆ ಮತ್ತು ಕರ್ನಾಟಕದ ಪಾಲು ಸಿಕ್ಕಂತಾಗುತ್ತದೆ ೫ಎ ನಾಲೆಯನ್ನು ಮಂಜೂರು ಮಾಡಬೇಕೆಂದು ಮಸ್ಕಿಕ್ಷೇತ್ರದ ರೈತರ ಒತ್ತಾಯವಿದೆ ಅದರ ಬಗೆಗೆ ಮುಖ್ಯಮಂತ್ರಿಗಳ ಗಮನವನ್ನು ಸೆಳೆಯಲಾಗಿದೆ
ಅಲ್ಲದೆ ತುಂಗಭದ್ರಾ ನೀರು ಬಳಕೆದಾರರ ಸಂಘಗಳಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಮತ್ತು ಗ್ಯಾಂಗ್ ಮನ್ ಗಳ ಕೊರತೆ ಇದ್ದು ಅದನ್ನು ಸರಿಪಡಿಸಲಾಗುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ದೊಡ್ಡನಗೌಡ ಹೊಸಮನಿ, ವಿನಯಕುಮಾರ, ಸೇರಿದಂತೆ ಇದ್ದರು