ಪುನರ್ಜನ್ಮ ಒಂದು ಚಿಂತನೆ

ಪುನರ್ಜನ್ಮ ಒಂದು ಚಿಂತನೆ

ಸಿದ್ದೇಶ್ವರ  ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ಗಿರಿಜಾ ಮಾಲಿ ಮಾಲಿಪಾಟೀಲ ಹಾಗೂ ಆಶಾ ಯಮಕನಮರಡಿ ರಾಜ್ಯ ಸಂಚಾಲಕರು, ಜಿಲ್ಲಾಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಬೆಳಗಾವಿ. ಹಮೀದಾ ದೇಸಾಯಿ ಮೇಡಂ, ನಿರ್ಮಲ ಪಾಟೀಲ್ ಇವರ ಪರಿಚಯ ಸೂಕ್ತವಾಗಿ ಮಾಡಿದರು.
ಶ್ರೀಮತಿ ರೇಣುಕಾ ಜಾದವ್ ಮೇಡಂ ಅವರಿಂದ ಪುನರ್ಜನ್ಮ ಒಂದು ಚಿಂತನೆ ಕುರಿತು ಉಪನ್ಯಾಸ ನಡೆಯಿತು.

ಪುನರ್ಜನ್ಮ ಎಂದರೇನು? ಹುಟ್ಟು ಸಾವುಗಳ ನಡುವಿನ ಚಕ್ರವೇ ಪುನರ್ಜನ್ಮ ಎಂದು ಹೇಳುತ್ತಾ ಹೀಗೂ ಉಂಟೆ ಕಾರ್ಯಕ್ರಮದ ಒಂದು ತುಣುಕು ತೋರಿಸಿದರು. ಎರಡನೇ ಮಗ ಅರುಣ ನಿಂದ ವಿಷಯ ಮನದಟ್ಟಾಯಿತು ಎಂದರು. ಮಹಾಭಾರತದ ಅರ್ಜುನನ ಉದಾಹರಣೆ. ತಮ್ಮ ಮಗ ಅರುಣ 33ವರ್ಷದಲ್ಲಿ ಕಾರು ಅಪಘಾತದಲ್ಲಿ ಮರಣ, ಅವನು ಡಿಗ್ರಿ ಮಾಡಿದ್ದು, ಹುಟ್ಟಿದಾಗ ಕಿವಿಯ ಮೇಲ್ಭಾಗದಲ್ಲಿ ಅಂದರೆ ಬುಗುಡಿ ಹಾಕುವಲ್ಲಿ ತೂತು ಗಳೊಂದಿಗೆ ಅವನ ಜನನವಾಗಿತ್ತು. ಅವರು ನಂಬಿದ ಗುರೂಜಿ ಇದನ್ನು ಯಾರಿಗೂ ತೋರಿಸಬೇಡಿ, ಮಗುವಿನ ಆಯಸ್ಸು ಕಡಿಮೆಯಾಗುತ್ತದೆ ಎಂದರು. ಆದರೆ ಆಗಲೇ ಬಹಳಷ್ಟು ಜನ ನೋಡಿ ಬಿಟ್ಟಿದ್ದರು . ಫಾರಿನ್ ಕೆಲಸ ಸಿಕ್ಕರು ತಂದೆ ತಾಯಿಯ ಮೇಲಿನ ಪ್ರೀತಿಯಿಂದ ಅವನು ಹೊರದೇಶಕ್ಕೆ ಹೋಗದೇ, ಇಲ್ಲಿ ಕೆಲಸ ಮಾಡುತ್ತಿದ್ದ. ಗೂಗಲ್ ಸಾಯುವ ಮುಂಚೆ ಹಲವಾರು ರೀತಿಯಲ್ಲಿ ಮುನ್ಸೂಚನೆಗಳ ಆಗಿತ್ತು. ದೇವರ ಮುಂದಿನ ದೀಪ ಹಾರುತ್ತಿತ್ತು. ಅರಿಶಿನ ಕುಂಕುಮ ಬೀಳೋದು. ಮನಸ್ಸಿಗೆ ನೆಮ್ಮದಿ ಇಲ್ಲ. ಕರ್ಣನ ಫೋಟೋ ಬಿದ್ದು ಒಡೆದದ್ದು. ಎರಡು ಸಲ ಹೀಗೆ ಆಯಿತು. ಗಣಪತಿ ಫೋಟೋ ಒಡೆದದ್ದು. ಡೊಲ್ಫಿನ್ ಸೆಟ್ ಕೂಡ ಹೊಡೆದು ಬಿದ್ದಿದ್ದು ,ಉದಾಹರಣೆಗಳೊಂದಿಗೆ ಸವಿವರವಾಗಿ ಮಂಡಿಸಿದರು ಹಾಗೆ ಮುಂದುವರಿದರು. ಜ್ಞಾನ ಎಮರಿಗಾರ ಪುನರ್ಜನ್ಮ ಬೇಕಾ ಆತ್ಮ ಜೊತೆ ಮಾತನಾಡುವುದು ಬೇಕಾ ಎಂದಾಗ , ಆತ್ಮ ಜೊತೆ ಮಾತನಾಡುವುದನ್ನು ಆರಿಸಿಕೊಂಡರು.

