ಮಸ್ಕಿ ಪುರಸಭೆ ಚುನಾವಣೆಗಾಗಿ ಬಿಜೆಪಿ ಪೂರ್ವಭಾವಿ ಸಭೆ
15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಸೋಲಿನ ಸೇಡು ತಿರಿಸಿಕೊಳ್ಳಿ-ಪ್ರತಾಪಗೌಡ ಪಾಟೀಲ
e-ಸುದ್ದಿ ಮಸ್ಕಿ
ಮಸ್ಕಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದರೂ ಸಹ ವಿಧಾನಸಭೆಯ ಉಪ ಚುನಾವಣೆಯಲ್ಲಿ ಸೋಲಾಯಿತು. ಈಗ ಪುರಸಭೆ ಚುನಾವಣೆ ಬಂದಿದ್ದು 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸೋಲಿನ ಸೇಡು ತಿರಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕರೆ ನೀಡಿದರು.
ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಪುರಸಭೆ ಚುನಾವಣೆ ನಿಮಿತ್ತ ಕರೆಯಲಾಗಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ ‘ಪ್ರತಿಯೊಬ್ಬ ಕಾರ್ಯಕರ್ತರು ಉಪ ಚುನಾವಣೆಯಲ್ಲಿ ಏಕೆ ಸೋಲಾಯಿತು ಎಂಬುದನ್ನು ಅತ್ಮಾವಲೋಕನ ಮಾಡಿಕೊಳ್ಳುಬೇಕು ಎಂದರು.
ನಾನು ಸೋತರು ಸಹ ಎದೆಗುಂದದೆ ಕ್ಷೇತ್ರದಲ್ಲಿ ತಿರುಗಾಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ ಎಂದರು.
ಮಸ್ಕಿ ಪುರಸಭೆ ಹಾಗೂ ಬಳಗಾನೂರು, ತುರ್ವಿಹಾಳ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡುವ ಅಭ್ಯರ್ಥಿಗಳನ್ನು ಗುರುತಿಸಿ ಹಾಗೂ ವಾರ್ಡ್ ಮುಖಂಡರ ಅಭಿಪ್ರಾಯ ಪಡೆದು ಸೂಕ್ತ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಲಾಗುವುದು.
ಟಿಕೇಟ್ ಆಕಾಂಕ್ಷೆ ಗಳು ಯಾವುದೇ ಲಾಭಿ ಮಾಡದೇ ಪಕ್ಷ ಘೋಷಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಮೂರು ಕಡೆ ಅಧಿಕಾರಕ್ಕೆ ಬರಬೇಕು ಅಧಿಕಾರಕ್ಕೆ ಬರಬೇಕು ಎಂದರು.
ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಅರಳಹಳ್ಳಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಉಪಾಧ್ಯಕ್ಷ ಅಪ್ಪಾಜಿಗೌಡ, ಮುಖಂಡ ಮಹಾದೇವಪ್ಪಗೌಡ ಪೋಲಿಸ್ ಪಾಟೀಲ್, ಡಾ. ಶಿವಶರಣಪ್ಲ ಇತ್ಲಿ, ಡಾ.ಬಿ.ಎಚ್. ದಿವಟರ್, ಜಿಲಾನಿ ಖಾಜಿ, ರಾಜಾ ನಾಯಕ, ಮಲ್ಲನಗೌಡ ಪೋಲಿಸ್ ಪಾಟೀಲ್, ದೊಡ್ಡಪ್ಪ ಕಡಬೂರು, ಡಾ. ಪಂಚಾಕ್ಷರಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ , ಮಲ್ಲು ಯಾದವ್, ಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ ಯಂಬಲದ ಬಿಜೆಪಿ ಪದಾಧಿಕಾರಿಗಳು ಮತ್ತು ಬಿಜೆಪಿ ಹಿರಿಯ ಮುಖಂಡರು ಕಾರ್ಯಕರ್ತರು ಇತರರು ಇದ್ದರು.