ಕಾಣದ ಕಲಾಕಾರ

ಕಾಣದ ಕಲಾಕಾರ

ಉದಯಿಸುವ ನೇಸರ ತುಂಬಿಹ ಕಣ್ಮನ
ಜಗದ ಜೀವರಾಶಿಯಲಿ ಶಕ್ತಿಯ ಸಿಂಚನ
ಕಣಕಣಗಳಲ್ಲಿ ದೈವತ್ವದ ಹುಡುಕಾಟ

ನೀಲ ಆಕಾಶದಲಿ ಮೋಡಗಳ ನರ್ತನ
ಮನದಲಿ ಮೂಡಿಹ ಸುಂದರ ಚಿತ್ರಣ
ಮರೆಯಲಿ ಅಡಗಿಹ ಚಂದ್ರನ ನೋಟ

ಹರಿಯುವ ನದಿಯ ರಭಸಕೆ ಕಾರಣ
ಕಾಯುತಿರುವ ಸಾಗರದ ತಲ್ಲಣ
ಕೊರೆಯುತ ಬೆಟ್ಟ ಕಂದಕದಲಿ ಓಟ

ಪರ್ವತ ಗಂಭಿರತೆ ನೊಡಿದ ಕ್ಷಣ
ರೊಮಾಂಚಿತ ದೇಹದ ಪ್ರತಿ ಕಣ
ತಟಸ್ತಗೊಂಡ ಭಾವಗಳ ತಾಕಲಾಟ

ಹಸಿರುಡುಗೆಯ ಕಣ್ಸೆಳೆಯುವ ಕಾನನ
ಮನಮೊಹಕ ಪಕ್ಷಿ ಸಂಕುಲದ ತಾಣ
ನಿಸರ್ಗದಿ ಶಾಂತಿ ಸಂಭ್ರಮದ ಕೂಟ

ಪ್ರಕೃತಿಯ ಮಡಿಲಲಿ ಹುಟ್ಟಿದೆ ಸಂಚಲನ
ತಣಿಸುತಿದೆ ಪರಿಸರ ಪ್ರೇಮಿಗಳ ಮನ
ಕಾಣದ ಕಲಾಕಾರನ ಮೊಡಿಯ ಮಾಟ

ಪ್ರೊ ರಾಜನಂದಾ ಘಾರ್ಗಿ

Don`t copy text!