ಸಿಗಡಿ ಮೀನು ಸಾಕಾಣಿಕೆಯಲ್ಲಿ ಖುಷಿ ಕಂಡ ಕೃಷಿಕ

ಸಿಗಡಿ ಮೀನು ಸಾಕಾಣಿಕೆಯಲ್ಲಿ ಖುಷಿ ಕಂಡ ಕೃಷಿಕ

e-ಸುದ್ದಿ ಲಿಂಗಸುಗೂರು

ತಾಲ್ಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ರಿಯಾಲ್ ಎಸ್ಟೇಟ್ ಉದ್ಯೆಮಿಯೊಬ್ಬರು ಆಧುನಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಕಡಿಮೆ ಬಂಡವಾಳ ಹೊಡಿ ಅಧಿಕ ಲಾಭ ಬರುವ ಸಿಗಡಿ ಮೀನು ಸಾಕಣೆಯಲ್ಲಿ ತೊಡಗಿಕೊಂಡಿದ್ದಾರೆ. ಮೀನುಗಾರಿಕೆ ಇಲಾಖೆಯ ಸಹಕಾರ ಹಾಗೂ ಸಹಯೋಗದೊಂದಿಗೆ ಸಿಗಡಿ ಮೀನು ಸಾಕಾಣಿಕೆ ಕೃಷಿ ಯಲ್ಲಿ ತೊಡಗಿದ್ದ ಆಧುನಿಕ ರೈತನಾದ ಚೆನ್ನಕುಮಾರ ಚಿಂಚೋಳಿ ಬಲಶೆಟ್ಟಿಹಾಳ ತಮ್ಮ ಜಮೀನದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಕುಮಾರ ಅಕ್ವಾ ಕಲ್ಚರ್ ಫಾರ್ಮ್ ಎಂಬ ಹೆಸರಲ್ಲಿ ಸಿಗಡಿ ಮೀನು ಸಾಕಾಣಿಕೆ ಮಾಡಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ. ಚೆನ್ನಕುಮಾರ ಇವರು ಮೂಲತಃ ಹುಣಿಸಿಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದವರು. ಓದಿದ್ದು 9ನೇ ತರಗತಿಯವರೆಗೆ . ಕಿರಾಣಿ ಅಂಗಡಿ, ರಸಗೊಬ್ಬರ ಮಾರಾಟ ಮಾಡುತ್ತಾ ರಾಜಕೀಯ ಮತ್ತು ರಿಯಲ್ ಎಸ್ಟೇಟ್ ಮಾಡುತ್ತ ಲಿಂಗಸುಗೂರು ತಾಲ್ಲೂಕಲ್ಲಿಯೇ ನೆಲೆಸಿದ್ದಾರೆ.ಹಲವು ವೃತ್ತಿಗಳಿಂದ ಬೇಸತ್ತು ಕೃಷಿಯತ್ತ ಮುಖ ಮಾಡಿದ ಅವರು ಸಿಗಡಿ ಮೀನು ಸಾಕಾಣಿಕೆ ಮಾಡಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಲಿಂಗಸುಗೂರ ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ದೂರದ ಚಿಕ್ಕ ಉಪ್ಪೇರಿಯಲ್ಲಿ ಸ್ವಂತ 15 ಎಕರೆ ಜಮೀನು ಪ್ರದೇಶದಲ್ಲಿ 2 ಹೊಂಡಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಪ್ರತಿ ಎಕರೆಗೆ 2 ಲಕ್ಷದಂತೆ 30 ಲಕ್ಷದಷ್ಟು ಒನಾಮಿ ತಳಿಯ ಸಿಗಡಿ ಮೀನಗಳನ್ನು ಬಿಟ್ಟಿದ್ದಾರೆ.
ಹೊಂಡದ ನೀರು ರಾಸಾಯನಿಕ, ಬ್ಯಾಕ್ಟಿರಿಯಾಗಳಿಂದ ಮುಕ್ತವಾಗಿರಬೇಕು. ನೀರಲ್ಲಿ ಮೀನು, ಉಭಯಚರಗಳು ಅಥವಾ ಇತರ ಜೀವಿಗಳು ಇರದಂತೆ ನೋಡಿಕೊಳ್ಳಬೇಕು. ಉಪ್ಪು, ಪೊಟ್ಯಾಷ್, ಬಂದಿದೆ. ಅಮೋನಿಯಮ್ ಸೇರಿದಂತೆ ಇತರ ನೀರಿನಂತ ವಾತಾವರಣ ಸೃಷ್ಟಿಸಬೇಕು. ಎಕರೆಗೆ ಹೊಂಡಗಳಲ್ಲಿ ಕನಿಷ್ಠ 5 ಅಡಿ ನೀರು ಇರುವಂತೆ ನೋಡಿಕೊಳ್ಳಬೇಕು.
ಮೀನಿನ ಪೌಷ್ಠಿಕ ಆಹಾರ, ಮೇಲಿಂದ ಮೇಲೆ ರೋಗಗಳು ಹರಡದಂತೆ ಔಷದೋಪಚಾರ ಮಾಡಲು ಖಾಸಗಿ ವೈದ್ಯರು, ಸಲಹೆಗಾರರ ನಿಯೋಜನ ಮಾಡಿಕೊಂಡಿದ್ದು, ಆರಂಭದಲ್ಲಿ ಎಕರೆಗೆ ಅಂದಾಜು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಹಲವಾರು ಅನುಭವಿ ಸಾಕಾಣಿಕೆ ದಾರದಿಂದ ಮಾಹಿತಿ ಪಡೆದು ಸಿಗಡಿ ಮೀನು ಕೃಷಿ ಮಾಡುತ್ತಿರುವ ಇವರು ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದು ಸಿಗಡಿ ಮೀನು ಕೃಷಿಯಲ್ಲಿ ಅಧಿಕ ಲಾಭ ಬರುವ 7 ಟನ್ ಸಿಗಡಿ ಮೀನು ಬರುವ ನಿರೀಕ್ಷೆಯಲ್ಲಿದ್ದಾರೆ.

