ರಾಯಬಾಗ: ಉಳುಮೆ ವೇಳೆ ಹೆದರಿದ ಜೋಡೆತ್ತುಗಳು; ರೈತನ ಕಣ್ಮುಂದೆಯೇ ಬಾವಿಗೆ ಬಿದ್ದು ದಾರುಣ ಸಾವು
e-ಸುದ್ದಿ ಬೆಳಗಾವಿ:
ತೋಟದಲ್ಲಿ ಉಳುಮೆ ಮಾಡುವ ವೇಳೆ ಹೆದರಿದ ಜೋಡೆತ್ತುಗಳು ವಿಶಾಲವಾದ ಬಾವಿಗೆ ಬಿದ್ದು ಮೃತಟ್ಟ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡದಲ್ಲಿ ಇಂದು ನಡೆದಿದೆ.
ಗ್ರಾಮದ ರೈತ ಲಗಮಣ್ಣ ಹುಕ್ಕೇರಿಗೆ ಸೇರಿದ ಜೋಡೆತ್ತುಗಳು ಏಕಾಏಕಿ ನೀರಿಗೆ ಬಿದ್ದು, ದುರ್ಮರಣಕ್ಕೀಡಾಗಿವೆ. ರೈತನ ಕಣ್ಣೆದುರೇ ಜೋಡೆತ್ತುಗಳ ಸಾವು ಸಂಭವಿಸಿದೆ.
ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