ಕನ್ನಡ ನಾಡನ್ನು ರಕ್ಷಿಸುವುದು ನಮ್ಮೇಲ್ಲರ ಹೊಣೆ -ಕಟ್ಟಿಮನಿ

e-ಸುದ್ದಿ ಮಸ್ಕಿ

ಶ್ರೀಮಂತ ಪರಂಪರೆಯನ್ನು ಹೊಂದಿರುವ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕøತಿ ಸಾಹಿತ್ಯವನ್ನು ರಕ್ಷಿಸುವುದು ನಮ್ಮೇಲ್ಲರ ಹೊಣೆ ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿದರು.
ಪಟ್ಟಣದ ಕೇಂದ್ರ ಶಾಲೆಯ ಆವರಣದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ವಿವಿಧ ಕಾರಣಗಳಿಂದ ಹರಿದು ಹಂಚಿ ಹೋಗಿದ್ದ ಪ್ರದೇಶಗಳನ್ನು ಬಾಷಾ ಪುನರ್ ವಿಂಗಡಣೆಯ ಆಧಾರದ ಮೇಲೆ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಾಪಂ ಅಧ್ಯಕ್ಷ ಶಿವಣ್ಣ ನಾಯಕ, ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ಬಸನಗೌಡ ಪೊಲೀಸ್ ಪಾಟೀಲ್, ಪಂಪಾಪತಿ ಹೂವಿಬಾವಿ, ಸಿಪಿಐ ದೀಪಕ್ ಬೂಸರಡ್ಡಿ, ಬಸ್ಸಪ್ಪ ಬ್ಯಾಳಿ, ಘನಮಠದಯ್ಯ ಸಾಲಿಮಠ, ಪುರಸಭೆ ಸದಸ್ಯೆ ರೇಣುಕಾ ಉಪ್ಪಾರ, ಸೂಗಣ್ಣ ಬಾಳೆಕಾಯಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ವಿವಿಧಡೆ ಆಚರಣೆ: ಪಟ್ಟಣದ ಗಾಂಧಿನಗರದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೇಟ್ಟಿ ಬಣದ ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ಅಶೋಕ ಮುರಾರಿ, ಕೇಂದ್ರ ಶಾಲೆಯ ಮುಂಭಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ದುರ್ಗರಾಜ್ ವಟಗಲ್, ಅಶೋಕ ವೃತ್ತದ ಹತ್ತಿರ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಉದ್ಬಾಳ, ಕವಿತಾಳ ಕ್ರಾಸ್ ಬಳಿ ಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಯಮನೂರು ಒಡೆಯರ್ ದ್ವಜಾರೋಹಣ ನೇರವೇರಿಸಿದರು.
ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಶಾಲ ಕಾಲೇಜುಗಳಲ್ಲಿ ಸರಳ ರೀತಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಿದರು.

Don`t copy text!