ಬೆಳಗಾವಿ ಭೂಗಳ್ಳರಿಗೆ ಕಡಿವಾಣವಿಲ್ಲವೇ ?

ಬೆಳಗಾವಿ ಭೂಗಳ್ಳರಿಗೆ ಕಡಿವಾಣವಿಲ್ಲವೇ ?

ಬೆಳಗಾವಿ ಭೂಕಬಳಿಕೆ ನಿಗ್ರಹದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ

ಬೆಳಗಾವಿ ಉತ್ತರದ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರುಷಗಳಿಂದ ಭೂಕಬಳಿಕೆ ಬಡವರ ಮೇಲೆ ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡಿ ಕಂಗ್ರಾಳಿ ಶಾಹುನಗರ ಯಮನಪುರ ಕಲ್ಮೇಶ್ವರ ನಗರ ಮುಂತಾದ ಪ್ರದೇಶಗಳಲ್ಲಿ ಕೆಲ ಗುಂಡಾ ಜನರು ರಿಯಲ್ ಎಸ್ಟೇಟ್ ನಕಲಿ ದಂದೆಕೋರರು ಖೊಟ್ಟಿ ನಕಲಿ ಕಾಗದ ಪತ್ರಗಳನ್ನು ಸೃಷ್ಟಿಸಿ ಅಮಾಯಕರಿಗೆ ಮಾರುವ ಜಾಲವೊಂದು ಕಳೆದ ಹತ್ತು ವರುಷಗಳಲ್ಲಿ ಅವ್ಯಾಹತವಾಗಿ ನಡೆದಿದೆ . ಈ ಸಂಧರ್ಭದಲ್ಲಿ ಏ ಪಿ ಎಂ ಸಿ ಮಾರ್ಕೆಟ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲು ಮಾಡಿದರೂ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ. ಅಂತಹ ದುಷ್ಟ ವ್ಯವಸ್ಥೆಗೆ ರಾಜಕೀಯ ಆಶ್ರಯವಿದೆ ಕ್ಯಾಂಪ್ ಪೊಲೀಸ್ ಸ್ಟೇಷನ್ ಹಾಗು ಇನ್ನಿತರ ಪ್ರದೇಶಗಳಲ್ಲಿ ರಾಜಾರೋಷವಾಗಿ ಹಗಲು ಭೂಗಳ್ಳತನ ದರೋಡೆ ಮಾಡುವ
ನೀಚರಿಗೆ ರಾಜಕೀಯ ವ್ಯಕ್ತಿಗಳು ಆಶ್ರಯ ನೀಡುವದರಿಂದ ಜಿಲ್ಲಾ ಪೊಲೀಸರು ಅಸಹಾಯಕಾರಿಗುರುವರೇ ?

ಬೆಳಗಾವಿ ಅತ್ಯಂತ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರ .ಸ್ಮಾರ್ಟ್ ಸಿಟಿ ಲಿಸ್ಟನಲ್ಲಿ ಸ್ಥಾನ ಪಡೆದಿದೆ. ಇಲಿ ಒಂದು ಕೋಮಿನ ಭೂಗಳ್ಳರು ಭೂ ಮಾಫಿಯಾಗಳು ನಿರಂತರವಾಗಿ ಕಂಗ್ರಾಳಿ (ಬಿಕೆ )ಶಾಹು ನಗರ , ನವ ವೈಭವನಗರ ಜಟಪಟ ಕಾಲೋನಿ, ಯಮುನಾಪುರ ಹೀಗೆ ಗ್ರಾಮ ಪಂಚಾಯತಿಯಲ್ಲಿ ದಾಖಲಾದ ನಿವೇಶನಗಳನ್ನು ಕಬಳಿಸಿ ಅವರಲ್ಲಿ ಭಯ ಹುಟ್ಟಿಸಿ ಮಧ್ಯಮ ವರ್ಗದ ಬಡವರ ಅಬಲೆಯರ ಮಹಿಳೆಯರ ಶೋಷಿತರ ಜೀವನಕ್ಕೆ ಮಾರಕವಾಗಿದ್ದಾರೆ.ಬೆಳಗಾವಿಯ ಭೂ ಮಾಫಿಯಾ ಭೂಗಳ್ಳರು. ಕಳೆದ ಹತ್ತು ವರುಷದಿಂದ ಇಂತವರ ದಬ್ಬಾಳಿಕೆಗೆ ನೂರಾರು ಜನರು ಸಂಕಟ ನೋವನು ಅನುಭವಿಸಿದ್ದಾರೆ . ನಿವೇಶನ ಮನೆ ಆಸ್ತಿ ಕಳೆದುಕೊಂಡಿದ್ದಾರೆ.

