“ಸ್ವಚ್ಛತಾ ಪಾಕ್ಷಿಕ” ಕಾರ್ಯಕ್ರಮ
e-ಸುದ್ದಿ, ಬೈಲಹೊಂಗಲ
75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ “ಸ್ವಚ್ಛತಾ ಪಾಕ್ಷಿಕ” ಕಾರ್ಯಕ್ರಮ
ಚನ್ನಮ್ಮನ ಕಿತ್ತೂರು : ನೆಹರು ಯುವ ಕೇಂದ್ರ ಬೆಳಗಾವಿ ಇವರ ನೇತೃತ್ವದಲ್ಲಿ ಚನ್ನಮ್ಮನ ಕಿತ್ತೂರು ತಾಲೂಕಿನ ಮೆಟ್ಯಾಳ ಗ್ರಾಮದ ಯುವಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಸಹಭಾಗಿತ್ವದಲ್ಲಿ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೆಹರು ಯುವ ಕೇಂದ್ರದ ತಾಲೂಕಾ ಸ್ವಯಂ ಸೇವಕರಾದ ರಾಘವೇಂದ್ರ ತಳವಾರ, ಮತ್ತು ರುದ್ರಪ್ಪ ಶಿವಪೂಜಿ ಇವರ ಮುಂದಾಳತ್ವದಲ್ಲಿ ಗ್ರಾಮದ ಶಾಲಾ ಆವರಣದಲ್ಲಿದ್ದ ಅನುಪಯುಕ್ತ ಗಿಡಗಂಟಿ, ಪ್ಲಾಸ್ಟಿಕ್, ಗಾಜುಗಳನ್ನು ತೆರವು ಮಾಡುವುದರ ಮೂಲಕ ಮತ್ತು ವಿದ್ಯುತ್ ಕಂಬಗಳಿಗೆ ಅಂಟಿಕೊಂಡು ಬೆಳೆದಿದ್ದ ಅಪಾಯವನ್ನೋಡ್ಡುವ ಮರದ ಟೊಂಗೆಗಳನ್ನು ಸುರಕ್ಷಿತವಾಗಿ ಕಡಿದು ಹಾಕುವುದರ ಮೂಲಕ ಸ್ವಚ್ಛತಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಲಮೇತ್ರಿ ಅವರು ಮಾತನಾಡಿ ಮಹಾತ್ಮಾ ಗಾಂಧೀಜೀ ಕಂಡ “ಗ್ರಾಮ ಸ್ವರಾಜ್ ಮತ್ತು ನೈರ್ಮಲ್ಯ ಗ್ರಾಮದ” ಕನಸು ನನಸು ಮಾಡುವಲ್ಲಿ ಇಂದಿನ ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಸ್ವಯಂ ಸಹಭಾಗಿತ್ವದ ಅವಶ್ಯಕ ಇದೆ ಮತ್ತು ಈ ನಿಟ್ಟಿನಲ್ಲಿ ನೆಹರು ಯುವ ಕೇಂದ್ರದ ಸ್ವಯಂ ಸೇವಕರು ಮುಂದಾಗಿದ್ದು ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ತುಂಬಾ ಒಳ್ಳೆಯ ನಿರ್ಧಾರ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕಿತ್ತೂರು ತಾಲೂಕಾ ಸ್ವಯಂ ಸೇವಕರಾದ ರಾಘವೇಂದ್ರ ತಳವಾರ ಯುವಕರಿಗೆ “ಸ್ವಚ್ಛತಾ ಪ್ರತಿಜ್ಞಾ” ವಿಧಿಯನ್ನು ಬೋಧಿಸಿದರು. ಹಾಗೂ ಯುವಕರಾದ ಜ್ಞಾನೇಶ್ವರ ಹರಿಜನ, ವಿನಾಯಕ ಮಾಳಗಿ, ಮಡಿವಾಳಪ್ಪ ಶಿವಪೂಜಿ, ಮೈಲಾರ ಹಾಗೂ ಇನ್ನೀತರರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕೊನೆಗೆ ರುದ್ರಪ್ಪ ಶಿವಪೂಜಿ ವಂದಿಸಿದರು.