e-ಸುದ್ದಿಗೆ ವರ್ಷದ ಸಂಭ್ರಮ-ಬರಹಗಾರರಿಗೆ‌ ಚಿರರುಣಿ

 

(ದಿನಾಂಕ ೨-೧೦-೨೦೨೦ ರಂದು e-ಸುದ್ದಿ ಬಿಡುಗಡೆಯ ಸಂಗ್ರಹಿತ ಚಿತ್ರ)

e-ಸುದ್ದಿಗೆ ವರ್ಷದ ಸಂಭ್ರಮ-ಬರಹಗಾರರಿಗೆ‌ ಚಿರರುಣಿ

e-ಸುದ್ದಿ, ಮಸ್ಕಿ

ಅಕ್ಟೋಬರ್ ೨ ಮಹಾತ್ಮ ಗಾಂಧಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿ ‌ಜಯಂತಿ. ಇಡೀ ಭಾರತ ದೇಶವೇ ಅವರ ಜನ್ಮ ದಿನವನ್ನು ಸ್ಮರಿಸುತ್ತದೆ.
e-ಸುದ್ದಿಗೆ ಇಂದು ವಿಶೇಷ ದಿನ. ಹತ್ತು ಹಲವು ಉದ್ದೇಶಗಳನ್ನು
ಹೊಂದಿ ಅಕ್ಟೋಬರ್ ೨-೨೦೨೦ ರಂದು e-ಸುದ್ದಿ ಅಂತರಜಾಲ ಪತ್ರಿಕೆ ಹುಟ್ಟಿಕೊಂಡಿದೆ. ಒಂದು ವರ್ಷದ e-ಸುದ್ದಿಗೆ ಮೊದಲ ಸಂಭ್ರಮ. ಕನ್ನಡ ಮಾತನಾಡುವ ಕರ್ನಾಟಕ ಸೇರಿದಂತೆ ವಿಶ್ವದ ಮೂಲೆ‌ ಮೂಲೆಯಲ್ಲಿರುವ ಕನ್ನಡಿಗರು ಧಾರಳ ಪ್ರೀತಿ ತೊರಿಸಿದ್ದಾರೆ.

ಒಂದು ವರ್ಷದಲ್ಲಿ ಚಂದಾದಾರ ಸಂಖ್ಯೆ ೧ ಸಾವಿರ ಸಮೀಪಕ್ಕೆ ಬಂದು ನಿಂತಿದೆ. ಪ್ರತಿ ದಿನ ಪ್ರಕಟವಾಗುವ ಎಲ್ಲಾ ಬರಹಗಳು ೨ ಸಾವಿರ ಜನರ ವಯಕ್ತಿಕ ವಾಟ್ಸ್ ಆಪ್ ಗಳಿಗೆ ತಲುಪುತ್ತಿವೆ.
ಈ ಒಂದು ವರ್ಷದಲ್ಲಿ ಪ್ರತಿದಿನ ತಪ್ಪದೆ ತಪ್ಪಸ್ಸಿನಂತೆ ಬೆಳಿಗ್ಗೆ ವಚನ ವಿಶ್ಲೇಷಣೆ, ವ್ಯಕ್ತಿ , ಸಂಘ ಸಂಸ್ಥೆಗಳ ಪರಿಚಯ, ಸುದ್ದಿಗಳನ್ನು ಕೊಡುವ ಮೂಲಕ ಬದ್ದತೆಯನ್ನು ಮೆರೆದಿದೆ. ಇದುವರೆಗೆ ೧೫೦೪ ಬರಹಗಳುು ಪ್ರಕಟವಾಗಿವೆ.
೨೦೨೧ ಜನವರಿ ೨೬ ರಂದು‌ ಕಸಾಪ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ಸಂಘಟಕರು ಪರಿಶ್ರಮಪಟ್ಟು ೭೦ ಕ್ಕೂ ಅಧಿಕ ಕವಿಗಳನ್ನು ಸಂಘಟಿಸಿ ಕವಿಗೋಷ್ಟಿ ನಡೆಸಿದರು. ಪ್ರತಿಯೊಬ್ಬ ಕವಿಗಳು ತಮ್ಮ ಪಾಳಿ ಬಂದಾಗ ಕವಿತೆಯ ವಾಚನ ಮಾಡಿ ಜಾಗ ಖಾಲಿ‌ ಮಾಡುತ್ತಿದ್ದರು. ಕೊನೆ ಕೊನೆಗೆ ವೇದಿಕೆಯ ಮೇಲಿದ್ದವರು ಮತ್ತು ಬೆರಳಣಿಕೆಯ ಕವಿಗಳು‌ ಉಳಿಯುವಂತಾಯಿತು. ಕವಿಗಳೆಲ್ಲ ಓದಿದ ಕವಿತೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಹೃದಯ ತಟ್ಟುತಿದ್ದವು. ಆದರೆ ಕವಿತೆಗಳನ್ನು ಕೇಳಿಸಿಕೊಳ್ಳಬೇಕಾದ ಕಿವಿಗಳ ಕೊರತೆ ಎದ್ದು ಕಾಣುತಿತ್ತು. ಆಗ ನಿರ್ಧಿರಿಸಿದ ಫಲವೇ ಪ್ರತಿದಿನ ತಪ್ಪದೆ ಕವಿತೆಗಳನ್ನು e-ಸುದ್ದಿಯಲ್ಲಿ ಪ್ರಕಟವಾಗಲು ಸಾಧ್ಯವಾಗಿದೆ.

