ಭಾವಗಳೂರು
ವ್ಯಾಮೋಹದ ಸೋಂಕಿಗೆ
ಪ್ರೀತಿ ಸ್ನೇಹದ ನಾಮ,
ಪ್ರೇಮ ಮಂತ್ರದ ಸಾಂಗತ್ಯ
ಕಾಮದಲಿ ಅಂತ್ಯ… ಭಾವಗಳೆಲ್ಲ ಧೂಳಿಪಟ
ಕೂಡಿದ ಸಾಕ್ಷಿಗೆ ಚಿಗುರು ಇದೆ
ತಪ್ಪಿದ ನೀತಿಗೆ ಎಲ್ಲಿದೆ ಸುದಾರಿ?
ಒಪ್ಪುವ ಮುನ್ನದ ಅರಿವು
ಉದ್ವೇಗದಲ್ಲಿ ಚಿಂದಿ ಚಿಂದಿ…
ಪ್ರಾಯಶ್ಚಿತ್ತಕ್ಕೆ ಕೂಸು ಹುಟ್ಟಿದೆ
ಕಾರಣನಾದವನಿಲ್ಲ ಉಸಿರುಗಟ್ಟಿದೆ
ಕೆಂಗಣ್ಣುಗಳಲ್ಲಿ ವಿಭಿನ್ನ ಬಿಂಬ
ಮಾತಿಗೆ ನಾನಾದೆ ಬಿದಿರು ಕಂಬ…
ಮನಸೀಗ ಭಾವಗಳೂರು
ವ್ಯಥೆಗಳ ತವರು, ಯವ್ವನದ ಮಂಥನ
ಕಥನವಾಗಿದೆ ಕವಿಗೀಗ
ಸಿಕ್ಕು ಆದರ್ಶಕೆ ಬದಲಾವಣೆಗೆ ದಕ್ಕಿದೆ
ಕಾಲ್ಪನಿಕ… ಅಲ್ಲ ಕಾಮವೂ ಇಲ್ಲ
ನಿಸ್ವಾರ್ಥ ಪ್ರೇಮ ಸಾರ್ಥಕತೆಯೆಡೆಗೆ
ಭಾವಗಳ ಯಜ್ಞ ಕುಂಡ ಸಿದ್ಧಿಯಾಗಿದೆ
ಪ್ರೇಮದ ಬೆಳಕೀಗ ಹರಡಿದೆ,
ದುಃಖ ದುಮ್ಮಾನದ ಜೊತೆ
ವಿರಸಗಳ ಆಹುತಿಯಾಗಿ….
ಸರಸದ ಭಾವದೂರಿಗೆ….. ಪಯಣ
ದೂರಿಲ್ಲದೆ…. ಭದ್ರವಾಗಿದೆ…. ಸತ್ಸಂಗದಿ
– ವರದೇಂದ್ರ ಕೆ ಮಸ್ಕಿ
9945253030