ಗಂಡ—–ಹೆಂಡತಿ
ಜೀವ ಸಂಕುಲದ ಬೆಳವಣಿಗೆಗೆ ಒಂದು ಗಂಡು ಒಂದು ಹೆಣ್ಣು ಬೇಕೇ ಬೇಕು. *ಶರಣರ,ಸಾಧು ಸಂತರ,ಸೂಫಿ ಸಂತರು ದೃಷ್ಟಿಯಲ್ಲಿ* ಗಂಡ ಎಂಬ ಪದವನ್ನು ಬಳಸಿದ ರೀತಿಯೇ ಬೇರೆ. ಗಂಡ–ಹೆಂಡತಿಯರ ಕಲ್ಪನೆ ಬೇರೆ.
*ಲೌಕಿಕ ಗಂಡ*——- ಈ ಶಬ್ದದ ಅರ್ಥವನ್ನು ನಾವು ಕಂಡಂತೆ ಗಂಡ—ಹೆಂಡತಿ ಎಂದರೆ ಮದುವೆ ಮಾಡಿಕೊಂಡು ಸಂಸಾರ ಜೀವನ ಸಾಗಿಸವುದೆಂದು, ಸಂತಾನೋತ್ಪತ್ತಿ ಮಾಡುವುದೆಂದು, ಕುಟುಂಬಕ್ಕೆ–ರಕ್ಷಣೆ ನೀಡುವುದು, ಇವೆಲ್ಲ ಸಂಕುಚಿತ ಅರ್ಥ.
*ಶರಣ ದೃಷ್ಟಿಕೋನ* ವು ಭಿನ್ನವಾಗಿರುತ್ತದೆ. ಗಂಡನಿಗೆ ಇಲ್ಲಿ ಗಂಡ ನಾಗುತ್ತಾನೆ.– ಶರಣರು ತಾನೇ ಸತಿಯಾಗಿ ಕಾಣಿಸಿಕೊಳ್ಳುತ್ತಾರೆ.ಗಂಡ– ಹೆಂಡತಿ ಸಂಬಂಧ ಕೇವಲ ದೈಹಿಕ ಸುಖಕ್ಕಿಂತ ಮೀರಿದ ಪಾರಮಾರ್ಥಿಕ ಸುಖಕ್ಕಾಗಿ ಶರಣ–ಶರಣೆಯರು ಹಾತೊರೆದಿದ್ದರೂ.
ಎಲ್ಲರಂಥವನಲ್ಲ ನನ ಗಂಡ ಬಲ್ಲಿದನು ಪುಂಡ.ಎಲ್ಲರಂಥವನಲ್ಲ.
ಎಲ್ಲರಂಥವನಲ್ಲ ಕೇಳೆ ಸೊಲ್ಲು ಸೊಲ್ಲಿಗೆ ಬಯ್ದು ಎನ್ನ ಎಲ್ಲಿಗೋದ್ಹಾಂಗ ಮಾಡಿಟ್ಟಾ ಕಾಲ್ ಮುರಿದು ಬಿಟ್ಟಾ
ಸಂತ ಶಿಶುನಾಳ ಶರೀಫರ ದೃಷ್ಟಿಯಲ್ಲಿ ತನ್ನ ಗುರುವೇ ತಂದೆ, ತಾಯಿ, ಗಂಡನಾಗಿ ಗುರುತಿಸಿದ್ದಾರೆ. ಇಲ್ಲಿ ದೈಹಿಕ ಸುಖಕ್ಕಿಂತ ಪಾರಮಾರ್ಥಿಕ ಸುಖಕ್ಕಾಗಿ ಗುರುವನ್ನೇ ಗಂಡನೆಂದು ಕಂಡುಕೊಂಡಿದ್ದಾರೆ.
ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪ್ಪಿಸಿದ್ದೆ ನೋಡಾ ಹಸೆಯ ಮೇಲಿಣ ಮಾತ ಬೆಸಗೊಳಲಟ್ಟಿದರೆ, ಶಶಿಧರ ಹತ್ತಿರಕ್ಕೆ ಕಳುಹಿದರೆಮ್ಮವರು. ಭಸ್ಮವನೆ ಹೂಸಿ ಕಂಕಣವನೆ ಕಟ್ಟಿದರು, ಚೆನ್ನಮಲ್ಲಿಕಾರ್ಜುನಾ ನನಗೆ ನೀನಾಗಬೇಕೆಂದು.
