ಅವನು ಶ್ರೇಷ್ಠನಲ್ಲ

 

ಅವನು ಶ್ರೇಷ್ಠನಲ್ಲ
ಅವನೂ ಶೋಷಿತ
ಹಗಲು ರಾತ್ರಿ ಎನ್ನದೇ
ಇರಬೇಕು‌ ಸುರಕ್ಷಿತ!!!

ಅಳುವಂತಿಲ್ಲ
ನಾಚುವಂತಿಲ್ಲ
ಕಲ್ಲು ಬಂಡೆಯಂತೇ
ಕಡೆಗಣಿಸಬೇಕೆಲ್ಲ,

ಮೃದುತ್ವಕ್ಕಿಂತ
ಮೃಗನಾಗಿರ ಬೇಕು
ಮಂದಹಾಸಕ್ಕಿಂತ
ಗದರಿಸುತ್ತಿರ ಬೇಕು

ಗಂಭೀರ ಮಾತ್ರ ಅಲ್ಲ
ಗಡಸು ಗಡಸಾಗಿರಲೇ ಬೇಕು
ಬದ್ಧನಿಲ್ಲದಿದ್ದರೂ, ಇರಬೇಕು
ಬಲಿಷ್ಠ ಸಮಯ ಸಮಯ!

ದುಡಿಯಲೇ ಬೇಕು
ಗಳಿಸುತ್ತಿರಬೇಕು ದುಡ್ಡು
ಮನದಲ್ಲಿ ಅದೆಷ್ಟು ನೋವಿದ್ದರೂ
ಮನೆಗೆ ಏನಾದರೂ ತರುತಿರಬೇಕು

ಎಲ್ಲರ ಬಾಳು ಹಸನಾಗಿಸಲು
ತಾನು ಬಂಜರಾದವನು
ಎಲ್ಲರನು ಬದುಕಿಸಲು
ಎದುರಿಸುವನು ನಿತ್ಯ ಸಾವು!!

ಅವನು ಅಪ್ಪ ಅವನು ಅಣ್ಣ
ಅವನು ಗೆಳೆಯ ಅವನೇ ಇನಿಯ!!
ಸಹಪಾಠಿ, ಸಹೋದ್ಯೋಗಿ
ಅವನೂ ನಮ್ಮ ಬಾಳ ಸಂಗಾತಿ

ತರತಮ ತೋರದ,
ಅಹಂ ಭಾವವಿಲ್ಲದ,
ಪರರಿಗಾಗಿ ಪರಿಶ್ರಮಿಸುವ
ಪುರುಷನಿಗೂ ಇರಲಿ ಪುರಸ್ಕಾರ!!!

ಫರ್ಹಾನಾಜ್ ಮಸ್ಕಿ

ಸಹಾಯ ಪ್ರಾಧ್ಯಾಪಕರು

ಸ.ಪ್ರ.ದ.ಕಾ. ಹುಳಿಯಾರು

Don`t copy text!