ಅಮೆರಿಕ ವರ್ಮಾ ದೇಸಾಯಿ , ಸಿವಿ ರಾಮನ್, ಜ್ಞಾನವು ಉಮರಿಗಳ ಅರುಣನ ಸಂಬಂಧಿಕರ ಕನಸಿನಲ್ಲಿ ಬಂದು ನನ್ನ ಕೆಲಸ ಪೂರ್ಣಗೊಳಿಸಲು ಬರ್ತಾ ಇದೀನಿ ಅಂತ ಹೇಳಿದಾಂಗೆ ಆತು ಎಂದರು. ತಮ್ಮ ಅನೇಕ ಅನುಭವಗಳು ಸುರುಳಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಅವರು ಮನೆಯಲ್ಲಿ ಅವರ ಹಿರಿಯ ಮಗನಿಗೆ ಮಗನಾಗಿ ಹುಟ್ಟಿ ಎಲ್ಲವೂ ಅರುಣನ ಗುಣಗಳನ್ನು ಹೋಲುತ್ತದೆ ಎಂದು ವಿವರವಾಗಿ ತಿಳಿಸಿದರು.

ಚಿಂತನೆ: ಪುನರ್ಜನ್ಮದ ಕುರಿತು ಮಾತನಾಡುವವರು ಹತ್ತು ಜನ ಮೊದಲಿಗರು. ಶ್ರೀಮತಿ ಗೌರಿಶಂಕರ್ ಚಟ್ಟಿ ಇವರು, ಕರ್ಮಸಿದ್ಧಾಂತದಲ್ಲಿ ಪುನರ್ಜನ್ಮದ ಫಲಾಫಲಗಳ ಮೇಲೆ ಹುಟ್ಟುವುದು. ಪುನರ್ಜನ್ಮ ಇದೆಯಾ ಇಲ್ವಾ ಅನ್ನೋ ಚಿಂತನೆ ದೇಹಕ್ಕೆ ಸಾವುಂಟು ಆತ್ಮಕ್ಕಲ್ಲ ದೇಹ ಮಾತ್ರ ನಾಶವಾಗುವುದು, ಜೀವ ಕಲ್ಲ .ಆತ್ಮ ಎಂದೆಂದಿಗೂ ಅಜರಾಮರ ಭಗವದ್ಗೀತೆ ಮಾತುಗಳನ್ನು ಹೇಳಿದರು ಎಂದೂ ನಾಶವಾಗದ ಚೈತನ್ಯ ಈ ಜೀವ ಎಂದು ಶ್ರೀಕೃಷ್ಣಪರಮಾತ್ಮ ಹೇಳಿದ್ದಾನೆ
ತಮ್ಮ ಕನಸಿನ ಸ್ವರೂಪವನ್ನು ತಿಳಿಸಿದರು. ಮಂಜುಳಾ ಪ್ರಭು ಬನ್ನಿಗೋಳಮಠ ಪ್ರತಿಭಾವಂತರಿಗೆ ಪೂರ್ವಜನ್ಮ ಪುರಸ್ಕಾರ, ಶರಣರು ದಾಸರು ಪೂರ್ವಜನ್ಮ ಒಪ್ಪಿಕೊಂಡವರು. ಕೈವಲ್ಯ ಪದ್ಧತಿ ಉದಾಹರಣೆಯೊಂದಿಗೆ ತಿಳಿಸಿದರು. ಪುನರಪಿ ಜನನಂ ಪುನರಪಿ ಮರಣಂ ಎಂದು ಹೇಳಿದ್ದಾರೆ.
ಕಮಲಾ ಗಾಣಿಗೇರ್ ಬಾದಾಮಿಯಿಂದ ತಮ್ಮ ಮಗನಿಗೆ ತಂದೆ ಗುಣಗಳು ಬಂದಿವೆ. ಪುನರ್ಜನ್ಮ ನಿಜ ಎಂದು ಸಾಬೀತುಪಡಿಸಿದರು .