ಸಂಯಮಿ ಸ್ನೇಹಿತ
ಸೃಷ್ಟಿಕರ್ತನ ಮಹಾನ್ ಸೃಷ್ಟಿಯು ನೀ ಜೇನ್ನೊಣವೇ.
ನಿನ್ನ ಶ್ರಮ ತ್ಯಾಗ ಸಮಯಪ್ರಜ್ಞೆ ಗೆ ನಾ ತಲೆದೂಗುವೆ.
ನಗುತ ನಲಿವ ಹೂ ಬನವ ನೀ ಸುತ್ತಿ ಸುತ್ತಿ.
ಮಕರಂದ ಹೀರಿ ಮಾಡಿದ ಸಿಹಿ ಜೇನು ನೀಡುತ್ತಿ.
ನೀನು ತಯಾರಿಸಿದ ಅಮೃತಸಮಾನ ಜೇನಿನ ಸವಿಗೆ.
ಮನಸೋತು ನಮಸ್ಕರಿಸಿದೆ ನಿನ್ನ ಈ ವಿಸ್ಮಯ ಗೂಡಿಗೆ.
ದೇವಾನು ದೇವತೆಗಳ ಪೂಜೆಗೆ ಈ ಸವಿ ಜೇನು.
ಪರಿಶುದ್ಧ ಮನದಿ ಅರ್ಪಿಸಿ ನಾ ಸಾಷ್ಟಾಂಗ ಹಾಕಿದೆನು.
ನಿನ್ನ ಜೇನುತುಪ್ಪ ಸವಿದರೆ ಆರೋಗ್ಯಕ್ಕೆ ಲಾಭ.
ಸತ್ಯಗಿಯೂ ನಿನಗಿಲ್ಲ ಎಳ್ಳಷ್ಟೂ ಲೋಭ.
ಸಾರ್ಥಕವಾಗಿಸಿದೆ ನಿನ್ನೀ ಬದುಕನು.
ನೋಡಿ ಕಲಿಯಬೇಕಿದೆ ನಿನ್ನೀ ಕಾಯಕವನು.
ನಾ ಕಂಡ ನನ್ನ ಸಂಯಮಿ ಸ್ನೇಹಿತಾ….
ನಾ ಹಾಡಿ ಕರೆಯಲು ನೀ ಹಾರುತ ಬರುವೆಯಾ ನಗುತಾ ?
ರಚನೆ -ಶ್ರೀಕಾಂತ.ಮಲ್ಲಪ್ಪ.ಅಮಾತಿ
ಕಲ್ಯಾಣ .ಮುಂಬೈ
ಮೊಬೈಲ್ 9833791245