ಮಸ್ಕಿ : ಮಸ್ಕಿ ಪುರಸಭೆ ಮತ್ತು ಬಳಗಾನೂರು ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯರನ್ನು ಆಯ್ಕೆ ಮಾಡಲು ದಿನಾಂಕ ನಿಗದಿ ಮಾಡಿ ಚುನಾವಣಾಧಿಕಾರಿಯಾದ ಮಸ್ಕಿ ತಹಸೀಲ್ದಾರ ಬಲರಾಮ ಕಟ್ಟಿಮನಿ ದಿನಾಂಕ ಪ್ರಕಟಿಸಿದ್ದಾರೆ.
ಮಸ್ಕಿ ಪುರಸಭೆಗೆ ಅಧ್ಯಕ್ಷ ಸ್ಥಾನ ಎಸ್.ಟಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಸರ್ಕಾರ ನಿಗದಿಪಡಿಸಿದ ಮೀಸಲಾತಿಗೆ ಅನುಗುಣವಾಗಿ ಮಸ್ಕಿ ಪುರಸಭೆಗೆ ನವಂಬರ 4 ಬುಧವಾರ ಮದ್ಯಾಹ್ನ 3-30ಕ್ಕೆ ಚುನಾವಣೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಯ ನಡುವೆ ನಮಾಪತ್ರ ಸಲ್ಲಿಸಲು ಅವಕಾಶವಿದೆ. ಅವಿರೋಧ ಆಯ್ಕೆ ನಡೆಯದಿದ್ದರೇ 3-30ಕ್ಕೆ ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ಕೈ ಎತ್ತುವ ಮೂಲಕ ಚುನಾವಣೆ ನಡೆಯಲಿದೆ ಎಂದು ತಹಸೀಹಸೀಲ್ದಾರ ಪ್ರಕಟಣೆಯಲ್ಲಿ ಹೊರಡಿಸಿದ್ದಾರೆ.
ಬಳಗಾನೂರು ಪಂ.ಪಂ. ಃ ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯತಿಗೆ ನವಂಬರ್ 5 ಗುರುವಾರ ಮದ್ಯಾಹ್ನ 3 ಗಂಟೆಗೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪ್ರವರ್ಗ ಅ ಸ್ಥಾನಕ್ಕೆ ಮೀಸಲಿರಿಸಿದೆ.
—————————————————————–
ಸರ್ವಜನತೆಗೆ
ದಸರಾ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು
ಶುಭಾಷಯ ಕೊರುವವರು
ಎಸ್.ಎಂ.ಕಲ್ಮನಿ
ತಾಲೂಕು ಉಪಾಧ್ಯಕ್ಷರು ವಿಶ್ವಕರ್ಮ ಸಮಾಜ
ಬಿಜೆಪಿ ಮುಖಂಡರು ಬಳಗಾನೂರು