ಕರ್ನಾಟಕದಲ್ಲಿ ಪ್ರದೇಶವಾರು ಅಸಮಾನತೆ ಢಾಳಾಗಿ ಗೋಚರಿಸುತ್ತಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕು ೭೪ ವರ್ಷ ಗತಿಸಿದರೂ ಅಖಂಡ ಕರ್ನಾಟಕ ಅಭಿವೃದ್ದಿ ಕಾಣದಿರುವದು ಶೋಚನಿಯವೇ ಸರಿ.

ಮೈಸೂರು ಮತ್ತು ಮಂಗಳೂರು ಭಾಗ ಎಲ್ಲ ರೀತಿಯಲ್ಲಿ ಸಮೃದ್ಧವಾಗಿದ್ದರೆ, ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ, ಮತ್ತು ಕಲ್ಯಾಣ ಕರ್ನಾಟಕ ಅಭಿವೃಯಲ್ಲಿ ಹಿಂದುಳಿದಿರುವದಕ್ಕೆ ಯಾರನ್ನು ದೂರಬೇಕು? ನಮ್ಮ ನಾಯಕರ ಹೊಣೆಗೇಡಿತನಕ್ಕೆ ನಮಗೆ ನಾಚಿಕೆ ಬರುತಿದೆ. ಸಮರ್ಥ ನಾಯಕರನ್ನು ಆಯ್ಕೆ‌ಮಾಡುವಲ್ಲಿ ಎಡವಿದ್ದೆವೆ. ಪ್ರಶ್ನಿಸುವ ಭೂಮಿಕೆ ರೂಢಿಸಿಕೊಳ್ಳದೆ ಜೀ ಹೂಜೂರು ಸಂಸ್ಕೃತಿಯನ್ನು ಕಳಚಬೇಕಾಗಿದೆ.
ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಾಗಿ ಕಿತ್ತೂರು ಕರ್ನಾಟಕ , ಕಲ್ಯಾಣ ಕರ್ನಾಟಕದ ನೆಲ ಗಟ್ಟಿತನ ಹೊಂದಿದೆ. ದಾಸ್ಯತನವೆಂಬುದು ಅಂತರ್ಗತ ವಾಗಿದೆ.
ದಾಸ್ಯದ‌ ಮನೋಭಾವ ಹೋಗಲಾಡಿಸಿ, ಸ್ವಾಭಿನದ‌ ಜ್ಞಾನ ತುಂಬುವದು ಅವಶ್ಯಕವಾಗಿದ್ದು e-ಸುದ್ದಿ ಅಂತಹ ಸಣ್ಣ ಪ್ರಯತ್ನ ಮಾಡುತ್ತಿದೆ ಎಂಬ ಸಮದಾನವಿದೆ. ಆದರೆ ಅದು ತೀವ್ರವಾಗಬೇಕಾಗಿದೆ.
e-ಸುದ್ದಿಯಲ್ಲಿ ಪ್ರಕಟವಾಗುವ ಬರಹಗಳಿಗೆ ಓದುಗರು ಸ್ಪಂದಿಸುವ ರೀತಿಗೆ ಬೆರಗಾಗಿದ್ದೇನೆ. ಒಂದೊಂದು, ಸುದ್ದಿ, ವಿಶೇಷ ಲೇಖನಗಳಿಗೆ ಸಾವಿರಾರು ಜನ ಓದಿ‌ ಅಭಿಪ್ರಾಯಿಸಿದಾಗ ಆದ ಸಂತೋಷಕ್ಕೆ ಎಣಿಕೆ ಇಲ್ಲ. ಹಾಗೆಯೇ ಕೆಲ ಬಾರಿ ಜಾಳು ಜಾಳು ಬರಹ ಪ್ರಕಟವಾದಗ ಇಂತಹವು e-ಸುದ್ದಿಯಲ್ಲಿ ಬೇಡ ಎಂದು ಎಚ್ಚರಿಸಿದವರು ಇದ್ದಾರೆ.
e-ಸುದ್ದಿ ಒಂದು ವರ್ಷದಲ್ಲಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ವಿಯ ಹಿಂದೆ ಕಾಣದ ಅನೇಕ ಕೈಗಳು ಕೆಲಸ ಮಾಡಿವೆ. ಅವರಿಗೆಲ್ಲ ನಾನು ಚಿರರುಣಿ.
ವಿಶೇಷವಾಗಿ e-ಸುದ್ದಿ ಮನೆೆ ಮಾತಾಗಲು ಬರಹಗಾರರೇ‌ ಕಾರಣ. ಅನೇಕ ಲೇಖಕರು, ಕವಿಗಳು, ಬರಹಗಾರರು ಇದು ತಮ್ಮದೆ ಪತ್ರಿಕೆ ಎಂದು ಅಭಿಮಾನದಿಂದ ಬರಹಗಳನ್ನು ಕಳಿಸಿ ಉಪಕರಿಸಿದ್ದಾರೆ. ಅವರಿಗೆಲ್ಲ ತುಂಬಾ ಅಭಾರಿಯಾಗಿದ್ದೇನೆ.