ಪ್ರತಿ ಕೆ.ಜಿ ಗೆ ಮಾರುಕಟ್ಟೆಯಲ್ಲಿ 250 ರಂತೆ ಮಾರಾಟ ಮಾಡಿತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಇದು
ಉತ್ತಮ ಎನ್ನಿಸುತ್ತಿದೆ ಎಂದು ಕೃಷಿಕ ಚೆನ್ನಕುಮಾರ ಚಿಂಚೋಳಿ ತಮ್ಮ ಅನುಭವ ಹಂಚಿಕೊಂಡರು.
ಮೀನುಗಾರಿಕೆ ಇಲಾಖೆ ನಿರ್ದೇಶಕ ಶರಣಬಸವ ಮಾತನಾಡಿ, ‘ಜಿಲ್ಲೆಯಲ್ಲಿ ಅಂದಾಜು 2500 ಹೆಕ್ಟೇರ್ ಪ್ರದೇಶದಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಲಾಗಿದೆ. ಲಿಂಗಸುಗೂರು ತಾಲ್ಲೂಕಿ ಉತ್ತಮ ನಿರ್ವಹಣೆ ಮಾಡಿಕೊಂಡಿದ್ದು ಲಾಭದಾಯಕ ಹಂತದಲ್ಲಿದ್ದಾರೆ ಎಂದು ಹೇಳಿದರು.
ನೀರಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಇರುವುದರಿಂದ 3 ಎಕರೆ ಪ್ರದೇಶದಲ್ಲಿ ಐದು ವಸ್ತು ಬಳಸಿ ಸಮುದ್ರದ ಉಪ್ಪು ಆಗದಂತೆ ಏರೇಟರ್ ಅಳವಡಿಸಲಾಗಿದೆ. ಖಾಸಗಿ ಅನುಭವಿಗಳಿಂದ ಚೆನ್ನಕುಮಾರ ಸಿಗಡಿ ಮೀನು ಕೃಷಿ ಕನಿಷ್ಠ 7 ಟನ್ ಸಿಗಡಿ ಬೆಳೆ ನಿರೀಕ್ಷೆಯಲ್ಲಿದ್ದಾರೆ . ಸಿಗಡಿ ಮೀನು ಕೃಷಿಯಲ್ಲಿ ತಾಲ್ಲೂಕಿನ ಉಳಿದ ರೈತರು ಇವರ ಸಾಧನೆಯನ್ನು ಮೆಚ್ಚಿ ಇವರ ಹಾಗೆ ಆಧುನಿಕ ಕೃಷಿ ಪದ್ದತಿ ಅನುಸರಿಸಿ ಯಶಸ್ಸು ಕಾಣಲಿ.

Don`t copy text!