ಜನಪದ ರಂಗಭೂಮಿಯ ಪುನರುತ್ಥಾನದ ಚಿಂತನೆಗಳು”
e-ಸುದ್ದಿ, ಬಾಗಲಕೋಟೆ
ಬಾಗಲಕೋಟೆ ತಾಲೂಕು ಬೇವೂರು ಗ್ರಾಮದ ಪ್ರಖ್ಯಾತ ರಂಗಭೂಮಿ ಮತ್ತು ಜಾನಪದ ಕಲಾವಿದರಾದ ಶ್ರೀ ಶ್ರೀಕಾಂತ ಬಿಲಕೇರಿಯವರ ಸಾರಥ್ಯದಲ್ಲಿ ಮೂಡಿ ಬರುವ “ಎಲ್ಲ ಕಲಾವಿದರು Facebook Live” ಕಾರ್ಯಕ್ರಮದಲ್ಲಿ “ಜನಪದ ರಂಗಭೂಮಿಯ ಪುನರುತ್ಥಾನದ ಚಿಂತನೆಗಳು” ಎನ್ನುವ ವಿಷಯದ ಮೇಲೆ 4 ದಿನಗಳ ಕಾಲ ವಿಜಯಕುಮಾರ ಕಮ್ಮಾರ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಪಾಲ್ಗೊಂಡು ಸಂವಾದಿಸಬಹುದು.
ದಿನಾಂಕ:
21.02.2022-ಸೋಮವಾರ
22.02.2022-ಮಂಗಳವಾರ
23.02.2022-ಬುಧವಾರ
24.02.2022-ಗುರುವಾರ
ಸಮಯ:
ಸಾಯಂಕಾಲ 5:55 ಘಂಟೆಯಿಂದ 6:55 ರ ವರೆಗೆ.
ಕಲಾಭಿಮಾನಿಗಳು ಮತ್ತು ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.