ಇಬ್ಬರಿಗೆ ಜ್ಞಾನಪೀಠ ಪ್ರಶಸ್ತಿ
ಅಸ್ಸಾಂ ಲೇಖಕ ನೀಲಮಣಿ ಫೂಕನ್ ಅವರಿಗೆ ೫೬ನೇ (೨೦೨೦) ಮತ್ತು ಕೊಂಕಣಿ ಲೇಖಕ ದಾಮೋದರ ಮೌಜೋ ಅವರಿಗೆ ೫೭ನೇ ಜ್ಞಾನಪೀಠ ಪ್ರಶಸ್ತಿ( ೨೦೨೧):
೧೯೩೩ರಲ್ಲಿ ಅಸ್ಸಾಂನ ದೇರ್ಗಾಂವ್ ನಲ್ಲಿ ಜನಿಸಿದ ಫೂಕನ್ ಅವರು ೧೯೫೦ರಿಂದಲೇ ಬರೆಯುತ್ತಲೇ ಬಂದವರು. ಅಸ್ಸಾಂ ಸಾಹಿತ್ಯಕ್ಕೆ ಫ್ರೆಂಚ್ ಸಿಂಬೋಲಿಸಮ್ ಆಧರಿತ ಆಧುನಿಕತೆಯನ್ನು ತಂದುಕೊಟ್ಟ ಅವರು ಭಾಷೆಯ ಗಡಿಗಳನ್ನು ವಿಸ್ತರಿಸುತ್ತಾ ಅಸ್ಸಾಮ್ ಭಾಷೆಯ ಶಕ್ತಿಯನ್ನು ಹೆಚ್ಚಿಸಿದವರು. ಅಸ್ಸಾಂಗೆ ಇದು ಮೂರನೇ ಜ್ಞಾನಪೀಠ ಪ್ರಶಸ್ತಿ.
೧೯೪೪ರಲ್ಲಿ ಗೋವಾದಲ್ಲಿ ಜನಿಸಿದ ದಾಮೋದರ ಮೌಜೋ ಅವರು ತಮ್ಮ ಸಣ್ಣ ಕತೆಗಳು ಮತ್ತು ಕಾದಂಬರಿಗಳಿಗೆ ಪ್ರಸಿದ್ಧರು. ಜಾತಿ, ಮತ, ಲಿಂಗ ಇತ್ಯಾದಿಗಳು ಮಾನವ ಸಂಬಂಧಗಳಲ್ಲಿ ತಂದೊಡ್ಡುವ ಬಿರುಕುಗಳನ್ನು ಅವರು ದಿಟ್ಟವಾಗಿ ಮತ್ತು ವ್ಯಂಗ್ಯವಾಗಿ ಅಭಿವ್ಯಕ್ತಿಸಿದ್ದಾರೆ. ಜಿ ಎನ್ ದೇವಿ, ಎಂ ಎಂ ಕಲಬುರ್ಗಿ ಮೊದಲಾದವರೊಡನೆ ಕೆಲಸ ಮಾಡಿದ ಮೌಜೋ ಅವರು ತಮ್ಮ ಕ್ರಿಯಾಶೀಲತೆಗೂ ಹೆಸರಾದವರು. ಕೊಂಕಣಿಗೆ ಇದು ಎರಡನೇ ಜ್ಞಾನಪೀಠ.
ಇಬ್ಬರಿಗೂ ಅಭಿನಂದನೆಗಳು
( ಚಿತ್ರದಲ್ಲಿ: ಮೊದಲನೆಯವರು ಫೂಕನ್, ಎರಡನೆಯವರು ಮೌಜೋ)
–ಪುರುಷೋತ್ತಮ ಬಿಳಿಮಲಿ