ಸಂತಶ್ರೇಷ್ಠ ಶ್ರೀ ಕನಕ

ಸಂತಶ್ರೇಷ್ಠ ಶ್ರೀ ಕನಕ

ಕನ್ನಡ ನಾಡಿನ ಸಂಸ್ಕೃತಿ ಪರಂಪರೆಯ ಸಂತಕವಿ
ಕರ್ನಾಟಕ ರಾಜ್ಯ ಹಾವೇರಿ ಜಿಲ್ಲಾ ಬಾಡ ಗ್ರಾಮ
ಬೀರಪ್ಪ ಬಚ್ಚಮ್ಮ ದಂಪತಿ ಉದರದೋಳ್ಳುಟ್ಟಿದ
ಜನಕ ತಿಮ್ಮಪ್ಪ ನಾಯಕ |

ಹುಟ್ಟುತ್ತಾ ಸೇವಕ ತಿಮ್ಮಪ್ಪನಾಯಕ
ಅರಿವಿನ ಜ್ಞಾನ ಅರಿತಾದ ಶ್ರೇಷ್ಠ ಕನಕ
ಜ್ಞಾನದ ಜನಕ, ನಿನ್ನ ಸಾರ
ಜನ ಮನದಿ ಅಮರ|

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಕುಲ ಕುಲವೆಂದು ಹೊಡೆದಾಡದಿರಿ ಎಂದೆ|
ನಿಮ್ಮ ಕುಲದ ನೆಲೆಯನು ಬಲ್ಲಿರಾ
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತೆಂದೆ|

ಕೈಯೊಳು ನಾದಬ್ರಹ್ಮ ವಾಣಿಗಳು ಜ್ಞಾನ ನಾಮ
ಹೆಗಲ ಮೇಲೆ ಕಂಬಳಿ| ರಚಿಸಿದಿ ಮೋಹನತರಂಗಿಣಿ
ಹಣೆ ಮೇಲೆ ಭಂಡಾರ ರಚಿಸಿದಿ ರಾಮಧಾನ್ಯಚರಿತೆ
ಕೊರಳೊಳು ಕೇಶವನ ಸರ ಸಾರಿದಿ ಹರಿಭಕ್ತಿಸಾರ|

ಶರೀರ ನಶ್ವರ ನಾಳೆ ಮರೆಯಾಗುತ್ತದೆ
ಮಾಡಿರಿ ಧ್ಯಾನ ಆದಿಕೇಶವನೇ ದೈವವೆಂದು
ಸುಖದುಃಖಗಳ ಕಾಟ ಎದುರಾಗದು
ಕುಲ ಕುಲಗಳ ಭೇದವ ಭೇಧಿಸಿದಿ |

-ರಾಮು ಎನ್ ರಾಠೋಡ್ ಮಸ್ಕಿ
9739959151

Don`t copy text!