ಅಲ್ಲ ನಾ ಶಿಲಾಬಾಲಿಕೆ
ಅಲ್ಲ ನಾ ಶಿಲಾಬಾಲಿಕೆ
ಕಲ್ಲ ಮಾಡದಿರಿ ನನ್ನ
ಅಲ್ಲ ನಾ ದೇವತೆ
ಪೂಜಿಸದಿರಿ ನನ್ನ
ಅಲ್ಲ ನಾ ಭೋಗದ ವಸ್ತು
ಬಂಧಿಸದಿರಿ ನನ್ನ
ಬಿಚ್ಚಿ ನೋಡಿ ಸಂಕೋಲೆಯ
ಕೆಚ್ಚು ಕಂಡು ಬಂದೀತು
ಅಲ್ಲ ನಾ ಚಿತ್ರ ಪಟ
ಕೂಡಿಸದಿರಿ ಸಿಂಗರಿಸಿ
ಬಂಗಾರದ ಒಡವೆ ಹಾಕಿ
ಬಿಟ್ಟು ನೋಡಿ ಹಂಗಿನಾಚೆ
ಅಲ್ಲ ನಾ ಅಬಲೆ
ಬೇಡ ನನಗೆ ಮೀಸಲ
ತೋರುವೆನೆನ್ನ ಬಲವ
ದಾರಿ ಬಿಡಿ ಸುಮ್ಮನೆ
ಅಲ್ಲ ನಾ ಮೂಕ ಮೂರ್ತಿ
ಆಗಬಲ್ಲೆ ಜಗಕೆ ಸ್ಫೂರ್ತಿ
ಧರಿಸಬಲ್ಲೆ ಕಾಳಿರೂಪ
ಕೆಣಕಬೇಡಿ ರತಿ ಎಂದು
ಅಲ್ಲ ನಾ ಹೆರಿಗೆ ಯಂತ್ರ
ಎಲ್ಲ ಬಲ್ಲೆ ಬದುಕ ಮಂತ್ರ
ಕೊಟ್ಟು ನೋಡಿ ಕೈಯ ಸೂತ್ರ
ತೆರೆದಿಡುವೆ ನನ್ನ ಪಾತ್ರ
– ಸುನಿತಾ ಮೂರಶಿಳ್ಳಿ, ಧಾರವಾಡ
9986437474