ಸರ್ವಜ್ಞ
ಎಲ್ಲ ಬಲ್ಲಾತ ನಿವನು ಸರ್ವಜ್ಞ
ತ್ರಿಪದಿ ಕವಿ ಸರ್ವಜ್ಞ
ಹದಿಹರೆಯದ 16 ಶತಮಾನ
ಪುಷ್ಪದತ್ತ ನಿಜನಾಮ
ಸರ್ವಜ್ಞನೆಂಬ ಕಾವ್ಯನಾಮ
ಪಸರಿಸಿತು ಭೂಮಂಡಲ
ಜ್ಞಾನದ ಹೊತ್ತಿಗೆ ಅನುದಿನ
ಅಂಬಲೂರು ಮಾಸೂರು
ರಟ್ಟಹಳ್ಳಿ ತಾಲೂಕು
ವಾಸ್ತವವಾದಿ ಕವಿ
ತತ್ವಜ್ಞಾನಿ ವಿರಾಗಿ
ಹೆತ್ತಮ್ಮ ಕುಂಬಾರ ಮಾಳಿ
ಮಲ್ಲಕ್ಕ ಸಾಕು ತಾಯಿ
ತಂದೆ ಬಸವರಸ ಬ್ರಾಹ್ಮಣ
ಮಕ್ಕಳಾಗದ ಮಲ್ಲಮ್ಮ
ಪುತ್ರ ಸಂತಾನಕ್ಕೆ ಕಾಶಿ ಪಯಣ
ಕನಸಿನಲ್ಲಿ ಪ್ರತ್ಯಕ್ಷ
ಬಸವರಸನಿಗೆ ಶಿವ
ಪುತ್ರಪ್ರಾಪ್ತಿ ನನ್ನ ಪ್ರಸಾದ
ಹಗಲಿರುಳು ಆಯಾಸ
ಪ್ರಯಾಸ ಮಳೆ -ಸಿಡಿಲು
ಅಂಬಲೂರಿನ ಕುಂಬಾರ ಸಾಲಿ
ಕುಂಬಾರ ಮಾಳಿಯಲಿ ವ್ಯಾಮೋಹ
ಹೆತ್ತು ಕೊಟ್ಟಳು
ಪುಷ್ಪದತ್ತ
ತಂದೆತಾಯಿಗಳ ಅಗಲಿಕೆಯಲಿ
ಪುಷ್ಪದತ್ತ
ಭೇಟಿ ಇತ್ತನು ಪುಣ್ಯಕ್ಷೇತ್ರ
ಗುರು-ಮಠ
ರಚಿಸಿದ ತ್ರಿಪದಿ
ಆಗಾಧ ಸ್ಮೃತಿ ಪಟಲ
ಉಳಿದಿರಬಹುದು
ಎಪ್ಪತ್ತುಸಾವಿರದ ಎಪ್ಪತ್ತು
ತಜ್ಞರ ಅಭಿಮತ
ಜಗತ್ತಿಗೆ ಆದನು ಸರ್ವಜ್ಞ
ಅಗಾಧ ಪಾಂಡಿತ್ಯ ಪುರುಷ
ಪಾವನ ನಮ್ಮ ಭೂಮಂಡಲ
ಜ್ಞಾನ ವಿತ್ತ ಕವಿಗೆ
ಫೆಬ್ರುವರಿ ಇಪ್ಪತ್ತು
ಜನುಮ ದಿನದ ನನ್ನ
ಶುಭ…ನಮನ
–ಪ್ರೊ .ಸಾವಿತ್ರಿ ಕಮಲಾಪೂರ
ಮೂಡಲಗಿ