ಮಹಿಳೆ
ಮಮತೆಯ ಮೂರುತಿ
ಇವಳು
ಸಹನೆಯ ಸಾರಥಿ
ಇವಳೇ.
ಇದ್ದರೆ ಮಹಿಳೆ
ಸಮಾಜಕ್ಕೊಂದು,
ದೂಶಿಸದಿರಿ ಅವಳನ್ನು
ಎನ್ನುತ ” ಅಬಲೆ “.
ತರುತ ಸಂತೋಷದ
ಮಳೆ
ಹರಸುವಳು ಇವಳು
ಹರುಷದ ಹೊಳೆ.
ಅವಳಲ್ಲ ಸಮಾಜಕ್ಕೆ
ಕಪ್ಪು ಕಲೆ
ಅವಳಿಂದಲೇ ಜೀವನಕ್ಕೊಂದು
ಹೊಸ ಕಳೆ.
ಅಸೂಯೆ ಪಡದಿರು
ಓ ಇರುಳೇ
ಕಂಡು ಅವಳ
ಯಶಸ್ಸಿನ ಪ್ರಜ್ವಲತೆಯ ಜ್ವಾಲೆ.
ಸಾಧಿಸುತ್ತ ಮೇಲುಗೈ
ಎಲ್ಲ ಕ್ಷೇತ್ರದಲ್ಲಿ
ಮೊಳಗುತಿಹಳು
ವಿಜಯದ ಕಹಳೆ.
ಅರಿತಿರುವಳು
ಸಂಸಾರ ತೂಗಿಸುವ ಕಲೆ
ಅವಳಿದ್ದ ಬಾಳೆ
ಅದು ಹೊಂಬಾಳೆ….
– ಡಾ. ನಂದಾ ಬೆಂಗಳೂರು