ಮುದಗಲ್ ಕೋಟೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಹಾಯಕ ಆಯುಕ್ತ ರಾಹುಲ್ ಸಂಕನೂರ.
e-ಸುದ್ದಿ ಲಿಂಗಸುಗೂರು
ಲಿಂಗಸುಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದ ಕೋಟೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಲಿಂಗಸುಗೂರು ಸಹಾಯಕ ಆಯುಕ್ತ ರಾಹುಲ್ ಸಂಕನೂರು ಚಾಲನೆ ನೀಡಿದರು.
ಈ ಕೋಟೆಯನ್ನು ಸಂಘ ಸಂಸ್ಥೆಗಳ ಮೂಲಕ ಸ್ವಚ್ಛತೆಗೆ ಅನುಮತಿ ನೀಡಿದ್ದು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಮಾಡಲು ಸರಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಸಹಾಯಕ ಆಯುಕ್ತ ರಾಹುಲ್ ಸಂಕನೂರು ಕಾರ್ಯಕ್ರಮವನ್ನು ಉದ್ದೇಶಿಸಿ ಹೇಳಿದರು.
ನಂತರ ಮಾಜಿ ಪುರಸಭೆ ಅಧ್ಯಕ್ಷ ಅಶೋಕಗೌಡ ಪಾಟೀಲ್ ಮಾತನಾಡಿ ಈ ಕೋಟೆಯ ಬಗ್ಗೆ ಪ್ರತಿಯೊಬ್ಬರ ಕಾಳಜಿಯು ಅತ್ಯಗತ್ಯ ಇದು ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕು, ಸಾರ್ವಜನಿಕರು ಸ್ವಚ್ಛತೆಗೆ ಮೋದಲ ಆದ್ಯತೆ ನೀಡಬೇಕು, ಮುಂದಿನ ದಿನಗಳಲ್ಲಿ ಮುದಗಲ್ ಕೋಟೆ ಉತ್ಸವ ಮಾಡಲು ನಾವು ನೀವೆಲ್ಲರು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಹಾಯಕ ಆಯುಕ್ತರ ಸಹಕಾರದಿಂದ ಸಂಬಂಧಿಸಿದ ಇಲಾಖೆ, ಸಚಿವರೊಂದಿಗೆ ಶ್ರಮಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಬಸಪ್ಪ ಸಜ್ಜನ್, ಮೈಹಿಬೂಬಸಾಬ ಬಾರಿಗಿಡ, ಸದಸ್ಯ ಮೆಹಬೂಬಸಾಬ ಕಡ್ಡಿಪುಡಿ, ಅಮೀರ ಬೇಗ ಉಸ್ತಾದ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ. ನಯೀಮ್, ದಲಿತ ಪ್ಯಾಂಥರ ಘಟಕ ಅಧ್ಯಕ್ಷ ಕೃಷ್ಣ ಚಲುವಾದಿ ನಾಗರಾಜ ತಳವಾರ, ಶರಣಪ್ಪ ದೇಸಾಯಿ ಸೇರಿದಂತೆ ಮುಂತಾದವರು ಹಾಜರಿದ್ದರು.