ಶರಣರ ಮಹಾತ್ಮರ ವಚನ ಪ್ರಚಾರಗೊಳಿಸಲು ಕ್ರಮ
e-ಸುದ್ದಿ ಧಾರವಾಡ
ನಾಡಿನ ಶರಣರ ಮತ್ತು ಮಹಾತ್ಮರ ವಚನಗಳ ಪ್ರಚಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠವು ತನ್ನ ಸುವರ್ಣ ಮಹೋತ್ಸವ ವರ್ಷಾಚರಣೆ ಸಂಭ್ರಮದ ಪ್ರಯುಕ್ತ ವಚನಾಮೃತ ಸರಣಿ ಕಾರ್ಯಕ್ರಮ ಆಯೋಜಿಸಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಕೆಬಿ ಗುಡಿಸಿ ಹೇಳಿದರು.
ಕವಿವಿ ಬಸವೇಶ್ವರ ಪೀಠ ಮತ್ತು ಆಕಾಶವಾಣಿ ಕೇಂದ್ರದ ಸಹಯೋಗದಲ್ಲಿ ವಚನಾಮೃತ ಎಂಬ ಸರಣಿ ಪ್ರಾಯೋಜಕತ್ವದ ಕಾರ್ಯಕ್ರಮದ ಪೂರ್ವಭಾವಿ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.
ಶೈಕ್ಷಣಿಕ ಸಂಶೋಧನೆ ಅಧ್ಯಯನ ಸಂಸ್ಕೃತಿ ಮುಂತಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಒಂದು ಪ್ರಬಲವಾದ ಮಾಧ್ಯಮವಾಗಿದ್ದು ಮಾಧ್ಯಮದ ಮೂಲಕ ವಚನಕಾರರ ಸಾರ್ವಕಾಲಿಕ ಪ್ರಸ್ತುತತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ ಎಂದರು.
ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥ ಡಾಕ್ಟರ್ ಬಸು ಬೇವಿನ ಗಿಡದ ಮಾತನಾಡಿ ವಚನಪರಂಪರೆಯ ಬಗ್ಗೆ ಅನೇಕ ವಿಶಿಷ್ಟ ಸರಣಿಗಳನ್ನು ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದ್ದು ವಚನಾಮೃತ ಕೂಡ ಇಂತಹ ಒಂದು ಹೊಸಬಗೆಯ ಪ್ರಯತ್ನವಾಗಿದ್ದು ಕೇಳುಗರಿಗೆ ಶರಣ ಮಹಾತ್ಮ ಮತ್ತು ಚಿಂತಕರ ವಚನಗಾಯನ ಗಳನ್ನು ಕೇಳಬಹುದಾಗಿದೆ ಎಂದರು.
ಬಸವೇಶ್ವರ ಪೀಠದ ಸಂಯೋಜಕ ಸಿಎಂ ಕುಂದಗೋಳ ಮಾತನಾಡಿ ಆಗಸ್ಟ್ 22 ರಿಂದ ಪ್ರಸಾರವಾಗಲಿರುವ ವಚನಾಮೃತ ಕಾರ್ಯಕ್ರಮದಲ್ಲಿ ಹಲವು ವಚನಕಾರರ ವಿಶಿಷ್ಟ ವಚನಗಳ ನಿರ್ವಚನ ಹಾಗೂ ವಚನ ಗಾಯನವನ್ನು ಒಳಗೊಂಡಿರುತ್ತದೆ. ಡಾಕ್ಟರ್ ವೀರಣ್ಣ ರಾಜೂರ ರಂಜಾನ್ ದರ್ಗಾ ಬಸವಲಿಂಗ ಸೊಪ್ಪಿಮಠ ಡಾಕ್ಟರ್ ವೀಣಾ ಹೂಗಾರ್ ಡಾಕ್ಟರ್ ಗುರುದೇವಿ ಹುಲೆಪ್ಪನವರಮಠ ಡಾಕ್ಟರ್ ಎಂ ವೈ ಯಾಕೊಳ್ಳಿ ಡಾಕ್ಟರರು ವಿಜಯ ಶ್ರೀ ಹಿರೇಮಠ ಮುಂತಾದವರು ಮಾತನಾಡಿ ಹಲವು ವಿದ್ವಾಂಸರಿಂದ ವಚನಗಳ ವಿಶ್ಲೇಷಣೆ ನಡೆಯಲಿದೆ ಅಲ್ಲದೆ ಮಲ್ಲಿಕಾರ್ಜುನ ಡಾಕ್ಟರ್ ಬಸವರಾಜ ರಾಜಗುರು ಪಂಡಿತ್ ವೆಂಕಟೇಶ್ ಕುಮಾರ್ ಶಿವಾನಂದ ಪಾಟೀಲರು ಸುಭದ್ರಮ್ಮ ಮನಸೂರ ಮುಂತಾದ ಹಲವು ಪ್ರಖ್ಯಾತ ಧ್ವನಿ ನೀಡಿರುವ ಅಪೂರ್ವ ವಚನಗಳನ್ನು ಈ ಕಾರ್ಯಕ್ರಮದಲ್ಲಿ ಆಲಿಸಬಹುದು ಈ ಕಾರ್ಯಕ್ರಮ ಪ್ರತಿ ಭಾನುವಾರ ಬೆಳಗ್ಗೆ 7.15 ಕ್ಕೆ ಹಾಗೂ ಧಾರವಾಡದ ವಿವಿಧ ಭಾರತಿ ಇಂದ ಪ್ರತಿ ಸೋಮವಾರ ಬೆಳಿಗ್ಗೆ ಒಂಬತ್ತಕ್ಕೆ ಮರು ಪ್ರಸಾರವಾಗುವುದು ಎಂದುತಿ ತಿಳಿಸಿದ್ದಾರೆೆ.