ಕಮಲಾಕ್ಷಿ ಕೌಜಲಗಿ, ಶ್ರೀ ಸಿದ್ದಾರೂಢ ಚರಿತಾಮೃತ ದಲ್ಲಿ ಉದಾಹರಣೆಗಳನ್ನು ತಿಳಿಸಿ ಪುನರ್ಜನ್ಮ ವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳು ಗಿರಿಜಾ ಮಾಲಿಪಾಟೀಲ್ ಇವರಿಂದ ಅತಿಥಿ ಮಾತು.ಏನೇ ಸಂಶೋಧನೆ ಮಾಡಿದರು, ನಮ್ಮ ತರ್ಕಕ್ಕೆ ನಿಲುಕದ ವಿಷಯಗಳು ಸಾಕಷ್ಟಿವೆ. ಈ ವಿಶೇಷ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿತು. ದೈಹಿಕ ಮಚ್ಚೆ ಹಿರಿಯರು ಮನೆಯಲ್ಲಿ ಮಾಡಿದಂತೆ ಮಾಡುವುದು ಆಡುಮಾತಿಗೆ ಪುನರ್ಜನ್ಮ ಇರಬಹುದು ಎಂದು ಅನಿಸುತ್ತದೆ, ಎಂದು ಹೇಳಿದರು.
ಡಾಕ್ಟರ್. ಪಿ.ಜಿ ಕೆಂಪಣ್ಣ ನವರು ವಿಶ್ರಾಂತ ಪ್ರಾದ್ಯಾಪಕರು. ಅಧ್ಯಕ್ಷರ ಮಾತುಗಳನ್ನಾಡಿದರು. ಪುನರ್ಜನ್ಮದ ಕುರಿತು ಚಿಂತನ-ಮಂಥನ ಕಾರ್ಯಕ್ರಮ. ಶಿ ಸಿದ್ದೇಶ್ವರ ಸಾಹಿತ್ಯ ವೇದಿಕೆಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ವಸ್ತುನಿಷ್ಠ ವಿಷಯ ಕುರಿತು ಪ್ರಶಂಸೆ ಮಾಡಿದರು. ಸತ್ತ ನಂತರ ಆತ್ಮ ಎಲಿ ಹೋಗುತ್ತದೆ. ಕಾಯ ಅಳಿದರೂ ಆತ್ಮ ನಿರಂತರ. ದೇಹ ಸತ್ತ ನಂತರ ಆತ್ಮ ಹೇಗೆ ಹುಟ್ಟುತ್ತದೆ ಎಂಬುದು ಚಿಂತನೆ. ಸಾಕಷ್ಟು ಸಂಶೋಧಕರು ಉದಾಹರಣೆಯೊಂದಿಗೆ ಮಂಡಿಸಿದರು. ಮೆದುಳು ಮತ್ತು ಮನಸ್ಸುಗಳ ನಡುವಿನ ಸಂಬಂಧ ತಿಳಿಯಲು ಇಲ್ಲಿವರೆಗೆ ಸಾಧ್ಯವಾಗಿಲ್ಲ. ಆತ್ಮಕ್ಕೆ ತೂಕವಿದೆಯೇ ಎಂದು ಉದಾಹರಣೆ ತಿಳಿಸಿದರು. ಅಮೆರಿಕದಲ್ಲಿ 21 ಗ್ರಾಮ ಸಿನಿಮಾ ಕೂಡ ಆಯ್ತು. ಬಸವಣ್ಣನವರ ವಚನವನ್ನು ಕೂಡಾ ಉದಾಹರಣೆಯಾಗಿ ತಿಳಿಸಿದರು. ಶರೀರದೊಳಗೆ ಆತ್ಮ ಇರುವ ತನಕ ನೋಡುವುದು, ಕೇಳುವುದು, ಹಸಿವು ಇವುಗಳ ಅನುಭವವಾಗುತ್ತದೆ ಎಂದು ಹೇಳುತ್ತ, ಯಶೋಧರ ಚರಿತ್ರೆ ಜನ್ಮ ಕೃತಿಯಲ್ಲಿ ಅಮೃತಮತಿ ಉದಾಹರಣೆ ಹೇಳಿದರು.


