ಹುಟ್ಟು ಗುಣ ಸುಟ್ಟರೂ ಹೋಗೋಲ್ಲ

ಸುವಿಚಾರ

“ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಅನ್ನೋದು ಗಾದೆ, ಪರಿಸ್ಥಿತಿ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಬರುತ್ತದೆ “

ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ ಎಂತಲೂ ಗಾದೆ ಇದೆ. ಸಣ್ಣ ವಯಸ್ಸಿನಿಂದ ಬಂದ ಅಭ್ಯಾಸ ಬುದ್ಧಿ ಬದುಕಿರುವವರೆಗೂ ಇರುವುದು ಸಹಜ. ನಮ್ಮ ವ್ಯಕ್ತಿತ್ವದ ಪರಿಚಯ ಮಾಡುವುದು ನಮ್ಮ ಬುದ್ಧಿ ಮತ್ತು ನಮ್ಮ ನಡವಳಿಕೆ. ಆದರೆ ಅದು ಬದುಕಿರುವವರೆಗೂ ಇರಲೇ ಬೇಕೆಂಬ ನಿಯಮವಿಲ್ಲ. ಹೇಗೆ ಸಮಯ ಸಂದರ್ಭದಲ್ಲಿ ಅವಶ್ಯಕತೆ ಇರುತ್ತದೋ ಆ ರೀತಿ ಬದುಕಿನಲ್ಲಿ ಬದಲಾಗಿ ನಡೆಯುತ್ತೇವೆ, ಇದು ಜೀವನದ ಅನಿವಾರ್ಯತೆ.

ನಮ್ಮಲ್ಲಿರುವ ಕೆಟ್ಟ ಅಥವಾ ಹಾನಿಕಾರಕ ಗುಣಗಳನ್ನು ಬದಲಾವಣೆ ಮಾಡಿ ಕೊಳ್ಳುವುದರಲ್ಲಿ ಯಾವ ತಪ್ಪು ಇಲ್ಲ.

ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವ ಒಳ್ಳೆ ಗುಣಗಳನ್ನು ಅಳವಡಿಸಿ ಕೊಂಡು ಉತ್ತಮರಾಗೋಣ

ಶುಭ ಆದಿತ್ಯವಾರ

ಮಾಧುರಿ, ಬೆಂಗಳೂರು

Don`t copy text!