ನವೋದ್ಯಮಿಗಳು ಧೈರ್ಯದಿಂದ ಮುನ್ನುಗ್ಗಿ-ವನಜಾಕ್ಷಿ ಹೆಬ್ಬಾರ

ನವೋದ್ಯಮಿಗಳು ಧೈರ್ಯದಿಂದ ಮುನ್ನುಗ್ಗಿ-ವನಜಾಕ್ಷಿ ಹೆಬ್ಬಾರ

e-ಸುದ್ದಿ  ಯಲ್ಲಾಪುರ

ಪಟ್ಟಣದ ಅಡಿಕೆ ಭವನದಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ ವತಿಯಿಂದ ಅಯೋಜಿಸಿದ್ದ ನವೋದ್ಯಮಿಗಳಿಗೆ ತರಭೇತಿ ಕಾರ್ಯಕ್ರಮವನ್ನುಸಚಿವ ಶಿವರಾಮ ಹೆಬ್ಬಾರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸ್ವದ್ಯೋಗದಲ್ಲಿ ತೊಡಗಿಕೊಳ್ಳುವದರಿಂದ ವ್ಯವಹಾರ ಜ್ಞಾನಉಂಟಾಗಿ ಕ್ರಿಯಾಶೀಲತೆಯಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಬಹುದು. ಗ್ರಾಮೀಣ ಭಾಗದ ಮಹಿಳೆಯರಿಗೆ ತರಭೇತಿ ನೀಡಿ ಸ್ವದ್ಯೋಗದಲ್ಲಿ ತೊಡಗಲು ಪ್ರೋತ್ಸಾಹ ನೀಡುತ್ತಿರುವ ದೇಶಪಾಂಡೆ ಪೌಂಡೇಶನ ಕಾರ್ಯ ಶ್ಲಾಘನೀಯ ಎಂದರು. ಕಾನಿಪ ಸಂಘದ ಖಜಾಂಚಿ ಪ್ರಭಾವತಿ ಗೋವಿ ಮಾತನಾಡಿ ಇಂದು ಆನ್ ಲೈನ ಮಾರುಕಟ್ಟೆಯ ಅಬ್ಬರದಲ್ಲಿ ವ್ಯವಹಾರಿಕವಾಗಿ ವಿಶ್ವಾಸ ಗಳಿಸುವದು ಕಷ್ಟಸಾಧ್ಯವಾದರೂ ಕೇವಲ ಲಾಭವನ್ನಷ್ಟೇ ನೀರಿಕ್ಷಿಸದೇ ಗುಣ ಮಟ್ಟಕ್ಕೆ ಆದ್ಯತೆ ನೀಡಿದರೆ ಯಶಸ್ಸು ಖಂಡಿತ. ಒಂದೇ ಉತ್ಪನ್ನಗಳ ತಯಾರಿಕೆ, ಮಾರಾಟಕ್ಕೆ ಹಲವರು ಮುಂದಾಗದೇ ಪರಸ್ಪರ ಪೂರಕ ಉತ್ಪನ್ನಗಳತ್ತ ಮುಖಮಾಡಿದರೆ ಸಹಕಾರದಿಂದ ಆರೋಗ್ಯಕರ ಪೈಪೋಟಿಯಿಂದ ಲಾಭಗಳಿಸಲು ಸಾಧ್ಯ ಎಂದರು.
ಸ್ವದ್ಯೋಗದಲ್ಲಿ ತೊಡಗಿಕೊಂಡು ಯಶಸ್ವಿಯಾದ ವನಿತಾ ಭಟ್ಟ ಮಾತನಾಡಿ ತರಭೆತಿ ಪಡೆದು ಹಾಗೆ ಕೂರದೇ ಹಲವಾರು ಅಡೆತಡೆಗಳನ್ನು ಮೆಟ್ಟಿ ನಿಂತು ಉತ್ಪಾದನೆಗೆ ಆಸಕ್ತಿ ತೋರಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನ ಪಡೆಯಲು ಹಿಂಜರಿಯದೇ ಕಾರ್ಯನ್ಮುಖವಾದಾಗ ಮಾತ್ರ ಸ್ವಾವಲಂಬಿಯಾಗಲು ಸಾಧ್ಯ . ಕುಟುಂಬದವರ ಸಹಭಾಗಿತ್ವದಿಂದ ಆರ್ಥಿಕವಾಗಿ, ಮಾನಸಿಕವಾಗಿ ಸಧೃಡ ಬದುಕಾಗಬಹುದಾಗಿದೆ. ನಾನು ದೇಶಪಾಂಡೆ ಪೌಂಡೇಶನ ಅವರ ಸತತ ಮಾರ್ಗದರ್ಶನ ಮನೆಯವರ ಪ್ರೋತ್ಸಾಹದಿಂದ ಉಪ್ಪಿನಕಾಯಿ ಉದ್ಯಮದದಲ್ಲಿ .ತೃಪ್ತಿ ಕಾಣುತ್ತಿದ್ದೇನೆ ಎಂದು ತಮ್ಮ ಅನುಭವನ್ನು ಹಂಚಿಕೊಂಡರು . ಗೃಹದ್ಯೋಮಿ ಪ್ರೇಮಾ ಜೋಶಿ ಇಂದು ಗೃಹೋದ್ಯಮದಲ್ಲಿ ತೊಡಗಿಕೊಂಡವರಿಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯಗಳು ಸಿಗುತ್ತವೆ. ಹೆಚ್ಚಿನ ಮಹಿಳೆಯರು ತರಭೇತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಅಲಗಾ ಶುಭ ಹಾರೈಸಿದರು.ಪತ್ರಕರ್ತ ಜಯರಾಜ ಗೋವಿ ಉಪಸ್ಥಿತರಿದ್ದರು. ಪೌಂಡೇಶನ್ ತರಭೇತುದಾರ ಇಮ್ಯಾನುಯಲ್ ಸ್ವಾಗತಿಸಿ,ಪ್ರಸ್ತಾವಿಕ ಮಾತನಾಡಿದರು.

Don`t copy text!