ಬಾಳ ಬಂಡಿ

ಬಾಳ ಬಂಡಿ

ನಾನು ನೀನು
ಬಾಳ ಜೋಡಿ
ನಡುವೆ ಕಂದರ
ಎಲ್ಲಿದೆ…?

ದೂರ ದಾರಿಯ
ಪಯಣದಲ್ಲಿ
ತೀರ ಸೇರದ
ಗೆಳೆತನ…

ಎಷ್ಟು ದೂರ
ಇದ್ದರೇನು..?
ನಿನ್ನ ನೆನಪು
ಪರಿಮಳ…

ಮನದ ತುಂಬಾ
ನೀನೆ ನಲ್ಲ
ನಿನ್ನ ಬಿಟ್ಟು
ಬೇರೆ ಇಲ್ಲ…

ಹೂಡು ಒಮ್ಮೆ
ಒಲವ ಜೋಡಿ
ಸಾಗುತಿರಲಿ
ಬಾಳ ಬಂಡಿ…

ಗೀತಾ ಜಿ.ಎಸ್.
ಹರಮಘಟ್ಟ

Don`t copy text!