ರತ್ನಾಕರ್ ಭಟ್ ಪುನರ್ಜನ್ಮ ಶಬ್ದದಲ್ಲಿ ಪುನರ್ಜನ್ಮ ವಿದೆ. ಕಾಯಾ-ವಾಚಾ-ಮನಸಾ ಶುದ್ಧವಾದಾಗ ಮೋಕ್ಷ ಹೊಂದುವುದು ಎಂದು, ಧರ್ಮ ಪುರಾಣಗಳಲ್ಲಿ ಹೇಳಿದೆ. ಹುಟ್ಟು ಇಲ್ಲ ಸಾವು ಇಲ್ಲ ಅಂಥವನಿಗೆ ಪುನರ್ಜನ್ಮ ವಿಲ್ಲವೆಂದು ಪುರಾಣಗಳಲ್ಲಿ ಹೇಳಿದೆ. ಜಾತಸ್ಯ ಮರಣಂ ದೃವಂ ಎಂದು ಹೇಳಿದೆ , ಆತ್ಮಕ್ಕೆ ಅಳತೆ ಗೊತ್ತಿಲ್ಲ ಎಂದು ಹೇಳಿದರು.
ವಂದನಾರ್ಪಣೆಯನ್ನು ಕುಮಾರಿ ಮಂಜುಶ್ರೀ ಬಸವರಾಜ ಹಾವಣ್ಣವರ ಮಾಡಿದರು, ನಿರೂಪಣೆಯನ್ನು ನಿರ್ಮಲ ಪಾಟೀಲ್ ಅವರು ಮಾಡಿ , ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ಕಾರ್ಯಕ್ರಮ ಕ್ಕೆ ಶ್ರೀಮತಿ ಸರಸ್ವತಿ ಪಟೇದ ತಾಂತ್ರಿಕ ಸಹಾಯ ಒದಗಿಸಿದರು.ಕಾರ್ಯಕ್ರಮದಲ್ಲಿ ಶ್ರೀಮತಿ ಸುಜಾತಾ ಪಾಟೀಲ್,
ಡಾ.ಸುರೇಶ್ ನೆಗಲಗುಳಿ,ಸುನೀತಾ ನಂದೆಣ್ಣವರ, ಶ್ರೀ ಶಿವಾನಂದ ಯಮಕನಮರಡಿ,ಡಾ.ಭಾರತಿ ಮಠದ , ಶ್ರೀಮತಿ ಪ್ರೇಮಕ್ಕಾ ಅಂಗಡಿ, ಶ್ರೀಮತಿ ಭಾರತಿ ಕೋರಿ,
ಹೊರಜಿಲ್ಲೆಯ ಅನೇಕ ಆಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ
ವರದಿಯನ್ನು ಶ್ರೀ ಮತಿ ಪ್ರೇಮಾ ಕುಂಬಾರ ಅಧ್ಯಕ್ಷರು ಸಿದ್ದೇಶ್ವರ ಸಾಹಿತ್ಯ ವೇದಿಕೆ ತಾಲೂಕ ಘಟಕ ಹುಕ್ಕೇರಿ ಇವರು ನೀಡಿದರು.

 

Don`t copy text!