ಸಂಸ್ಕೃತಿ ಬಿತ್ತುವಲ್ಲಿ ಮಹಿಳೆ ಪಾತ್ರ ಅನನ್ಯ , ವೃದ್ದರನ್ನು ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು.-ಮಹಿಳಾ ಜಾಗೃತಿಕೇಂದ್ರ ಅಧ್ಯಕ್ಷೆ ಗೀತಾ ತೋರಿ.
e-ಸುದ್ದಿ ಅಥಣಿ
ಹಿರಿಯರ ಬಗ್ಗೆ ಇಂದಿನ ಯುವಜನಾಂಗದಲ್ಲಿ ಅಸಡ್ಡೆ ಎದ್ದು ಕಾಣುತ್ತಿದೆ. ಇದರಿಂದ ಹಿರಿಯ ಜೀವಿಗಳು ತುಂಬ ಆತಂಕ ತಲ್ಲಣದಲ್ಲಿರುವುದು ಕಂಡು ಬರುತ್ತಿದೆ. ತಂದೆ-ತಾಯಿಯರನ್ನು ಗೌರವಿಸುವ ಸಂಪ್ರದಾಯವನ್ನು ಚಿಕ್ಕಂದಿನಿಂದಲೆ ಮಕ್ಕಳಲ್ಲಿ ಬೆಳೆಯಿಸಿದ್ದೆ ಆದರೆ, ಮುಂದೆ ತಂದೆತಾಯಿಗಳು ತಮ್ಮ ವೃದ್ದಾಪ್ಯದಲ್ಲಿ ಶಾಂತಿ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾವುದು. ಕುಟುಂಬದ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುವ ಮಹಿಳೆಯರು ಸಂಸ್ಕೃತಿಯನ್ನು ಬೆಳೆಸುವ ವಾಹಕರು . ಉತ್ತಮ ಸಂಸ್ಕೃತಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಅಥಣಿಯ ಮಹಿಳಾ ಜಾಗೃತಿ ಕೇಂದ್ರದ ಅಧ್ಯಕ್ಷೆ ಗೀತಾ ತೋರಿ ನುಡಿದರು.
ಅಥಣಿಯ ಮಹಿಳಾ ಜಾಗೃತಿ ಕೇಂದ್ರದವರು ವಿಜಯಪೂರದ ಶ್ರೀ ಸಿದ್ದೇಶ್ವರ ವಿದ್ಯಾಪೀಠ (ರಿ) ತಾಳಿಕೋಟಿಯ ಶ್ರೀ ಸಿದ್ದೇಶ್ವರ ವಿಶ್ರಾಂತಿ ವೃದ್ದಾಶ್ರಮದಲ್ಲಿ `ವಿಶ್ವ ಮಹಿಳಾ ದಿನಾಚರಣೆ’ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳಾ ದಿನಾಚರಣೆಯನ್ನು ವಿದಾಯಕವಾಗಿ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಿಂದ ವಿಜಯಪೂರ ಜಿಲ್ಲೆಗೆ ಈ ಬಾರಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾಗಿ ಹೇಳಿದರು.
ಇನ್ನೋರ್ವ ಅತಿಥಿಗಳಾಗಿ ರಾಷ್ಟೀಯ ಯುವ ಪ್ರಶಸ್ತಿ ಭೂಷಿತೆ ವಿಶಾಲಾಕ್ಷಿ ಅಂಬಿ ಅವರು ಆಗಮಿಸಿ ಮಾತನಾಡಿ, ವಯಸ್ಸಾದ ಮೇಲೆ ಹಿರಿಯ ಜೀವಿಗಳಿಗೆ ಐಶಾರಾಮಿ ವಸ್ತುಗಳ, ಬದುಕಿನ ಆಶಯವಿರುವುದಿಲ್ಲ. ತಮ್ಮೊಂದಿಗೆ ಮಾತನಾಡುವ ಒಡನಾಡಿಗಳು, ಶಾಂತಿ, ನೆಮ್ಮದಿ ಬೇಕಾಗಿರುತ್ತದೆ ಅದು ಇಂದಿನ ದಿನಗಳಲ್ಲಿ ಮರೀಚಿಕೆಯಾಗುತ್ತಿದೆ. ಅಂತಹದರಲ್ಲಿ ಇಂಥಹ ವೃದ್ಧಾಶ್ರಮಗಳನ್ನು ಹುಟ್ಟುಹಾಕಿ ಸ್ವಂತಮನೆಯವರಂತೆ ನಡೆಸುವ ಕಾರ್ಯ ಶ್ಲಾಘನೀಯವೆಂದರು.
