ಜ್ಯೋತಿಯಿಂದ ಜ್ಯೋತಿ ಬೆಳಗಿಸಿ..
ಕಾರ್ತೀಕದಕತ್ತಲೆಯ ಕಳೆಯುತಲಿ ಇಂದು
ಬೆಳಗುತಿದೆಜ್ಯೋತಿಹಣತೆಯಲಿಂದು
ತಂದುಸಡಗರದಸಂಭ್ರಮದ ಹರುಷ
ದೀಪಗಳಹಬ್ಬ ನೀಡಿಸುಖಸ್ಪರ್ಷ..
ಸ್ನೇಹವಿಶ್ವಾಸಗಳತೈಲ ಎರೆದು
ನಿಸ್ವಾರ್ಥಸೇವೆಯ ಬತ್ತಿ ಉರಿಸಿ
ಬೆಳಗಿಸುತ ಜ್ಯೋತಿಯಿಂ ಜ್ಯೋತಿಯನ್ನು
ಹರಡೋಣನಾವಿಂದು ಸತ್ಯಸುಪ್ರಭೆಯ..
ಜಾತಿಮತಗಳಗೊಡ್ಡುಭೇದ ಅಳಿಸಿ
ಸೌಹಾರ್ದಸಮರಸದ ಭಾವಬೆಳೆಸಿ
ಭಾವೈಕ್ಯಬೆಳಕಿನ ಕಿರಣ ಸೂಸಿ
ಬಾಳೋಣ ಒಂದಾಗಿಶಾಂತಿನೆಲೆಸಿ..
ಭಾಷೆ-ಭಾಷೆಗಳಗಡಿಯ ಮೀರಿ
ರೋಷ-ದ್ವೇಷಗಳ ತುಳಿದು ಮೆಟ್ಟಿ
ಮಾನವತೆ ಸಂಪ್ರೀತಿ ಸುಧೆಯಹರಿಸಿ
ಬೆಳಗಿಸುವಾಪ್ರೇಮಜ್ಯೋತಿಯನುಜಗದಿ..
🌷ಕನ್ನಡತಿ. ಹಮೀದಾಬೇಗಂ ದೇಸಾಯಿ. ಸಂಕೇಶ್ವರ. 🙏