ಭಿಕ್ಷೆ ಬಡವರಿಗೆ ನೇರವಾಗಬೇಕು: ದಾವಲಮಲ್ಲಿಕ್ ಜೋಳಿಗೆ ಅಜ್ಜ

ಲಿಂಗಸುಗೂರು: ಸರ್ಜಾಪೂರು ಗ್ರಾಮದ ಅಮರಮ್ಮ ಗಂ ದಿ.ಶಿಲವಂತಪ್ಪ ಛಲವಾದಿ ಇವರು ಮಳೆಯಿಂದ ತೊಂದರೆ ಅನುಭವಿಸಿದ್ದರು.

ದಾವಲಮಲ್ಲಿಕ್ ಜೋಳಿಗೆ ಅಜ್ಜನವರು, ಅಮರಮ್ಮ ಛಲವಾದಿ ಇವರ ಮನೆಗೆ ಭೇಟಿ ನೀಡಿದ ಅಜ್ಜನವರು ಆಶ್ರಮದ ಜೋಳಿಗೆ ಭೀಕ್ಷೆಯಿಂದ ಬಂದ ಹಣದೊಂದಿಗೆ ಅಮರಮ್ಮನವರ ಮಕ್ಕಳಲ್ಲಿ ಒಬ್ಬ ಮಗನಿಗೆ ವಿದ್ಯಾಬ್ಯಾಸ ಮಾಡಲು, ಒಬ್ಬ ಮಗಳಿಗೆ ಮದುವೆ ಮಾಡುವ ಜವಬ್ದಾರಿ ನಮಗೆ ಇರಲಿ ಎಂದು ಒಪ್ಪಿಕೊಂಡು ಸಾಂತ್ವಾನ ಹೇಳಿದರು.

ಇವರು ವಾಸಮಾಡಲು ಇವರುವಂತ ತಾತ್ಕಾಲಿಕ ಶೆಡ್ ಮೆನಯನ್ನು ತೆಗೆದು ಹೊಸಮನೆಯನ್ನು ಕಟ್ಟಿಕೊಳ್ಳಲು ಸಂಪೂರ್ಣ ವೆಚ್ಚ ಕೊಡುವದಾಗಿ ಭರವಸೆ ನೀಡಿದರು.

ಹಿನ್ನೇಲೆ: ಲಿಂಗಸುಗೂರು ತಾಲೂಕ ಮಸ್ಕಿ ಕ್ಷೇತ್ರಕ್ಕೆ ಬರುವ ಸರ್ಜಾಪೂರು ಗ್ರಾಮದ ಅಮರಮ್ಮ ದಿ. ಶಿಲವಂತಪ್ಪನವರು ಸುಮಾರು 15 ವರ್ಷಗಳಿಂದ ಗಂಡ ತಿರಿದ ನಂತರ ಸಂಸಾರ ನಡೆಸುವುದು ಬಹಳ ಕಪ್ಟವಾಗಿತ್ತು. ನಾಲ್ಕು ಮಕ್ಕಳ ಜೋಪಾನ ಮಾಡುತ್ತ ಕೂಲಿ ನಾಲಿ ಮಾಡುತ್ತ ಜೀವನ ಸಾಗಿಸಿಕೊಂಡು ಬಂದಿದ್ದರು.  ಇವರಿಗೆ ಬದುಕಲು ಒಂದು ಗುಂಟಿ ಜಮೀನು ಕೂಡ ಇಲ್ಲ, ವಾಸ ಮಾಡಲು ಒಂದು ಚಿಕ್ಕ ಮನೆಕೂಡ ಇರುವುದಿಲ್ಲ ಹದಿನೈದು ವರ್ಷಗಳಿಂದ ಒಂದು ತಗಡಿನ ಶೇಡ್ನಲ್ಲಿ ವಾಸಮಾಡಿಕೊಂಡು ಬಂದಿದ್ದರು.
ಈ ಬಾರಿ ಮಳೆಗೆ ಶೇಡ್ ಮನೆಯಲ್ಲಿ ನೀರು ತುಂಬಿ ವಾಸ ಮಾಡಲು ಬಹಳ ಕಷ್ಟವಾಗಿತ್ತು ಎಂದು ಜೋಳಿಗೆ ಅಜ್ಜನವರ ಮುಂದೆ ಅಳಲನ್ನು ತೊಡಗಿಕೊಂಡಿದ್ದಳು.

ವಧು ವರರ ಮಾಹಿತಿಗಾಗಿ ಸಂರ್ಪಕಿಸಿ

One thought on “ಭಿಕ್ಷೆ ಬಡವರಿಗೆ ನೇರವಾಗಬೇಕು: ದಾವಲಮಲ್ಲಿಕ್ ಜೋಳಿಗೆ ಅಜ್ಜ

Comments are closed.

Don`t copy text!