ಸಲ್ವಾ ಹುಸೇನ್.. ಅವಳ ದೇಹದಲ್ಲಿ ಹೃದಯವೇ ಇಲ್ಲ.

ಸಲ್ವಾ ಹುಸೇನ್.. ಅವಳ ದೇಹದಲ್ಲಿ ಹೃದಯವೇ ಇಲ್ಲ.

ಜಗತ್ತಿನಲ್ಲಿಯೇ ಅವಳು ಅಪರೂಪದ ವ್ಯಕ್ತಿ, ಕಾರಣ ಅವಳ ಕೃತ್ರಿಮ ಹೃದಯ ಅವಳ ಎದೆಯಲ್ಲಿಲ್ಲ, ಅದು ಬ್ಯಾಗ್ ನಲ್ಲಿದೆ..!!
ಬ್ರಿಟಿಷ್ ವಾರ್ತಾ ಪತ್ರಿಕೆ, “ಡೇಲಿ ಮೆಲ್” ೩೯ ವರ್ಷದ ಸಲ್ವಾಳ ಕುರಿತು ಲೇಖನವೊಂದನ್ನು ಪ್ರಕಟಿಸಿದೆ.

ಇಂಥ ಅಪಸವ್ಯಗಳ ಮಧ್ಯೆ ಅವಳಿಗೆ ಮದುವೆಯಾಗಿದ್ದು ಅವಳೀಗ ಎರಡು ಮಕ್ಕಳ ತಾಯಿ ಕೂಡಾ..!! ಸಲ್ವಾ ಹುಸೇನ್ ಸಾಮಾನ್ಯ ಜೀವನ ನಡೆಸುತ್ತಿದ್ದರೂ ಅವಳ ಜೊತೆಗೆ ಹೃದಯವನ್ನಿಟ್ಟ ಬ್ಯಾಗ್ ಮತ್ತು ಅದರಲ್ಲಿ ೬.೮ ಕಿಲೊ ತೂಕದ ಎರಡು ಬ್ಯಾಟರಿಗಳು, ವಿದ್ಯುತ್ ಚಾಲಿತ ಮೋಟರ್, ಪಂಪ್ ಸದಾ ಇರಲೇಬೇಕು..!! ಈ ಬ್ಯಾಗ್ ಮತ್ತು ಎದೆಗೆ ನಳಿಕೆಗಳ ಮೂಲಕ ಸಂಪರ್ಕವಿದ್ದು ಇವು ಇವಳ ದೇಹಕ್ಕೆ ರಕ್ತ ಸಂಚಾರವನ್ನು ಸುಗಮ ಗೊಳಿಸುತ್ತವೆ..!!

ಸ್ನೇಹಿತರೇ,
ನಮ್ಮ ಎಲ್ಲ ಸಮಸ್ಯೆ, ತೊಂದರೆಗಳು ಈ ಮಹಿಳೆಯ ಕಷ್ಟದ ಎದುರು ತೃಣ ಸಮಾನ. ಪ್ರತಿ ಕ್ಷಣ ಎದೆ ಬಡಿತದ ಮೂಲಕ ಸಂಕಷ್ಟದ ಅನುಭವ ಪಡೆಯುತ್ತಿರುವ ಈ ಮಹಿಳೆಯ ಮುಖದಲ್ಲಿ ನಗೆ ಮಾತ್ರ ಮಾಸಿಲ್ಲ..!! ಜೀವನೋತ್ಸಾಹ ಬತ್ತಿಲ್ಲ..!!
ಆದರೆ ನಾವು..!!?? ಮಳೆ ಬಹಳ, ಮಳೆಯೇ ಇಲ್ಲ, ಬಿಸಿಲು, ಚಳಿ, ಚಹಕ್ಕೆ ಸಕ್ಕರೆ ಕಡಿಮೆ….ಇತ್ಯಾದಿ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡು ಮನಃ ಶಾಂತಿ ಹಾಳು ಮಾಡಿಕೊಳ್ಳುತ್ತೇವೆ..!!
ನಮಗೆ ಇಷ್ಟಾದರೂ ಆರಾಮ, ಆರೋಗ್ಯ ಕೊಟ್ಟ ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸಲೇ ಬೇಕಲ್ಲ..!!? ಸಣ್ಣ ಸಣ್ಣ ವಿಷಯಗಳಿಗೂ ವಟಗುಟ್ಟುವದನ್ನು ಬಿಟ್ಟು, ಸದಾ ನಗುತ್ತಿರೋಣ.!! ನಮ್ಮ ನಗುವಿನ ಖಜಾನೆಯಿಂದ ಇತರರಿಗೂ ಸ್ವಲ್ಪ ಹಂಚೋಣ..!!

Don`t copy text!