ಅನೇಕ ಬರಹಗಾರರು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ಲೇಖಕರನ್ನು ಪರಿಚಯಿಸಿ ಅವರೆಲ್ಲ e-ಸುದ್ದಿಗೆ ಬರೆಯುವಂತೆ ಮಾಡಿದ್ದಾರೆ.
ಬೀದರ ಜಿಲ್ಲೆಯಿಂದ ದೊಡ್ಡಬಳ್ಳಾಪುರದವರೆಗೆ, ಬೆಳಗಾವಿಯಿಂದ ರಾಯಚೂರು ವರೆಗೆ, ಕಾಸರಗೊಡಿನಿಂದ ಮೈಸೂರು ವರೆಗೆ ಅನೇಕ ಹಿರಿಯ ಕಿರಿಯ ಲೇಖಕರು e-ಸುದ್ದಿ ಗೆ ಬರಹ ಕಳಿಸಿ ಅಖಂಡತೆ‌ ಮೆರೆದಿದ್ದಾರೆ.
ವಿಶೇಷವಾಗಿ ವಿಜಯಕುಮಾರ ಕಮ್ಮಾರ ತುಮಕೂರು, ಡಾ.ಶಶಿಕಾಂತ ಪಟ್ಟಣ ಪುಣೆ, ಡಾ.ಸರ್ವಮಂಗಳ ಸಕ್ರಿ ರಾಯಚೂರು, ಸವಿತಾ ಮಾಟೂರು ಇಲಕಲ್ಲ, ಡಾ.ರಾಜೇಶ್ವರಿ ಶೀಲವಂತ ಬೀಳಗಿ, ಡಾ.ನಂದಾ ಕೊಟುರು ಬೆಂಗಳೂರು, ಡಾ.ನಿರ್ಮಲ ಬಟ್ಟಲ್, ಪ್ರೋ.ವಿಜಯಲಕ್ಷ್ಮಿ ಪುಟ್ಟಿ ಬೆಳಗಾವಿ, ರಾಜನಂದ ಘಾರ್ಗಿ ಬೆಳಗಾವಿ, ಮಹಾಂತೇಶ ಮಸ್ಕಿ, ಗುಂಡುರಾವ್ ದೇಸಾಯಿ ಮಸ್ಕಿ, ಆದಪ್ಪ ಹೆಂಬಾ ಮಸ್ಕಿ, ಮಲ್ಲಿ ಕಾರ್ಜುನ ಕಡಕೊಳ ಡಾವಣಗೆರಿ, . ಡಾ.ಶಶಿಕಾಂತ ಕಾಡ್ಲೂರು ಲಿಂಗಸುಗೂರು, ಹಮೀದಾ ಬೇಗಂ ಸಂಕೇಶ್ವರ, ವರದೇಂದ್ರ ಶಿಕ್ಷಕರು ಮಸ್ಕಿ, ಪ್ರಭಾವತಿ ದೇಸಾಯಿ ವಿಜಯಪುರ, ಸರೋಜಾ ಶ್ರೀಕಾಂತ ಮುಂಬೈ, ಡಾ.ಮಲ್ಲಿನಾಥ ತಳವಾರ ಕಲಬುರ್ಗಿ, ರವೀಂದ್ರ ಪಟ್ಟಣ ಮುಳಗುಂದ, ಡಾ.ಸುಜಾತ ಅಕ್ಕಿ, ಕವಿತಾ ಮಳಗಿ ಕಲಬುರ್ಗಿ, ಗೀತಾ ಹರಮಘಟ್ಟ ಶಿವಮೊಗ್ಗ, ಬಾಲಜಿ ಕುಂಬಾರ ಚಟ್ನಾಳ, ಲೋಕೇಶ ಮಾನ್ವಿ, ಬಸವರಾಜ ಬೋಗಾವತಿ ಮಾನ್ವಿ, ರೇಣುಕಾ ಹೆಳವರ ಕಲಬುರ್ಗಿ, ಪಂಪಯ್ಯ ಸಾಲಿಮಠ ಸಿಂಧನೂರು, ಸುನಿತಾ ಧಾರವಾಡ, ವಿ.ವಿ.ಮಠಪತಿ, ಜಯಶ್ರೀ ಶಟ್ಟರ್ ಇಲಕಲ್ಲ, ಮಂಡಲಗಿರಿ ಪ್ರಸನ್ನ, ಸೌಮ್ಯಗೌಡ ಗೌರಿಬಿದನೂರು, ಮಂಜುಳಾ ಬನ್ನಿಗೋಳಮಠ ಇಲಕಲ್ಲ, ಉಮೇಶ ಗೌರಿ ಬೈಲಹೊಂಗಲ, ಸಾವಿತ್ರಿ ಮುಜಂದಾರ ಕೊಪ್ಪಳ, ಯಮುನಾ ಕಂಬಾರ ರಾಮದುರ್ಗ, ಸುನಿತಾ ಅಂಗಡಿ ಇಲಕಲ್ಲ, ವಿಜಯಖಾನ ಕಾಸರಗೋಡು, ಶಾರದ ಕೌದಿ ಧಾರವಾಡ, ಆನಂದ ಮರಳದ ಬೆಂಗಳೂರು,  ರವಿ ಹಂಪಿ, ಪ್ರಕಾಶ ಮಸ್ಕಿ, ಇಂದರ್ ಪಾಷಾ ಮಸ್ಕಿ ,ಎಂಎಸ್ ಭಾಗವಾನ ಮೆದಕಿನಾಳ, ಹನುಮೇಶ ನಾಯಕ, ಅಮರೇಶ ಬೆಳಿಗನೂರು, ವೆಬ್ ಡಿಜೈನರ್ ಈರಣ್ಣ ಹುಕ್ಕೇರಿ ಸೇರಿದಂತೆ ಅನೇಕರು e-ಸುದ್ದಿ ತಂಡಕ್ಕೆ ಸೇರಿ ಬರಹ ಕಳಿಸಿ ಶಕ್ತಿ ತುಂಬಿದ್ದಾರೆ.

