ಮೊಹರಮ್ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ ಇಬ್ಬರ ಸಾವು.
e-ಸುದ್ದಿ, ಮಸ್ಕಿ
ಸಮೀಪದ ಸಂತೆಕೆಲ್ಲೂರಿನಲ್ಲಿ ಶುಕ್ರವಾರ ಬೆಳಿಗಿನ ಜಾವ ಮೊಹರಂ ಹಬ್ಬದ ನಿಮಿತ್ತ ನಡೆದ ಕತ್ತಲ ರಾತ್ರಿ ಮೆರವಣಿಗೆಯಲ್ಲಿ ಅಲೈ ದೇವರಿಗೆ ವಿದ್ಯೂತ್ ತಗಲಿದ್ದರಿಂದ ಇಬ್ಬರು ಸಾವಿಗೀಡಾಗಿದ್ದಾರೆ.
ಗ್ರಾಮದ ಹುಸೇನಬಾಷ ದೇವರನ್ನು ಹೊತ್ತ ಮೆರವಣಿಗೆ ಮಾಡುವ ಸಂದರ್ಭದಲ್ಲಿ ದೇವರಿಗೆ ಹಾಕಿದ್ದ ಬೆಳ್ಳಿ ಛತ್ರಿಗೆ ವಿದ್ಯುತ್ ತಂತಿ ತಗಲಿದ್ದರಿಂದ ದೇವರನ್ನು ಹೊತ್ತಿದ್ದ ಹಸೇನಸಾಬ್(50) ಹಾಗೂ ಅದೇ ಗ್ರಾಮದ ಹುಲಿಗೆಮ್ಮ (21) ಮಹಿಳೆ ಸಾವಿಗೀಡಾಗಿದ್ದಾರೆ.
ಸ್ಥಳದಲ್ಲೇ ಬಿದ್ದದನ್ನು ನೋಡಿದ ಸಾರ್ವಜನಿಕ ತಕ್ಷಣಕ್ಕೆ ಲಿಂಗಸೂರು ತಾಲ್ಲೂಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.
ಅಲ್ಲದೇ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಮಸ್ಕಿ ಪೋಲಿಸರ ಬೇಟಿ ನೀಡಿದ್ದಾರೆ.