ಹಲವು ದೊಡ್ಡಭೂಗಳ್ಳರ ಗುಂಪುಗಳಿವೆ . ಖೊಟ್ಟಿ ನಕಲಿ ನಿವೇಶನ ದಾಖಲೆಗಳನ್ನು ತಂದು ಖಾಲಿ ಇರುವ ನಿವೇಶನದಲ್ಲಿ ಜೆ ಸಿಬಿ ತಂದು ನೆಲ ಸಮಗೊಳಿಸಿ ನಿವೇಶನ ಮಾಡಿ ಬೇರೆಯವರಿಗೆ ಮಾರುವ ಕುತಂತ್ರತನವು ಅವ್ಯಾತಹವಾಗಿ ನಡೆದಿದೆ.ಇವರ ಮೇಲೆ ಅನೇಕ ಪೊಲೀಸ್ ಕಂಪ್ಲೇಂಟ್ ಕೊಟ್ಟರು ರಾಜಕೀಯ ಪ್ರಭಾವದಿಂದ ಪಾರಾಗುತ್ತಾರೆ. ಜನರಿಗೆ ಬೆದರಿಕೆ ಹಾಕಿ ಬಡವರ ಮಾಧ್ಯಮ ವರ್ಗದವರ ನಿವೇಶನ ಕಬಳಿಸುವುದು ಅವುಗಳನ್ನು ಮಾರಿ ತಮ್ಮ ಜೇಬಿಗೆ ಲಕ್ಷಾಂತರ ಕೋಟ್ಯಂತರ ಹಣವನ್ನು ತುರುಕಿಕೊಂಡು , ಜನರನ್ನು ಮೋಸ ವಂಚನೆ ಸುಲಿಗೆ ಮಾಡುತ್ತಿದ್ದರೂ ಪೊಲೀಸರು ಇವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜಿಲ್ಲೆಯ ಸಂಸದರು ಶಾಸಕರು ಜನಪ್ರತಿನಿಧಿಗಳು ಜಿಲ್ಲಾಡಳಿತ ಜಿಲ್ಲಾ ಪೊಲೀಸ ವರಿಷ್ಠರು ದಯವಿಟ್ಟು ಇಂತಹ ವಂಚನೆಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಅಕ್ರಮ ವಂಚನೆಯಲ್ಲಿ ತೊಡಗಿದವರಿಗೆ ಶಿಕ್ಷೆ ನೀಡುವಲ್ಲಿ ಮುಂದಾಗಲಿ.

ಮಾರ್ಕೆಟ್ ಪೊಲೀಸ್ ಸ್ಟೇಷನ್ ಕ್ಯಾಂಪ್ ಪೊಲೀಸ್ ಸ್ಟೇಷನ್ ಇನ್ನು ಪೊಲೀಸ್ ಜಿಲ್ಲಾ ವರಿಷ್ಟರಲ್ಲಿ ನೂರಾರು ದೂರು ದಾಖಲಾದರೂ ಸಹಿತ ಇವರಿಗೆ ಯಾವುದೇ ಶಿಕ್ಷೆಯಾಗಿಲ್ಲ .

ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠರು ,ಜಿಲ್ಲಾ ಆಡಳಿತ ಮಂಡಳಿ ಇಂತಹ ಭೂಗಳ್ಳರ ಭೂ ಮಾಫಿಯಾ ಭೂಗತ ಲೋಕದ ಡಾನ್ ಗಳ ಬಗ್ಗೆ ನಿಗಾವಹಿಸಿ ಸಾಮಾನ್ಯರ ಜೀವನಕ್ಕೆ ನೆಮ್ಮದಿ ತರುವಂತಾಗಲಿ . ಇಂತಹ ಅತ್ಯಂತ ಹೇಯವಾದ ದಂಧೆ ಕಳೆದ ಹತ್ತು ವರುಷಗಳಿಂದ ನಡೆದಿದ್ದರೂ ನಗರ ಉನ್ನತ ಮಟ್ಟದ ಪೊಲೀಸರು ಮೌನ ಆಗಿರುವದರ ಹಿನ್ನೆಲೆ ಏನು ?

ಸಧ್ಯ ನವ ವೈಭವನಗರ ಜೆಟ್ ಪಟ್ ಕಾಲನಿಯಲ್ಲಿ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಯಾವುದೇ ಕ್ರಮವನ್ನು ಜರುಗಿಸಿಲ್ಲ ಇಂತಹ ಭೂ ಕಬಳಿಕೆಯ ಜಾಲದ ಹಿಂದೆ ಮಹಾನಗರಪಾಲಿಕೆಯ ಸದಸ್ಯರ ಅಭಯ ಹಸ್ತವಿದೆಯೆಂದು ಕೇಳಿ ಬರುತ್ತಿದೆ. ಇಂತಹ ಭೂಗಳ್ಳ ಗುಂಡಾಗಳನ್ನು ಬಂಧಿಸುವಲ್ಲಿ ಸರಕಾರ ವಿಫಲವಾಗಿದೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ .

ಈ ಕೂಡಲೇ ಜಿಲ್ಲಾ ಪೊಲೀಸರು ವರಿಷ್ಠರು ಎಚ್ಚುತ್ತುಗೊಂಡು ಬಡವರ ಭಾವನೆಗೆ ಆಶಾಕಿರಣವಾಗಲಿ . ಅವರ ಆಸ್ತಿ ನಿವೇಶನಗಳು ನಿಜವಾದ ಮಾಲೀಕರಿಗೆ ದೊರೆಯಲಿ.ಹಿಂಸೆ ಬೆದರಿಕೆಗೆ ನಿವೇಶನ ಕಳೆದುಕೊಂಡವರ ಆಕ್ರಂದನ ಕೇಳುವವರು ಯಾರಿಲ್ಲವೇ ?-

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ*

Don`t copy text!