ಭಾರತದ ಮೊಟ್ಟ ಮೊದಲ ಫುಟ್ಬಾಲ್ ಮಹಿಳಾ ತೀರ್ಪುಗಾರ್ತಿ ರೂಪಾ
ತಮಿಳುನಾಡಿನ ಪುಟ್ಟ ಹಳ್ಳಿಯಲ್ಲಿ ಬಡ ಕುಟುಂಬದ ಮಗಳಾಗಿ ರೂಪಾ ಜನಿಸಿದ್ದಳು.ತಂದೆ ತಾಯಿ ಚಿಕ್ಕ ಗೂಡಂಗಡಿ ಇಟ್ಟುಕೊಂಡು ಅದರಲ್ಲಿ ಬಂದ ಲಾಭದಲ್ಲಿ ಜೀವನೋಪಾಯ ಮಾಡುತ್ತಿದ್ದರು.
ಬಾಲ್ಯದಲ್ಲಿ ತುಂಬಾ ಚೂಟಿಯಾಗಿ ಶಾಲಾ ತಂಡದಲ್ಲಿ ಫುಟ್ಬಾಲ್ ಆಟವನ್ನು ರೂಪಾ ಆಡುತ್ತಿದ್ದಳು.ಕಾಲಾಂತರದಲ್ಲಿ ಅನಾರೋಗ್ಯದಿಂದ ತಾಯಿ ತೀರಿಕೊಂಡಳು, ತಂದೆಯೂ ಅವಳ ಚಿಂತೆಯಲ್ಲಿ ಒಂದು ವರ್ಷದೊಳಗೆ ಸಾವನಪ್ಪಿದ,ಅನಾಥಳಾದ ರೂಪಾಳಿಗೆ ಮಾನಸಿಕವಾಗಿ ವ್ಯಥೆಯಾಗಿ ಬದುಕು ಬಲು ಕಠಿಣವಾಯಿತು.
ಧೃತಿಗೆಡದ ರೂಪಾ ತನ್ನ ಇಷ್ಟದ ಕ್ರೀಡೆ ಫುಟ್ಬಾಲ್ ಆಟದ ಕಡೆಗೆ ಗಮನಹರಿಸಿ ಸಾಧನೆ ಮೆರೆದಿದ್ದಾಳೆ.
ಇಂದು ಆಕೆ ಅಂತರಾಷ್ಟೀಯ ಫೀಫಾ
ರೆಫರಿಯಾಗಿ ಭಾರತದ ಮೊಟ್ಟ ಮೊದಲನೇ ಮಹಿಳಾ ತೀರ್ಪುಗಾರ್ತಿ ಎಂಬ ಹಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಈಕೆಯ ಬದುಕು ಇತರರಿಗೂ ಮಾದರಿಯಾಗಲಿ.
–ಸಾಹಿತ್ಯಪ್ರಿಯ ಶಂಕರ