ಅಕ್ಕಮಹಾದೇವಿ ಪಾರಮಾರ್ಥಿಕ ಗಂಡನೇ (ಶಿವನನ್ನೇ) ತನಗೆ ಗಂಡನೆಂದು ಭಾವಿಸಿಕೊಂಡಿದ್ದಾಳೆ.
ಪಚ್ಚೆಯ ನೆಲಗಟ್ಟು ಕನಕದ ತೋರಣ ವಜ್ರದ ಕಂಭ ಪವಳದ ಚಪ್ಪರವನಿಕ್ಕಿ, ಮುತ್ತು ಮಾಣಿಕದ ಮೇಲುಕಟ್ಟ ಕಟ್ಟಿ, ಮದುವೆ ಮಾಡಿದರು.ಎಮ್ಮವರೆನ್ನ ಮದುವೆ ಮಾಡಿದರು. ಕಂಕಣ ಕೈದಾರ ಸ್ಥಿರಸೇಸೆಯನಿಕ್ಕಿ ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರು
ಅಕ್ಕಮಹಾದೇವಿಯು ತನ್ನ ಮತ್ತೊಂದು ವಚನದಲ್ಲಿ ಹೀಗೆ ಹೇಳುತ್ತಾರೆ.
ಹುಟ್ಟಿದ್ದೇನೆ ಶ್ರೀಗುರುವಿನ ಹಸ್ತದಲ್ಲಿ ಬೆಳೆದೆನು ಸಂಖ್ಯಾತರ ಕರುಣದಲ್ಲಿ. ಭಾವ ಎಂಬ ಹಾಲು ಸುಜ್ಞಾನವೆಂಬ ತುಪ್ಪ ಪರಮಾರ್ಥ ವೆಂಬ ಸಕ್ಕರೆಯನಿಕ್ಕಿದರು ನೋಡಾ ಇಂತಪ್ಪ ತ್ರಿವಿದಾಮೃತವನು ದಣಿಯಲೆರೆದು ಸಲುಹಿದರೆನ್ನ. ವಿವಾಹ ಮಾಡಿದಿರಿ ಸಯವಪ್ಪ ಗಂಡಂಗೆ ಕೊಟ್ಟಿರಿ. ಕೊಟ್ಟ ಮನೆಗೆ ಕಳುಹಿಸಲು ಅಸಂಖ್ಯಾತರೆಲ್ಲರು ನೆರೆದು ಬಂದಿರಿ, ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ. ಚೆನ್ನಮಲ್ಲಿಕಾರ್ಜುನ ಕೈ ಹಿಡಿದು ನಿಮ್ಮ ಮಂಡೆಗೆ ಹೂವ ತಹೆನಲ್ಲದ್ದ.. ಅಲ್ಲದೆ ಹುಲ್ಲು ತಾರೆನು. ಅವಧರಿಸಿ ನಿಮ್ಮೆಲ್ಲರ ನಿಮ್ಮಡಿಗಳೆಲ್ಲರೂ ಮರಳಿ ಬಿಜಯಂಗೈವುದು ಶರಣಾರ್ಥಿ
ತಾಯಿ ವೀರ ವೈರಾಗಿನಿ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ ನೇ ನನ್ನ ಗಂಡನೆಂದು ಕಂಡುಕೊಂಡಿದ್ದಳು.ತಾಯಿ ಕಲ್ಯಾಣ ಬಿಟ್ಟು ಶ್ರೀ ಶೈಲ ಮಲ್ಲಿಕಾರ್ಜುನನೇ ತನಗೆ ಸರ್ವಸ್ವ.ಎಂದು ಕೊಂಡಿದ್ದಳು.
ಶರಣ–ಸತಿ,ಲಿಂಗ– ಪತಿ ಈ ಪರಿಕಲ್ಪನೆ ಜಗತ್ತಿಗೆ ಪರಿಚಯಿಸಿದವರು 12ನೇ ಶತಮಾನದ ಶರಣರು.
ಇಲ್ಲಿ *ಶರಣ–ಶರಣೆಯರು* ತಮ್ಮ ತಮ್ಮ ಅದೃಶ್ಯವಾದ ಆರಾಧ್ಯನಾದ ದೇವರ, ಮಹಾಶಕ್ತಿಯನ್ನೇ ಗಂಡ,ತಂದೆ,ಮಗ,ಸಹೋದರರೆಂದು ಭಾವಿಸಿಕೊಂಡಿರುತ್ತಾರೆ.
–ರವೀಂದ್ರ ಪಟ್ಟಣ ಮುಳಗುಂದ