ಗಜಲ್

ಗಜಲ್

ಬೆರೆಸಬೇಕಿದೆ ಜಾತಿ ಧರ್ಮ ಸೋಂಕಿಲ್ಲದ ಭಾವನೆಗಳನ್ನು
ಬೆಸೆಯಬೇಕಿದೆ ಮುರಿದು ಬಿದ್ದ ಸ್ನೇಹದ ಕೊಂಡಿಗಳನ್ನು

ಅರ್ಥವಿಲ್ಲದ ಕೊಂಕು ನುಡಿಗಳಿಂದ ಸ್ವಾಸ್ಥ್ಯ ಕೆಡಿಸುವುದೇಕೆ
ವ್ಯರ್ಥ ಮಾಡದಿರು ಬಲು ಮೂಲ್ಯ ಜೀವನದ ಕ್ಷಣಗಳನ್ನು

ಮಾನವೀಯ ಮೌಲ್ಯಗಳಿಲ್ಲದ ಬದುಕಿಗೆ ಏನು ಬೆಲೆಯಿದೆ
ಪ್ರೀತಿಯ ನುಡಿಗಳನ್ನಪ್ಪಿ ಸವೆಸಬೇಕಿದೆ ನಿತ್ಯದ ದಿನಗಳನ್ನು

ಅಚಾರವಿಲ್ಲದ ನಾಲಿಗೆಗೆ ಕಡಿವಾಣ ಹಾಕಲೇನು ತೊಂದರೆ
ವಿಚಾರ ಮತಿಹೀನನಾಗಿ ತೊರೆಯದಿರು ಸತ್ಯದ ನೆಲೆಗಳನ್ನು

ಮನುಜ ಬಂಧುಗಳಲ್ಲಿಯ ರಕುತದ ಬಣ್ಣ ಒಂದೇ ಅಲ್ಲವೆ
ಈಶ್ವರನ ಕರುಣೆಯಿದೆ ನಂಬದಿರು ಮಿಥ್ಯದ ಮಾತುಗಳನ್ನು


– ಈಶ್ವರ ಮಮದಾಪೂರ

Don`t copy text!