ಮಧುಚಂದ್ರದ ಸಂಭ್ರಮಕೆ
ನಲ್ಲೇ ನಿನ್ನ ಹುಬ್ಬುಗಳ ಬಾಗಿಸಿ
ತಿದ್ದಿ ತೀಡಿ ನುಣುಪಿಸಿದವರಾರು
ಕಡು ಕಪ್ಪು ಕಣ್ಣಿಗೆ ಹೊಳಪು
ಸೆಳೆತದ ಮಿಂಚಿಟ್ಟವರಾರು ||
ನೆರೆ ಕೆನ್ನೆಗಿಲ್ಲ
ಬಿಡು ಅಂದಕಿಲ್ಲ ಸಾಟಿ
ಮಲ್ಲಿಗೆ ಮುಡಿದಿಹ ನಿನ್ನಂದ
ನಿಲ್ಲುವುದು ಎಲ್ಲವನು ದಾಟಿ ||
ತುಟಿಗಳೊ ಸಿಹಿ
ಜೇನಿನ ಮುದ್ದೆ
ಮುತ್ತಿಡುವ ಆಸೆ
ಆಗದು ಭಯದಿ
ಬೆವತು ಮೈಯಲ್ಲ ಒದ್ದೆ ||
ಅದೆಂತ ಬಿಂಕವೇ ನಿನ್ನದು
ಎದೆತುಂಬ ಬಿಗುಮಾನ
ಏನೋ ಹೇಳುತಿವೆ ಕಣ್ಣು
ತುಟಿಗಳೇಕೋ ಮೌನ ||
ಬಿಡು ಅವುಗಳನೆಲ್ಲ
ನಾನಿಲ್ಲವೇ ಚೆಲುವ ಕನ್ನಿಕೆ
ಹಾರೋಣ ಬಾನಾಚೆ
ಚಂದಿರನ ಅಂಗಳಕೆ
ಮಧುಚಂದ್ರದ ಸಂಭ್ರಮಕೆ ||
✍️ ಆದಪ್ಪ ಹೆಂಬಾ ಮಸ್ಕಿ
ಇಂದಿನ ಸಂಚಿಕೆಯ ಪ್ರಾಯೋಜಕರು ಲಿಂಗಸುಗೂರಿನ SUM ಕಾಲೇಜು