ವಚನ ಗಾಯಕ ಅಂಬಯ್ಯ ನೂಲಿಗೆ ರಾಜ್ಯೋತ್ಸವದ ಗರಿ

ರಾಯಚೂರು :  ಈ ಬಾರಿ 65 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದೆ.ರಾಯಚೂರಿನ ವಚನ ಗಾಯಕರಾದ ಅಂಬಯ್ಯ ನುಲಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವೆಂಬರ್ 01 ರಂದು ಪ್ರತಿಷ್ಠಿತ ಈ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಧಾನ ಮಾಡಲಿದೆ.ಜಿಲ್ಲೆಯಿಂದ ಅನೇಕರ ಹೆಸರು ಶಿಫಾರಸ್ಸುಗೊಂಡಿದ್ದವು. ಆದರೆ, ವಚನ ಗಾಯಕರಾದ ಅಂಬಯ್ಯ ನುಲಿ ಅವರು ರಾಜ್ಯದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಂಬಯ್ಯ ನುಲಿ ಅವರು ಮೂಲತಃ ಶಿಕ್ಷಕರು. ಪ್ರವೃತ್ತಿಯಿಂದ  ಅತ್ಯುತ್ತಮ ವಚನ ಗಾಯಕರಾಗಿದ್ದಾರೆ. ರಾಯಚೂರು ತಾಲೂಕಿನ ಹೊಸೂರು ಗ್ರಾಮದ ನಿವಾಸಿಯಾದ ಇವರು ಶಿಕ್ಷಕರಾಗಿ ಮಾನ್ವಿ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಶರಣರ ಹಾಡುಗಳನ್ನು ಹಾಡುವ ಮೂಲಕ ಅತ್ಯಂತ ಜನಪ್ರಿಯರಾಗಿದ್ದಾರೆ.

ರಾಜ್ಯದ ವಚನ ಸಂಗೀತರಾರಲ್ಲಿ ಅಂಬಯ್ಯ ನುಲಿ ಅವರು ತಮ್ಮದೇ ಆದ ವಿಶಿಷ್ಟ ಪರಂಪರೆ ಹೊಂದಿದವರಾಗಿದ್ದಾರೆ. ನುಲಿ ಅವರ ವಚನ ಗಾಯನ ಅತ್ಯಂತ ಮಧುರ ಮತ್ತು ಆಕರ್ಷಣಿಯ. ಇವರು ಅಂತರಾಷ್ಟ್ರೀಯ ಕಲಾವಿದರು ಹೌದು. ಆಕಾಶವಾಣಿ, ದೂರದರ್ಶನದಲ್ಲಿ ಎ ಗ್ರೇಡ್ ಕಲಾವಿದರಾಗಿ ಗುರುತಿಸಿಕೊಂಡವರು.

ನೂಲಿಯವರ ತಂದೆಯವರು ನಾಟಕ, ನಿರ್ದೇಶಕರು ಮತ್ತು ಬರಹಗಾರರು. ಈ ಬಾರಿ ಸಂಗೀತ ಕ್ಷೇತ್ರದಲ್ಲಿ ಒಟ್ಟು ಐವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಒಬ್ಬರು ನಮ್ಮಅಂಬಯ್ಯ ನುಲಿ ಎನ್ನುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ದೇಶ, ವಿದೇಶಗಳಲ್ಲೂ ಕಾರ್ಯಕ್ರಮ ನೀಡಿದ ಕೀರ್ತಿ ಇವರದ್ದು. ಅತ್ಯಂತ ಸರಳ ಮತ್ತು ವಚನ ಗಾಯನದಂತೆ ಕಾಯಕವೇ ಜೀವನ ಎನಿಸಿಕೊಂಡ ಅಂಬಯ್ಯ ನುಲಿ ಅವರು ಗಾಯನವೇ ತಮ್ಮ ಉಸಿರಾಗಿಸಿಕೊಂಡವರು. ಅಂಬಯ್ಯ ನುಲಿ ಅವರ ಸಂಗೀತ ಕಾರ್ಯಕ್ರಮಕ್ಕೆ ಅಪಾರ ಸಂಗೀತಾಭಿಮಾನಿಗಳು ಸೇರಿಸುವಂತಹ ಆಕರ್ಷಕ ವ್ಯಕ್ತಿತ್ವ.
ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯಿಂದ ಅನೇಕರು ಆಕಾಂಕ್ಷಿಗಳಾಗಿದ್ದರು. ಪ್ರಶಸ್ತಿಗಾಗಿ ಲಾಬಿ ನಡೆದಿದ್ದವು. ಆದರೆ, ಅಂಬಯ್ಯ ನುಲಿ ಅವರು ನಿರೀಕ್ಷಿತವಾಗಿ ಈ ಪ್ರಶಸ್ತಿ ಭಾಗ್ಯ ಒಲಿದು ಬಂದಿದೆ. ಪ್ರಶಸ್ತಿಗಾಗಿ ಲಾಬಿ ನಡೆಸುವುದರಿಂದ ಅತ್ಯಂತ ದೂರವಿದ್ದರೂ, ಪ್ರತಿಭೆಯನ್ನು ಹುಡುಕಿಕೊಂಡು ಪ್ರಶಸ್ತಿ ಬಂದಿರುವದು ಅಭಿಮಾನವೇ ಸರಿ.

 

Don`t copy text!