ಸಂಜೆಯ ಇಳಿಜಾರು

ಸಂಜೆಯ ಇಳಿಜಾರು

ಸಂಜೆಯ ಇಳಿಜಾರು
ಜಾರುತಲಿತ್ತು
ಪ್ರಕೃತಿಯ ಮಧ್ಯೆ
ನನ್ನ ಪಯಣವು ಸಾಗಿತ್ತು
ಪರಿಮಳಗಳ ತೇರು
ಸ್ವಾಗತಿಸಿತ್ತು
ಎಲೆ- ಮರಗಳ ಹಿಂದೆ
ರವಿಕಿರಣ ಕಣ್ಣುಮುಚ್ಚಾಲೆ
ಆಡುತಲಿತ್ತು
ತಂಗಾಳಿಯ
ತೊಟ್ಟಿಲ ತೂಗಿತ್ತು
ಜುಳು ಜುಳು ನದಿಯು
ಜೋಗುಳವ ಹಾಡಿತ್ತು
ಶಾಂತಿ ನೆಮ್ಮದಿ
ನನ್ನಲ್ಲಿ ಮನೆ ಮಾಡಿತ್ತು
ಸೊಬಗ ಸವಿದ
ತನು ಮನ ಧನ್ಯ
ಎಂದಿತ್ತು…..

ಡಾ. ನಂದಾ

Don`t copy text!