ಶ್ರೀ ಸಿದ್ದೇಶ್ವರ ವಿಶ್ರಾಂತಿ ವೃದ್ದಾಶ್ರಮದ ಕೌನ್ಸಿಲರ್ ಡಾ.ರುದ್ರಾಂಬಿಕಾ ಬಿರಾದರ ಮಾತನಾಡಿ ಮಹಿಳೆಯನ್ನು ಪೂಜಿಸುವ ನಾಡಿನಲ್ಲಿ ಆಕೆಯ ಶೋಷಣೆ ಇಂದೂ ಕೂಡ ನಿಂತಿಲ್ಲದಿರುವುದು ಶೋಚನೀಯ. ಗಾಂಧೀಜಿ ಕಂಡ ಕನಸಿನಮತೆ ಮಧ್ಯರಾತ್ರಿಯಲ್ಲಿ ನಮ್ಮ ದೇಶದ ಮಹಿಳೆ ಒಬ್ಬಂಟಿಯಗಿ ನಿರ್ಭಿತಿಯಿಂದ ಹೊರಗಡೆ ತಿರುಗಾಡಿದರೆ ಆವಾಗ ನಿಜವಾದ ಸ್ವಾತಂತ್ರö್ಯ ಸಿಕಂತೆ ಎಂಬುದು ಸಾಕಾರವಾಗುವ ಕ್ಷಣಗಳಿಗೆ ಹಾತೊರೆಯುತ್ತಿದ್ದೆವೆ ಎಂದರು.
ಅಧ್ಯಕ್ಷತೆಯನ್ನು ಸಂಸ್ಥಾಪಕಿ ಶ್ರೀಮತಿ ಅನ್ನಪೂರ್ಣ ಬಿರಾದರ ಅವರು ವಹಿಸಿ, ವೃದ್ದಾಶ್ರಮ ನಡೆಯಿಸಿಕೊಂಡು ಹೋಗುವುದು ಸುಲಭದ ಮಾತಲ್ಲ, ಅನೇಕ ಸವಾಲುಗಳಿವೆ ಆದರೆ ಅವರು ನಮ್ಮ ತಂದೆತಾಯಿಗಳಂತೆ ಎಂದು ಮನದಲ್ಲಿ ಒಪ್ಪಿಕೊಂಡರೆ ಕಾರ್ಯನಿರ್ವಹಿಸಲು ಸುಲಭವಾಗುತ್ತದೆ. ಅಥಣಿಯಿಂದ ಇಷ್ಟು ದೂರ ಆಗಮಿಸಿ ನಮ್ಮ ವೃದ್ಧಾಶ್ರಮದಲ್ಲಿ ಸಂತೋಷ ಇಮ್ಮಡಿಗೊಳಿಸುವ ಕಾರ್ಯ ಮಾಡಿದ ಮಹಿಳಾ ಜಾಗೃತಿ ಕೇಂದ್ರದ ಸೇವೆಯನ್ನು ಶ್ಲಾಘಿಸಿದರು.
ಸಾಹಿತಿ ರೋಹಿಣಿ ಯಾದವಾಡ ಪ್ರಾಸ್ತಾವಿಕ ಮಾತನಾಡುತ್ತ ವೃದ್ದಾಶ್ರಮದಲ್ಲಿ ಉಳಿದುಕೊಂಡಿದ್ದೆವೆ ಎಂಬ ನಕಾರಾತ್ಮಕ ಭಾವ ತೊಡೆದುಹಾಕಿ, ಸುಂದರವಾದ ಪರಿಸರದಲ್ಲಿ ತಮ್ಮಂತೆ ಇರುವ ಇನ್ನಿತರೊಂದಿಗೆ ಸುಖವಾಗಿ ಕಾಲಕಳೆಯುವ ವಾತಾವರಣದಲ್ಲಿರುವ ನಾವು ನಿಜಸುಖಿಗಳೆಂಬ ಸಕಾರಾತ್ಮಕ ಭಾವದಿಂದ ಇದ್ದರೆ ವೃದ್ದಾಪ್ಯ ಗೆದ್ದಂತೆ ಎಂಬ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ಜಾಗೃತಿ ಕೇಂದ್ರದ ಸದಸ್ಯರಾದ ಅರ್ಚನಾ ಭೂಸನೂರ, ಶ್ವೇತಾ ಅಣೆಪ್ಪನವರ, ಸುಧಾ ಇವರಿಂದ ಗಾಯನವಾಯಿತು. ಭಾರತಿ ಕೋರೆ, ಶುಭಾಂಗಿ ಪಾಟೀಲ ಮಹಿಳಾ ದಿನಾಚರಣೆಯ ಔಚಿತ್ಯ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ವೃದ್ದಾಶ್ರಮದ ಸಿಬ್ಬಂದಿಗಳಾದ ರುಕ್ಸಾನಾ, ಅನುಷಾ, ರಾಖೇಶ ಹೆಗಡ್ಯಾಳ, ಭಿಮನಗೌಡ ಪಾಟೀಲ, ಮುತ್ತು ದೇಸಾಯಿ ಉಪಸ್ಥಿತರಿದ್ದರು. ಮಹಿಳಾ ಜಾಗೃತಿ ಕೇಂದ್ರದಿAದ ಬಟ್ಟೆ, ಸಿಹಿ ಹಂಚಲಾಯಿತು. ವೃದ್ದರಾದ ಈಶ್ವರ ನುಚ್ಚಿನವರ ಪ್ರಾರ್ಥನೆ ಹಾಡಿದರು. ಜಯಶ್ರೀ ಪೂಜಾರಿ ವಂದಿಸಿದರು. ಇಂದಿನ ಮಹಿಳಾ ದಿನಾಚರಣೆ ಬದುಕಿನ ಅವಿಸ್ಮರಣಿಯ ಸಂಗತಿ ಎಂದು ಎಲ್ಲರೂ ಸಂತಸ ವ್ಯಕ್ತಪಡಿಸಿದರು.