ಅವರೆಲ್ಲರನ್ನು ನೆನೆಯುವದು ನನ್ನ ಕರ್ತವ್ಯ. ಇನ್ನೂ ಅನೇಕರ ಹೆಸರುಗಳನ್ನು ಬಿಟ್ಟಿರಲುಬಹುದು. ಅಂತವರು ಬೇಸರಿಸಿಕೊಳ್ಳದೆ ನನ್ನನ್ನು ನಿಮ್ಮ ಮನೆಯ ಮಗನೆಂದು ಪ್ರೋತ್ಸಾಹಿಸಿ ಎಂದು ವಿನಂತಿ. ಓದುಗರೊಂದಿಗೆ ಹಂಚಿಕೊಳ್ಳಲು ಸಾಕಷ್ಟು ವಿಷಯಗಳಿವೆ. ಅವೆಲ್ಲವನ್ನು ಒಂದೇ ಬಾರಿ ಹೇಳುವದಕ್ಕಿಂತ ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಮುಂದೆ ಬರುವೆ.

e-ಸುದ್ದಿ ನಿಮ್ಮದೆ ಪತ್ರಿಕೆ, ಈ ಪತ್ರಿಕೆಯ ಬೆಳವಣಿಗೆಯಲ್ಲಿ ನಿಮ್ಮ ಸಲಹೆ ಸಹಕಾರ ಅತ್ಯಗತ್ಯ. ಪ್ರತಿಕ್ರಿಯಿಸಿ ಧನ್ಯವಾದಗಳು

ಸಂಪಾದಕ
ವೀರೇಶ ಸೌದ್ರಿ, ಮಸ್ಕಿ

One thought on “e-ಸುದ್ದಿಗೆ ವರ್ಷದ ಸಂಭ್ರಮ-ಬರಹಗಾರರಿಗೆ‌ ಚಿರರುಣಿ

Comments are closed.

Don`t copy text!